Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ವಾಸವಿ ಮಹಿಳಾ ಸಂಘದ ಕ್ಯಾಲೆಂಡರ್ ಲೋಕಾರ್ಪಣೆ

08:28 PM Apr 12, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ : ಸನಾತನ ಹಿಂದೂ ಧರ್ಮದ ಸಂಪ್ರದಾಯದಲ್ಲಿ ಯುಗಾದಿ ಹಬ್ಬ ವರ್ಷದ ಮೊದಲ ಹಬ್ಬ ದಿನವೇ ಈ ಕ್ಯಾಲೆಂಡರ್ ಬಿಡುಗಡೆಯಾಗಿರುವುದು ಆಯಾಯಾ ದಿನಗಳಲ್ಲಿ ಬರುವ ವಿಶೇಷ ದಿನಗಳ ಆಚರಣೆಗೆ ಇದು ಸಹಾಯಕವಾಗಿದೆ ಎಂದು ಶ್ರೀಮತಿ ನಾಗರತ್ನ ಬದರಿನಾಥ್‍ ಹೇಳಿದರು.

Advertisement

ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ದಿನಾಂಕ ಬುಧವಾರ ಕ್ಯಾಲೆಂಡರ್ ಲೋಕಾರ್ಪಣೆ ಮಾಡಿ ಮಾತನಾಡಿ ಅವರು ಮಾತನಾಡಿದರು.

ಪ್ರತಿ ಮಾಸದಲ್ಲಿ ಆಚರಿಸುವ ಹಬ್ಬ ಹರಿದಿನಗಳು ಮತ್ತು ವಿಶೇಷ ದಿನಗಳ ಕಾರ್ಯಕ್ರಮಗಳ ಕೈಗನ್ನಡಿಯಂತೆ ವಾಸವಿ ಮಹಿಳಾ ಸಂಘದವರು ಪ್ರಕಟಿಸಿರುವ ಈ ಕ್ಯಾಲೆಂಡರ್ ವೈಶಿಷ್ಟ್ಯಪೂರ್ಣವಾಗಿದೆ. ಆರ್ಯವೈಶ್ಯ ಸಮುದಾಯದ ಹಲವಾರು ಸಂಘ ಸಂಸ್ಥೆಗಳು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಕ್ರಮಬದ್ಧವಾಗಿ ಆಚರಿಸುತ್ತಾ ಬಂದಿರುವುದು ಚಿತ್ರದುರ್ಗದಲ್ಲಿ ವಿಶೇಷವೆನಿಸಿದೆ ಎಂದರು.

Advertisement

ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಟಿ. ಬದರಿನಾಥ್ ಅವರು
ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಲು ಪ್ರಯತ್ನಿಸಬೇಕೆಂದು ಜಾಗೃತಿ ಮೂಡಿಸಿದರು.
ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ನಂಬಿಕೆಗಳು ಕುಂಠಿತವಾಗುತ್ತಿರುವುದು ವಿಶಾದನೀಯ ಸಂಗತಿ. ನಮ್ಮ ಶಾರೀರಿಕ ಹಾಗೂ ಬೌಧಿಕ ವಿಕಾಸಕ್ಕೆ ದೇವತಾರ್ಚನೆ ಮೊದಲಾದ ಧಾರ್ಮಿಕ ನಂಬಿಕೆಗಳು, ಶಕ್ತಿ ನೀಡುತ್ತವೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಾಸವಿ ಮಹಿಳಾ ಸಂಘದ ಅಧ್ಯಕ್ಷಿಣಿ ಸುಮಾ ಅನಂತ್‍ರವರು ಮಾತನಾಡಿ, ಈ ಕ್ಯಾಲೆಂಡರ್ ಪ್ರಾಯೋಜಕತ್ವವನ್ನು ಪ್ರತಿ ವರ್ಷವೂ ವಹಿಸಿಕೊಂಡು ಬರುತ್ತಿರುವ ಜ್ಞಾನದೀಪ ವಿದ್ಯಾ ಮಂದಿರದ ಮುಖ್ಯಸ್ಥರಾದ ಶ್ರೀಮತಿ ನಾಗರತ್ನ ಬದರಿನಾಥ್ ಅವರನ್ನು ಸನ್ಮಾನಿಸಿ ಧಾರ್ಮಿಕ ಸಂಪ್ರದಾಯ ಆರ್ಯವೈಶ್ಯರಲ್ಲಿ ಸದಾ ಕಾಲ ಜಾಗೃತವಾಗಿ ಇರುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಆರ್ಯವೈಶ್ಯ ಸಂಘದ ಉಪಾಧ್ಯಕ್ಷರಾದ ಎಂ.ವಿ. ಮಂಜುನಾಥ್, ಎಂ.ಆರ್. ಅರುಣ್‍ಕುಮಾರ್, ಟಿ.ಎಸ್. ಸುಹಾಸ್ ಹಾಗೂ ವಾಸವಿ ಮಹಿಳಾ ಸಂಘದ ಕಾರ್ಯದರ್ಶಿ, ಲಕ್ಷ್ಮಿ ರಮಾಕಾಂತ್ ಉಪಸ್ಥಿತರಿದ್ದರು.  ಈ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಸಮುದಾಯದ ಎಲ್ಲಾ ಸಹ ಸಂಸ್ಥೆಯವರು ಭಾಗವಹಿಸಿದ್ದರು. ಎಂದಿನಂತೆ ಕನ್ಯಕಾಪರಮೇಶ್ವರಿ ದೇವಿ ಸಹಿತ ವಿವಿಧ ದೇವತೆಯರಿಗೆ ಅಷ್ಠಾವಧಾನ ಸಹಿತವಾಗಿ ಪೂಜೆಗಳು ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ವಿದಿವತ್ತಾಗಿ ನಡೆಯಿತು.

Advertisement
Tags :
bengaluruCalendarCalendar inaugurationchitradurgainaugurationsuddionesuddione newsVasavi Mahila Sanghಕ್ಯಾಲೆಂಡರ್ಕ್ಯಾಲೆಂಡರ್ ಲೋಕಾರ್ಪಣೆಚಿತ್ರದುರ್ಗಬೆಂಗಳೂರುಲೋಕಾರ್ಪಣೆವಾಸವಿ ಮಹಿಳಾ ಸಂಘಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article