ಚಿತ್ರದುರ್ಗ | ಜಿಲ್ಲಾ ನೌಕರರ ಸಂಘದ ಅಧ್ಯಕ್ಷ, ಖಜಾಂಚಿ ಸ್ಥಾನಕ್ಕೆ ಅವಿರೋಧ ಆಯ್ಕೆ
08:15 PM Nov 29, 2024 IST
|
suddionenews
Advertisement
Advertisement
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 29 : ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕಂದಾಯ ಇಲಾಖೆಯ ಮಹಾಂತೇಶ್ ಮುದ್ದಜ್ಜಿ, ಖಜಾಂಚಿ ಸ್ಥಾನಕ್ಕೆ ಸೀಬಾರ ಶಾಲೆಯ ಶಿಕ್ಷಕ ಎ.ಮಹಾಂತೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Advertisement
ಅಧ್ಯಕ್ಷ ಸ್ಥಾನಕ್ಕೆ ಆರು, ಖಜಾಂಚಿ ಸ್ಥಾನಕ್ಕೆ ನಾಲ್ವರು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಅವಿರೋಧ ಆಯ್ಕೆ ಸುಗಮಗೊಳಿಸುವ ಸಲುವಾಗಿ ಇತರ ಆಕಾಂಕ್ಷಿಗಳು ನಾಮಪತ್ರ ಹಿಂಪಡೆದಿದ್ದರಿಂದ ಚುನಾವಣಾಧಿಕಾರಿ ಡಿ.ಟಿ.ಜಗನ್ನಾಥ್ ಅವಿರೋಧ ಆಯ್ಕೆ ಪ್ರಕಟಿಸಿದರು. ರಾಜ್ಯ ಸಂಘದ ಸದಸ್ಯ ಒಂದು ಸ್ಥಾನಕ್ಕೆ ಎಸ್.ರಾಜಪ್ಪ, ರಾಜೇಂದ್ರ ಚಕ್ರವರ್ತಿ ಕಣದಲ್ಲಿದ್ದು ಡಿ.4ರಂದು ಚುನಾವಣೆ ನಡೆಯಲಿದೆ.
Advertisement
Next Article