Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಬಸ್ ಪಲ್ಟಿ ಮೂವರು ಸಾವು, 33 ಮಂದಿಗೆ ಗಾಯ

07:50 AM Apr 07, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಏ.07: ಖಾಸಗಿ ಬಸ್​​​ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ ನಂ. 369 ರಲ್ಲಿ ಇಂದು (ಭಾನುವಾರ) ಬೆಳಿಗ್ಗೆ 4 ಗಂಟೆ ಸುಮಾರಿಗೆ ನಡೆದಿದೆ.

ಬೆಂಗಳೂರಿನಿಂದ ಚಿತ್ರದುರ್ಗ, ಹೊಳಲ್ಕೆರೆ, ಶಿವಮೊಗ್ಗ ಮಾರ್ಗವಾಗಿ ಗೋಕರ್ಣಕ್ಕೆ ಹೊರಟಿದ್ದ ಬಸ್ ಹೊಳಲ್ಕೆರೆಯಿಂದ ಎರಡು ಕಿ.ಮೀ. ಸಮೀಪದ ಕಣಿವೆ ಪ್ರದೇಶದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದೆ.

Advertisement

ಮೃತರ ಗುರುತು ಪತ್ತೆಯಾಗಿಲ್ಲ. ಬಸ್‌ನಲ್ಲಿ 36 ಜನರು ಪ್ರಯಾಣಿಸುತ್ತಿದ್ದರು. 33 ಜನರು ಗಾಯಾಗೊಂಡಿದ್ದು,  18 ಮಂದಿ ಚಿತ್ರದುರ್ಗ ಜಿಲ್ಲಾ ಆ್ಪತ್ರೆಗೆ, 6 ಮಂದಿ ದಾವಣಗೆರೆಗೆ ಮತ್ತು 9 ಮಂದಿಯನ್ನು ಶಿವಮೊಗ್ಗ  ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸ್ಥಳಕ್ಕೆ ಹೊಳಲ್ಕೆರೆ ಪೊಲೀಸ್ ಠಾಣೆಯ ಪಿಎಸ್ ಐ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆ‌ಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
bengaluruBuschitradurgaholalkereinjuredkilledoverturnsuddionesuddione newsThreeಗಾಯಚಿತ್ರದುರ್ಗಬಸ್ ಪಲ್ಟಿಬೆಂಗಳೂರುಮೂವರು ಸಾವುಸುದ್ದಿಒನ್ಸುದ್ದಿಒನ್ ನ್ಯೂಸ್ಹೊಳಲ್ಕೆರೆ
Advertisement
Next Article