Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಬಿಸಿಲಾಘತಕ್ಕೂ ಕುಗ್ಗದ ಮತದಾನ, ಮಧ್ಯಾಹ್ನ 1 ಗಂಟೆವರೆಗೆ ಆದ ಶೇಕಡಾವಾರು ಮತದಾನ ಎಷ್ಟು ?

02:17 PM Apr 26, 2024 IST | suddionenews
Advertisement

ಚಿತ್ರದುರ್ಗ. ಏ.26: ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಇಂದು ಜರುಗಿದ ಮತದಾನದಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಶೇ 39.05.% ಮತದಾನ ಜರುಗಿದೆ. ಬಿಸಿಲಾಘತದ ನಡುವೆಯು ಕುಗ್ಗದೆ ಮತದಾರ ಪ್ರಭುಗಳು ಮತಗಟ್ಟೆ ಕಡೆಗೆ ಧಾವಿಸಿ ಬರುತ್ತಿದಾರೆ.

Advertisement

ವಿಧಾನ ಸಭಾ ಕ್ಷೇತ್ರವಾರು
ಚಳ್ಳಕೆರೆ- 39.94%,
ಚಿತ್ರದುರ್ಗ-40.21%,
ಹಿರಿಯೂರು-37.58%,
ಹೊಳಲ್ಕೆರೆ - 38.60%,
ಹೊಸದುರ್ಗ-36.21%,
ಮೊಳಕಾಲ್ಮೂರು- 44.28%,
ಪಾವಗಡ- 36.47%,
ಶಿರಾ-37.85% ಮತದಾನವಾಗಿದೆ.


ಸಹಾಯಕ ಮತಗಟ್ಟೆ ಅಧಿಕಾರಿ ನಿಧನ :
Advertisement

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಟ್ಟೆಪ್ಪನಹಳ್ಳಿ ಮತಗಟ್ಟೆಯಲ್ಲಿ ಸಹಾಯ ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿತ್ತಿದ್ದ ಶಿಕ್ಷಕಿ ಯಶೋಧಮ್ಮ(58) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮುಂಜಾನೆ ಮತದಾನ ಆರಂಭದ ವೇಳೆಯಲ್ಲಿ ಯಶೋಧಮ್ಮನವರಿಗೆ ರಕ್ತದೊತ್ತಡದಲ್ಲಿ ಉಂಟಾಗಿದೆ. ಸ್ಥಳ ಆಗಮಿಸಿದ ಸೆಕ್ಟರ್ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ವಾಹನದಲ್ಲಿ ಆಸ್ಪತ್ರೆ ಕರೆದೊಯ್ದಿದ್ದಾರೆ. ಆಸ್ಪತ್ರೆ ತಲಪುವ ವೇಳೆಗಾಗಲೇ ತೀವ್ರ ಹೃದಯಾಘಾತಕ್ಕೆ ಓಳಗಾದ್ದರಿಂದ ಯಶೋಧಮ್ಮ ಮೃತಪಟ್ಟಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಆನಂದ.ಬಿ ಮಾಹಿತಿ ನೀಡಿದ್ದಾರೆ

Advertisement
Tags :
bengaluruchitradurgasuddionesuddione newsಕುಗ್ಗದ ಮತದಾನಚಿತ್ರದುರ್ಗಬಿಸಿಲಾಘತಬೆಂಗಳೂರುಶೇಕಡಾವಾರು ಮತದಾನ ಎಷ್ಟುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article