For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಕೂಸಿನ ಮನೆ ತರಬೇತಿಗೆ ತಾ.ಪಂ. ಇಓ ವೈ.ರವಿಕುಮಾರ್ ಚಾಲನೆ

09:41 PM Dec 18, 2024 IST | suddionenews
ಚಿತ್ರದುರ್ಗ   ಕೂಸಿನ ಮನೆ ತರಬೇತಿಗೆ ತಾ ಪಂ  ಇಓ ವೈ ರವಿಕುಮಾರ್ ಚಾಲನೆ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 18 : ಏಳು ದಿನಗಳ ಕಾಲ ನಡೆಯುವ ಕೂಸಿನ ಮನೆ ತರಬೇತಿಗೆ ಆರೈಕೆದಾರರು ಗೈರು ಹಾಜರಾಗದೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈ.ರವಿಕುಮಾರ್ ತಿಳಿಸಿದರು.

Advertisement

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಇಲಾಖೆಯಿಂದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕೂಸಿನ ಮನೆ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಇದ್ದಾಗಿದ್ದು, ಮೊದಲನೆ ಹಂತದ ತರಬೇತಿ ಮುಗಿದಿದೆ. ಎರಡನೆ ಹಂತದ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿಯನ್ನು ಶ್ರದ್ದೆಯಿಂದ ಗ್ರಹಿಸಬೇಕು. ನರೇಗಾದಡಿ ಕೂಲಿ ಕೆಲಸದಲ್ಲಿ ತೊಡಗಿರುವವರ ಮಕ್ಕಳನ್ನು ಕೂಸಿನ ಮನೆಯಲ್ಲಿ ಜೋಪಾನವಾಗಿ ನೋಡಿಕೊಳ್ಳಬೇಕು. ಸೊನ್ನೆಯಿಂದ ಮೂರು ವರ್ಷದ ಕೂಸುಗಳ ಲಾಲನೆ ಪಾಲನೆಯಲ್ಲಿ ಯಾವುದೇ ಲೋಪವಾಗಬಾರದು. ಪೌಷ್ಟಿಕಾಂಶ ಆಹಾರ ಹಾಗೂ ಸ್ವಚ್ಚತೆಯನ್ನು ಕಾಪಾಡಿಕೊಂಡು ಸಂರಕ್ಷಣೆ ಮಾಡುವ ಜವಾಬ್ದಾರಿ ನಿಮ್ಮಗಳ ಮೇಲಿದೆ ಎಂದು ಆರೈಕೆದಾರರಿಗೆ ಕರೆ ನೀಡಿದರು.

ಆರೈಕೆದಾರರಿಗೆ ತರಬೇತಿ ನೀಡಲು ಸಿ.ಡಿ.ಪಿ.ಓ. ಇಲಾಖೆಯ ಟ್ರೈನರ್ ಹೆಚ್.ಎಸ್.ಮಂಜುಳ, ವಾಸವಿ, ಎ.ಎನ್.ಎಸ್.ಎಸ್.ಐ.ಆರ್.ಡಿ. ಭವ್ಯ, ತಾಲ್ಲೂಕು ಪಂಚಾಯಿತಿ ವಿಷಯ ನಿರ್ವಾಹಕ ನಿಜಪ್ಪ ತರಬೇತಿಯಲ್ಲಿ ಉಪಸ್ಥಿತರಿದ್ದರು.

Tags :
Advertisement