For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಕ್ರೀಡೆಯಲ್ಲಿ ಬಂಗಾರದ ಪದಕ ಪಡೆದ ವಿದ್ಯಾ ವಿಕಾಸ ಶಾಲೆಯ ವಿದ್ಯಾರ್ಥಿ : ಸನ್ಮಾನಿಸಿದ ಸಚಿವ ಸುಧಾಕರ್

07:27 PM Sep 23, 2024 IST | suddionenews
ಚಿತ್ರದುರ್ಗ   ಕ್ರೀಡೆಯಲ್ಲಿ ಬಂಗಾರದ ಪದಕ ಪಡೆದ ವಿದ್ಯಾ ವಿಕಾಸ ಶಾಲೆಯ ವಿದ್ಯಾರ್ಥಿ   ಸನ್ಮಾನಿಸಿದ ಸಚಿವ ಸುಧಾಕರ್
Advertisement

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 23 : ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ 10ನೇ ತರಗತಿ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿರುವ ನೌಮಾನ್ ಅಹ್ಮದ್ ಷರೀಪ್ ಬಿನ್ ಜಮೀಲ್ ಅಹಮದ್ ಷರೀಪ್ ಇವರು ಸೆಪ್ಟೆಂಬರ್ 14 ರಿಂದ 17 ರ ವರೆಗೆ ಕರ್ನಾಟಕ ರಾಜ್ಯದ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕರ್ನಾಟಕ ರಾಜ್ಯ ಜೂನಿಯರ್ ಅಂಡರ್-23, ಅಥ್ಲೆಟಿಕ್ ಮೀಟ್-2024 ಆಂಡರ್-16 ನಲ್ಲಿ ನಡೆದ ಡಿಸ್ಟ್ರಿಕ್ ಅಥ್ಲೆಟಿಕ್ಸ್ ಅಸೋಸಿಯೇಷನ್‌ ಸ್ಪರ್ಧೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಗಿಟ್ಟಿಸಿ ಬಂಗಾರದ ಪದಕವನ್ನು ಪಡೆದುಕೊಂಡಿರುವುದು ಚಿತ್ರದುರ್ಗ ಜಿಲ್ಲೆಯ ಜನತೆಯು ಹೆಮ್ಮೆಪಡುವಂತಹ ವಿಷಯವಾಗಿದೆ.

Advertisement

ಅಲ್ಲದೇ ಇದೇ ಸಾಲಿನ ಅಕ್ಟೋಬರ್ ಮಾಹೆಯಲ್ಲಿ ಆಂದ್ರಪ್ರದೇಶದ ಗುಂಟನೂರಿನಲ್ಲಿ ದಿನಾಂಕ: 14-10-2024 ರಿಂದ 19-10-2024 ರ ವರೆಗೆ ನಡೆಯಲಿರುವ ಸೌತ್ ಜೂನಿಯ‌ರ್ ನ್ಯಾಷನಲ್‌ಗೆ ಆಯ್ಕೆಯಾಗಿರುತ್ತಾರೆ ಹಾಗೂ ದಿನಾಂಕ: 24-10-2024 ರಿಂದ 29-10-2024 ರ ವರೆಗೆ ಒಡಿಸ್ತಾ ರಾಜ್ಯದ ಭುವನೇಶ್ವರ್ ದಲ್ಲಿ ನಡೆಯುವ ಜೂನಿಯರ್ ನ್ಯಾಷನಲ್ ಅಥ್ಲೆಟಿಕ್ ಮೀಟ್ ಸ್ಪರ್ಧೆಗೂ ಸಹ ಆಯ್ಕೆಗೊಂಡಿರುತ್ತಾರೆ.

Advertisement
Advertisement

ಈ ಸಂದರ್ಭದಲ್ಲಿ ಯುವ ಕ್ರೀಡಾಪಟು ನೌಮಾನ್ ಅಹ್ಮದ್ ಷರೀಪ್ ಬಿನ್ ಜಮೀಲ್ ಆಹಮದ್ ಷರೀಪ್ ರವರಿಗೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದಂತಹ ಸನ್ಮಾನ್ಯ ಡಿ. ಸುಧಾಕರ್ ರವರು ಅವರ ಮನೆಗೆ ಖುದ್ದು ಭೇಟಿ ನೀಡಿ ನೌಮಾನ್ ಅಹ್ಮದ್ ಷರೀಪ್ ಇವರನ್ನು ಆತ್ಮೀಯವಾಗಿ ಸನ್ಮಾನಿಸಿ ಅವರು ವೈಯಕ್ತಿಕವಾಗಿ ನಗದು ಬಹುಮಾನ ರೂ.25.000/- ಗಳನ್ನು ನೀಡಿದರು ಮತ್ತು ಒಡಿಸ್ಸಾ ರಾಜ್ಯದ ಭುವನೇಶ್ವರ್ ಗೆ ತೆರಳಲು ತಗಲುವ ವಿಮಾನ ವೆಚ್ಚವನ್ನು ಭರಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನೌಮಾನ್ ಅಹ್ಮದ್ ಷರೀಪ್ ಇವರ ತಂದೆ ಜಮೀಲ್ ಅಹ್ಮದ್ ಷರೀಪ್, ಪೌಜಿಯ ಬಾನು, ಇವರುಗಳ ಸ್ನೇಹಿತರುಗಳು, ಬಂದು ಬಾಂಧವರು, ಹಿರಿಯರು ಹಾಗೂ తాయి ಹಿರಿಯೂರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಖಾದಿ ಜೆ ರಮೇಶ್, ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಡಾ: ಸುಜಾತ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಾರ್ಯದರ್ಶಿಯಾದ ರಜಿಯಾ ಸುಲ್ತಾನ ಹಾಗೂ ನಗರಸಭೆಯ ಸದಸ್ಯರಾದ ಶಿವಕುಮಾರ್ ರವರು ಉಪಸ್ಥಿತರಿದ್ದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಬಂಗಾರದ ಪದಕವನ್ನು ಪಡೆದು ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತಂದಿರುವ ನೌಮಾನ್ ಆಹ್ಮದ್ ಷರೀಪ್ ರವರಿಗೆ ತರಬೇತಿದಾರರಾದ ಆನಂದ್ ಭೈರವ ಹಾಗೂ ನಾಗರಾಜ್ ರವರು ಹಾಗೂ ಚಿತ್ರದುರ್ಗ ನಗರದ ಓನಕೆ ಓಬವ್ವ ಕ್ರೀಡಾಂಗಣದ ಕ್ರೀಡಾ ಸಮಿತಿಯ ಕಲ್ಲೇಶ್ ಸಾರ್, ಇನ್ನಿತರೆ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಅಭಿನಂದಿಸಿದರು ಹಾಗೂ ಮುಂದೆ ನಡೆಯಲಿರುವ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಬಂಗಾರದ ಪದಕಗಳನ್ನು ತರಲೆಂದು ಆಶಿಸಿದರು.

ಮುಂದಿನ ದಿನಗಳಲ್ಲಿ ನಡೆಯಲಿರುವ ಸೌತ್ ಜೋನ್ ಜೂನಿಯರ್ ನ್ಯಾಷನಲ್ಸ್ ಗುಂಟೂರ್, ಅಂಧ್ರಪ್ರದೇಶ, ಭುವನೇಶ್ವರ ಮತ್ತು ಒಡಿಸ್ಸಾದಲ್ಲಿ ನಡೆಯಲಿರುವ ಜೂನಿಯರ್ ನ್ಯಾಷಿನಲ್ಸ್ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.

ರಾಜ್ಯಮಟ್ಟದಲ್ಲಿ ಚಿನ್ನದ ಪದಕವನ್ನು ಪಡೆದು ಹೊರ ರಾಜ್ಯದಲ್ಲಿ ನಡೆಯಲಿರುವ ಸ್ಪರ್ಧೆಗಳಲ್ಲಿ ಪ್ರತಿನಿಧಿಸುತ್ತಿರುವ ಈ ಕ್ರೀಡಾಪಟುಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ್ ಕುಮಾರ್ ಸಂಸ್ಥೆಯ ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ.ಎನ್.ಜಿ ಐಸಿಎಸ್‍ಇ ಪ್ರಾಂಶುಪಾಲರಾದ ಬಸವರಾಜಯ್ಯ.ಪಿ ಐಸಿಎಸ್‍ಇ, ಉಪ ಪ್ರಾಂಶುಪಾಲರಾದ ಅವಿನಾಶ್ ಬಿ, ಸಂಸ್ಥೆಯ ನಿರ್ದೇಶಕರಾದ ಎಸ್.ಎಂ ಪೃಥ್ವೀಶ್, ಹಾಗೂ ಶ್ರೀಮತಿ ಸುನಿತಾ.ಪಿ.ಸಿ ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಶ್ಲಾಘಸಿ ಅಭಿನಂದಿಸಿದ್ದಾರೆ.

Tags :
Advertisement