Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಅಮಿತ್‍ಷಾ ರಾಜೀನಾಮೆಗೆ ಸಾಮಾಜಿಕ ಸಂಘರ್ಷ ಸಮಿತಿ ಒತ್ತಾಯ

05:28 PM Dec 21, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 21 : ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಹೆಸರು ಜಪಿಸುವ ಬದಲು ದೇವರ ಸ್ಮರಣೆ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್‍ಷಾ ವಿರುದ್ದ ಸಾಮಾಜಿಕ ಸಂಘರ್ಷ ಸಮಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಅಮಿತ್‍ಷಾ ರಾಜಿನಾಮೆಗೆ ಒತ್ತಾಯಿಸಿದರು.

Advertisement

 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರೊ.ಸಿ.ಕೆ.ಮಹೇಶ್ ದೇಶದ ಐಕ್ಯತೆಗೆ ಪೆಟ್ಟು ಕೊಡುವಂತ ಮಾತುಗಳನ್ನಾಡಿರುವ ಅಮಿತ್‍ಷಾ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಶೋಷಿತರು, ಮಹಿಳೆಯರನ್ನು ದಿಕ್ಕುತಪ್ಪಿಸಲು ಹೊರಟಂತಿದೆ. ಬ್ರಾಹ್ಮಣ್ಯ ಆಳ್ವಿಕೆ ಆರಂಭದಲ್ಲಿ ನಮ್ಮ ದೇಶ ವಿಭಜನೆಯಾಯಿತು. ಈಗ ಮತ್ತೊಮ್ಮೆ ಅಂತಹ ಆಳ್ವಿಕೆ ಶುರುವಾಗುವ ವಾತಾವರಣವಿದೆ. ಅಖಂಡ ಭಾರತ ಉಳಿಯಬೇಕಾಗಿರುವುದರಿಂದ ಎಲ್ಲರೂ ಒಗ್ಗೂಡಬೇಕಿದೆ ಎಂದರು.
ಅಮಿತ್‍ಷಾ ಹೇಳಿಕೆ ದೇವರು, ಧರ್ಮದ ಹೆಸರಿನಲ್ಲಿ ಹೊಸ ಚಿಂತನೆ, ಚಳುವಳಿಗೆ ಬುನಾದಿ ತೋಡಿದಂತೆ ಕಾಣುತ್ತಿದೆ. ಕಾಂಗ್ರೆಸ್ ಅಂಬೇಡ್ಕರ್‍ರವರನ್ನು ಚುನಾವಣೆಯಲ್ಲಿ ಸೋಲಿಸಿತು ಎಂದು ಕೋಮುವಾದಿ ಬಿಜೆಪಿ. ಅಪ ಪ್ರಚಾರದಲ್ಲಿ ತೊಡಗಿರುವುದರ ವಿರುದ್ದ ದಲಿತರು ಜಾಗೃತಿಗೊಳ್ಳಬೇಕಿದೆ. ಬ್ರಾಹ್ಮಣ್ಯ ಸಿದ್ದಾಂತದ ವಿರುದ್ದ ನಮ್ಮ ಹೋರಾಟವಿರಬೇಕೆಂದು ಹೇಳಿದರು.

 

ಸಾಮಾಜಿಕ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಎ.ಚಿಕ್ಕಣ್ಣ, ಡಿ.ದುರುಗೇಶ್, ಎಂ.ರಾಮಾಂಜನೇಯ, ಆರ್.ರಾಮಲಿಂಗಪ್ಪ, ಕೆ.ಕೃಷ್ಣಮೂರ್ತಿ
ಡಿ.ಯಲ್ಲಪ್ಪ, ಹೊಳೆಯಪ್ಪ, ಹನುಮಂತಪ್ಪ ದುರ್ಗ, ನ್ಯಾಯವಾದಿಗಳಾದ ಡಿ.ವೆಂಕಟೇಶ್, ಎಲ್.ಸುರೇಶ್, ದಲಿತ ಮುಖಂಡ ಬಿ.ರಾಜಣ್ಣ ಇನ್ನು ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement
Tags :
AmitshabengaluruchitradurgakannadaKannadaNewsresignationsuddionesuddionenewsಅಮಿತ್‍ಷಾಒತ್ತಾಯಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಬೆಂಗಳೂರುರಾಜೀನಾಮೆಸಾಮಾಜಿಕ ಸಂಘರ್ಷ ಸಮಿತಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article