For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿ

05:38 PM Aug 26, 2024 IST | suddionenews
ಚಿತ್ರದುರ್ಗ   ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿ
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 26 : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಕೃಷ್ಣಜನ್ಮಾಷ್ಠಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಕೃಷ್ಣ ಜನ್ಮಾಷ್ಟಮಿಯನ್ನು ಭಾರತ ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ಬಹಳ ಸಂತೋಷ ಮತ್ತು ವೈಭವದಿಂದ ಆಚರಿಸಲಾಗುತ್ತದೆ. ಜನ್ಮಾಷ್ಟಮಿ ಎಂಬ ಪದವು ಎರಡು ಪದಗಳಿಂದ ಕೂಡಿದೆ. ‘ಜನ್ಮ’ ಎಂದರೆ ಜನ್ಮ ಮತ್ತು ‘ಅಷ್ಟಮಿ’ ಎಂದರೆ ಎಂಟು ಮತ್ತು ಅದು ಭಾದ್ರಪದ ಮಾಸದ ಅಂಧಕಾರದ ಹದಿನೈದು ದಿನದ ಎಂಟನೆಯ ದಿನವಾಗಿದ್ದು ಭಗವಾನ್ ಕೃಷ್ಣನು ಜನಿಸಿದನು. ಜನಪ್ರಿಯ ಹಬ್ಬವನ್ನು ಗೋಕುಲಾಷ್ಟಮಿ ಮತ್ತು ಶ್ರೀ ಕೃಷ್ಣ ಜಯಂತಿ ಎಂದೂ ಕರೆಯುತ್ತಾರೆ. ಭಗವಾನ್ ಕೃಷ್ಣನ ಜನ್ಮ ಕ್ಷಣವನ್ನು ಗುರುತಿಸಲು ಮಧ್ಯರಾತ್ರಿಯ ಆಚರಣೆಗಳಿಗಾಗಿ ಶ್ರೀಕೃಷ್ಣನ ದೇವಾಲಯಗಳನ್ನು ಹೂವುಗಳಿಂದ ಅಲಂಕರಿಸಲಾಗುತ್ತದೆ.

Advertisement

ಕೃಷ್ಣಜನ್ಮಾಷ್ಠಮಿಯ ಪ್ರಯುಕ್ತ ಸಂಸ್ಥೆಯ ನಿರ್ದೇಶಕರಾದ ಶ್ರೀ ಎಸ್ ಎಂ ಪೃಥ್ವೀಶ ಸರ್ ಅವರು ಮಾತನಾಡುತ್ತಾ ಕೃಷ್ಣನು ಜಗದೋದ್ಧಾರಕನಾಗಿದ್ದು, ಆತನ ಕೃಪಾಕಟಾಕ್ಷ ಎಲ್ಲ್ಲರಿಗೂ ಬೇಕು. ಸನ್ಮಾರ್ಗದಲ್ಲಿ ನಡೆಯುವವರಿಗೆ ಆತನು ಬೆಳಕನ್ನು ತೋರಿಸುತ್ತಾನೆ. ಹಾಗೂ ಭಗವಂತನಾದ ಶ್ರೀಕೃಷ್ಣನು ಮಾನವ ಜನ್ಮದ ಉದ್ಧಾರಕ್ಕಾಗಿಯೇ ಆವತರಿಸಿ ಬಂದು ಬದುಕಿಗೆ ದಾರಿದೀಪವಾಗಿದ್ದಾನೆ ಎಂದು ಹೇಳಿದರು.

Advertisement

ಸಂಸ್ಥೆಯ ಐಸಿಎಸ್‍ಇ ಪ್ರಿನ್ಸಿಪಾಲರಾದ ಬಸವರಾಜಯ್ಯ.ಪಿ, ಅವರು ಮಾತನಾಡುತ್ತಾ ಶ್ರೀ ವಿಷ್ಣುವಿನ ದಶ ಅವತಾರಗಳಲ್ಲಿ ಶ್ರೀ ಕೃಷ್ಣನ ಅವರತಾರವು ಬಹಳ ವಿಶೇಷವಾದದ್ದು ಹಾಗೂ ಜಗತ್ತಿಗೆ ಮಾದರಿಯಾಗುವಂತಹದ್ದು, ಅದರಲ್ಲೂ ಕೃಷ್ಣ ಬಾಲ ಲೀಲೆಗಳು, ಹಾಗೂ ಕೃಷ್ಣನ ಲೀಲೆಗಳು ಅಪರಿಮಿತ/ಅಗಣಿತವಾಗಿವೆ ಎಂದರು. ಸಂಸ್ಥೆಯ ಮುಖ್ಯ ಶಿಕ್ಷಕರಾದ  ತಿಪ್ಪೇಸ್ವಾಮಿ ಎನ್ ಜಿ, ಅವರು ಮಾತನಾಡುತ್ತಾ ಕೃಷ್ಣನು ಜಗತ್ತನ್ನು ಸಲಹುವಾತನು. ಕಷ್ಟ ಕಾರ್ಪಣ್ಯಗಳ ನಿವಾರಕನು. ಈತನ ದಯೆ ಇದ್ದರೆ ಜಗತ್ತನ್ನೇ ಗೆಲ್ಲಬಹುದು ಎಂದರು.

ಶ್ರೀ ಕೃಷ್ಣಜನ್ಮಾಷ್ಟಮಿಯ ಅಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪುಟ್ಟ ಮಕ್ಕಳು ಬಣ್ಣ ಬಣ್ಣದ ಕೃಷ್ಣ ರಾಧೇಯ ವೇಷವನ್ನು ಧರಿಸಿ ನೃತ್ಯ ಮಾಡಿ ಮಕ್ಕಳನ್ನು ಪೋಷಕರನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಐಸಿಎಸ್‍ಇ ಉಪ ಪ್ರಿನ್ಸಿಪಾಲರಾದ ಅವಿನಾಶ್ ಬಿ ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

Tags :
Advertisement