ಚಿತ್ರದುರ್ಗ | ಪ್ರಕೃತಿ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 26 : ನಗರದ ಬಿ ಎಲ್ ಗೌಡ ಲೇಔಟ್ ನಲ್ಲಿರುವ ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯ ಅತಿಥಿಗಳು ಮತ್ತು ವೇದಿಕೆ ಮೇಲೆ ಉಪಸ್ಥಿತರಿದ್ದ ಎಲ್ಲಾ ಗಣ್ಯರಿಂದ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪುಟಾಣಿ ಮಕ್ಕಳು ಮತ್ತು ಅವರ ತಾಯಂದಿರು ಕೃಷ್ಣ,ರಾಧೆ ಮತ್ತು ಯಶೋಧೆ ವೇಷವನ್ನು ಧರಿಸಿ ಪ್ರದರ್ಶನ ನೀಡಿದರು. ಉತ್ತಮ ಪ್ರದರ್ಶನ ತೋರಿದ ಮಕ್ಕಳಿಗೆ ಬಹುಮಾನ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪಾರಿತೋಷಕ ವಿತರಿಸಲಾಯಿತು.
ಪೂರ್ವ ಪ್ರಾರ್ಥಮಿಕ ಮಕ್ಕಳಿಂದ ಭಗವದ್ಗೀತೆ ಪಠಣ ಶ್ರೀ ಕೃಷ್ಣನ ಭಕ್ತಿ ಗೀತೆಗೆ ನೃತ್ಯವನ್ನು ಮಾಡಿದರು ಹಾಗೂ ಆರನೇ ತರಗತಿಯ ವಿದ್ಯಾರ್ಥಿನಿಯರು ಶ್ರೀಕೃಷ್ಣ ಸುಧಾಮ ನಾಟಕವನ್ನು ಅಮೋಘವಾಗಿ ಪ್ರದರ್ಶಿಸಿದರು.
ಐದನೇ ತರಗತಿಯ ವಿದ್ಯಾರ್ಥಿ ಶ್ರೀನಿಧಿ. ಎಸ್ ಕೃಷ್ಣನ ಭಕ್ತಿ ಗೀತೆಗಳು ಸುಶಾವ್ಯವಾಗಿ ಹಾಡಿ ಎಲ್ಲರ ಮನ ರಂಜಿಸಿದಳು.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ಸುಮನ. ಬಿ.ಕೆ, ಸಂಸ್ಕೃತ ಶಿಕ್ಷಕರು ಕಬೀರಾನಂದ ಆಶ್ರಮ ಇವರು ಮಾತನಾಡುತ್ತ ಕೃಷ್ಣನ ಬಾಲ ಲೀಲೆಗಳನ್ನು ಮಕ್ಕಳಿಗೆ ತಿಳಿಸುತ್ತಾ ಪ್ರಾಮಾಣಿಕತೆ ಇರುವಲ್ಲಿ ಶ್ರೀ ಕೃಷ್ಣ ಇರುತ್ತಾನೆ ಮಕ್ಕಳಿಗೆ ಪ್ರಾಮಾಣಿಕತೆ ಬಹಳ ಮುಖ್ಯ ಎಂದು ತಿಳಿಸುತ್ತಾ ಅತ್ಯಂತ ಕಷ್ಟಕರವಾದ ಕೆಲಸ ತೀರ್ಪುಗಾರಿಕೆಯನ್ನು ಕೂಡ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಮುಖ್ಯೋಪಾಧ್ಯಾಯರಾದ ಶ್ರೀಮತಿ ಎಂ.ಎಸ್ ಶಶಿಕಲಾ ರವರು ಪ್ರಾಸ್ತಾವಿಕ ನುಡಿಗಳನ್ನು ಮಾತನಾಡುತ್ತಾ ಶ್ರೀ ಕೃಷ್ಣನ ಲೀಲೆಗಳನ್ನು ತಿಳಿಸಿದರು. ವಿವೇಕವಿದ್ದಲ್ಲಿ ಶ್ರೀ ಕೃಷ್ಣನು ಇರುತ್ತಾನೆ ಆದ್ದರಿಂದ ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ವಿನಯ ವಿವೇಕಗಳನ್ನು ಬೆಳೆಸಿಕೊಳ್ಳಲು ಕರೆ ನೀಡಿದರು.
ಈ ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ಅಧ್ಯಕ್ಷರಾದ ಶ್ರೀಯುತ ಎಂ.ಕೆ ರವೀಂದ್ರ ಕಾರ್ಯದರ್ಶಿಗಳಾದ ಶ್ರೀಯುತ ಎಂ.ಕಾರ್ತಿಕ್ ಸಹಕಾರ್ಯದರ್ಶಿಗಳಾದ ಶ್ರೀಯುತ ಟಿ.ಎನ್ ಮಾರುತಿ ಮೋಹನ್ ಖಜಾಂಚಿಗಳು ಮತ್ತು ಆಡಳಿತಾಧಿಕಾರಿಗಳಾದ ಶ್ರೀಮತಿ ಶ್ವೇತ ಕಾರ್ತಿಕ್ ಮತ್ತು ಟ್ರಸ್ಟಿಗಳಾದ ಶ್ರೀಯುತ ಡಾ ಮಧುಸೂದನ್ ರೆಡ್ಡಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಕೃತಿಕ.ವಿ ಮತ್ತು ಕುಮಾರ ವರುಣ್ ಬಿ.ಆರ್ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಧನ್ಯ. ಎಲ್. ನಾಯ್ಡು ಮತ್ತು ದಿವ್ಯಶ್ರೀ ಬಿ.ಆರ್. ರವರು ಪ್ರಾರ್ಥಿಸಿದರು. ಶಿಕ್ಷಕಿ ಶ್ರೀಮತಿ ಸುಮನ. ಏ. ಸ್ವಾಗತಿಸಿದರು. ಕಾರ್ತಿಕ್. ಎಂ ರವರು ವಂದನಾರ್ಪಣೆಯನ್ನು ಮಾಡಿದರು.