ಚಿತ್ರದುರ್ಗ | ಅಕ್ಟೋಬರ್ 5 ರಿಂದ 13 ರವರೆಗೆ ಶರಣ ಸಂಸ್ಕೃತಿ ಉತ್ಸವ 2024 : ಶಿವಯೋಗಿ ಸಿ. ಕಳಸದ ಮಾಹಿತಿ
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 24 : ಶ್ರೀ ಮುರುಘರಾಜೇಂದ್ರ ಬೃಹನ್ಮಠದಿಂದ ಪ್ರತಿವರ್ಷದಂತೆ ಈ ಬಾರಿಯ ಶರಣ ಸಂಸ್ಕೃತಿ ಉತ್ಸವವನ್ನು ಅಕ್ಟೋಬರ್ 5ರಿಂದ 13ರವರೆಗೆ 9ದಿನಗಳ ಕಾಲ ನಡೆಯಲಿದೆ.
ಶ್ರೀಮಠದಲ್ಲಿ ಇಂದು (ಶನಿವಾರ) ಜರುಗಿದ ಉತ್ಸವ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಶ್ರೀಮಠ ಮತ್ತು ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಮಾತನಾಡಿ, ಈ ಬಾರಿಯ ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಶ್ರೀ ಮ.ನಿ.ಪ್ರ. ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು, ಶ್ರೀ ರುದ್ರೇಶ್ವರ ವಿರಕ್ತಮಠ, ಹೆಬ್ಬಾಳು ಗೌರವ ಉಪಾಧ್ಯಕ್ಷರಾಗಿ ಶ್ರೀ ಮ.ನಿ.ಪ್ರ. ಮೋಕ್ಷಪತಿ ಮಹಾಸ್ವಾಮಿಗಳು, ಶ್ರೀ ಮುರುಘಾಮಠ, ರಾವಂದೂರು ಗೌ| ಕಾರ್ಯಾಧ್ಯಕ್ಷರನ್ನಾಗಿ ಡಿ. ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವರು, ಗೋವಿಂದ ಎಂ. ಕಾರಜೋಳ, ಸಂಸದರು, ಚಿತ್ರದುರ್ಗ, ಉತ್ಸವ ಸಮಿತಿ ಅಧ್ಯಕ್ಷರಾಗಿ ಕೆ.ಸಿ. ವೀರೇಂದ್ರ ಪಪ್ಪಿ, ಶಾಸಕರು, ಚಿತ್ರದುರ್ಗ ಇವರುಗಳನ್ನು ಆಯ್ಕೆ ಮಾಡಲಾಗಿದೆ. ಉತ್ಸವವು ಅರ್ಥಪೂರ್ಣವಾಗಿ ಸರಳವಾಗಿ ಆಯೋಜಿಸಲಾಗುವುದು. ಭಕ್ತರ ಸಹಕಾರ ಮುಖ್ಯ. ಶ್ರೀಮಠದ ಪರಂಪರೆಯಂತೆ ಎಲ್ಲಾ ಗೋಷ್ಠಿಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಈವರ್ಷಕ್ಕೆ ಪೀಠದ ಲಿಂಗೈಕ್ಯ ಶ್ರೀ ಜಯದೇವ ಜಗದ್ಗುರುಗಳ ಜಯಂತಿ 150 ವರ್ಷಗಳಾಗಲಿದೆ. 53 ವರ್ಷಗಳ ಕಾಲ ಶ್ರೀಮಠದ ಪೀಠವನ್ನು ಅಲಂಕಸಿರುತ್ತಾರೆ. ಶ್ರೀಗಳ 100ನೇ ಜಯಂತಿಯನ್ನು ದಾವಣಗೆರೆಯಲ್ಲಿ ಮಲ್ಲಿಕಾರ್ಜುನ ಶ್ರೀಗಳು ಆಚರಿಸುತ್ತಾರೆ. ಈ ವರ್ಷ ಪೂರ್ತಿ ಜಯದೇವ ಶ್ರೀಗಳ ಕುರಿತು ಅರ್ಥಪೂರ್ಣವಾಗಿ 150 ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು ಮಾತನಾಡಿ, ಮಧ್ಯಕರ್ನಾಟಕದ ನಾಡಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಈ ಬಾರಿ ಪುರುಷ ಮತ್ತು ಮಹಿಳಾ ಕ್ರೀಡಾಕೂಟವನ್ನು 150 ನೇ ವರ್ಷದ ಜಯಂತಿ ಅಂಗವಾಗಿ ಶ್ರೀ ಜಯದೇವ ಶ್ರೀಗಳ ಹೆಸರಿನಲ್ಲಿ ಆಯೋಜಿಸಲಾಗುವುದು ಎಂದರು.
ಸಂಸದ ಗೋವಿಂದ ಎಂ.ಕಾರಜೋಳ ಮಾತನಾಡಿ, ಶ್ರೀಮಠಕ್ಕೆ ತನ್ನದೇ ಆದ ಇತಿಹಾಸವಿದ್ದು, ಜಾತಿ, ಮತ, ಲಿಂಗಭೇದವಿಲ್ಲದೆ ಬಸವಾದಿ ಶರಣರ ಆಶಯಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಶೂದ್ರರಿಗೆ ಶಿಕ್ಷಣ ಕೊಡಲು ಸಾಧ್ಯವಾಗದ ಸಂದರ್ಭದಲ್ಲಿ ಚಿತ್ರದುರ್ಗ ಬೃಹನ್ಮಠ ಅಂತಹ ಅವಕಾಶವನ್ನು ಮಾಡಿಕೊಟ್ಟಿದೆ. ಶರಣಸಂಸ್ಕøತಿ ಉತ್ಸವದಲ್ಲಿ ಗತವೈಭವದ ಚಿಂತನೆಗಳು ನಡೆಯಲಿ ಪ್ರತಿದಿನವೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆಂದರು.
ಶ್ರೀ ವಚನಾನಂದ ಸ್ವಾಮಿಗಳು ಮಾತನಾಡಿ, ಶ್ರೀಮಠಕ್ಕೆ ನಾಡಿನಾದ್ಯಂತ ಶಾಖಾಮಠಗಳು, ಹಾಸ್ಟೆಲ್‍ಗಳಿವೆ. ಇದು ವರ್ಷದ ಕಾರ್ಯಕ್ರಮವಾಗಬೇಕು. ಜಯದೇವ ಶ್ರೀಗಳ ಹೆಸರಿನ ಅಂಚೆಚೀಟಿ, ನಾಣ್ಯಗಳ ಬಿಡುಗಡೆಯಾಗಲು ಕ್ರಮವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಡಾ. ಬಸವಕುಮಾರ ಸ್ವಾಮಿಗಳು – 5 ಲಕ್ಷ, ಡಾ. ಬಸವಜಯಚಂದ್ರ ಸ್ವಾಮಿಗಳು-51000, ಕೆ.ಎಂ. ವೀರೇಶ್ - 50 ಸಾವಿರ, ಸಿಂಧನೂರು ಬಸವಕೇಂದ್ರ - 25 ಸಾವಿರ, ಸಿರಾಜ್ ಭೀಮಸಮುದ್ರ - 50 ಸಾವಿರ, ಬಸವೇಶ್ವರ ವಿದ್ಯಾಸಂಸ್ಥೆ - 25 ಸಾವಿರ, ಸುರೇಶ್‍ಬಾಬು - 51 ಪಾಕೆಟ್ ಅಕ್ಕಿ, ತೇಜಸ್ವಿ ಪಟೇಲ್-10 ಸಾವಿರ, ತಾಜ್‍ಪೀರ್ - 1 ಲಕ್ಷ ಮೌಲ್ಯದ ಗೋಧಿಹಿಟ್ಟು, ಗುರುಮೂರ್ತಿ - 10 ಸಾವಿರ, ಗಂಗಮ್ಮ ವೀರಭದ್ರಯ್ಯ ಹೊಳಲ್ಕೆರೆ - 501 ತೆಂಗಿನಕಾಯಿ, ಮಹಡಿ ಶಿವಮೂರ್ತಿ - 10 ಸಾವಿರ, ಶಂಕರಮೂರ್ತಿ ಭೀಮಸಮುದ್ರ - 1 ಲಕ್ಷ, ಮೆದೇಹಳ್ಳಿ ವಿಜಯಕುಮಾರ್ - 25 ಸಾವಿರ, ಕಂಪ್ಯೂಟರ್ ಶ್ರೀನಿವಾಸ್ – 50 ಸಾವಿರ ಉತ್ಸವಕ್ಕೆ ನೀಡುವುದಾಗಿ ವಾಗ್ದಾನ ಮಾಡಿದರು.
ಶ್ರೀಮತಿ ಮೋಕ್ಷರುದ್ರಸ್ವಾಮಿ, ಶ್ರೀಮತಿ ರುದ್ರಾಣಿ ಗಂಗಾಧರ್, ಕೆಇಬಿ ಷಣ್ಮುಖಪ್ಪ, ಅನೀಸ್, ಮಂಜುನಾಥ ದಾಳಿಂಬೆ, ವೀರೇಂದ್ರಕುಮಾರ್ ಪಿ., ವೀರಶೈವ ಸಮಾಜ, ಅಖಿಲಭಾರತ ವೀರಶೈವ ಮಹಾಸಭೆ, ಹಾಗೂ ಇತರೆ ಸಮಾಜಗಳ ಮುಖಂಡರು, ಶಾಲಾಕಾಲೇಜುಗಳ ಮುಖ್ಯಸ್ಥರು ಇದ್ದರು.
ಉತ್ಸವ ಸಮಿತಿ
ಗೌ| ಅಧ್ಯಕ್ಷರು : ಶ್ರೀ ಮ.ನಿ.ಪ್ರ. ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು
ಶ್ರೀ ರುದ್ರೇಶ್ವರ ವಿರಕ್ತಮಠ, ಹೆಬ್ಬಾಳು
ಗೌ| ಉಪಾಧ್ಯಕ್ಷರು : ಶ್ರೀ ಮ.ನಿ.ಪ್ರ. ಮೋಕ್ಷಪತಿ ಮಹಾಸ್ವಾಮಿಗಳು
ಶ್ರೀ ಮುರುಘಾಮಠ, ರಾವಂದೂರು
ಗೌ| ಕಾರ್ಯಾಧ್ಯಕ್ಷರು : ಶ್ರೀ ಡಿ. ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ
ಶ್ರೀ ಗೋವಿಂದ ಎಂ. ಕಾರಜೋಳ, ಸಂಸದರು, ಚಿತ್ರದುರ್ಗ
ಅಧ್ಯಕ್ಷರು : ಶ್ರೀ. ಕೆ.ಸಿ. ವೀರೇಂದ್ರ ಪಪ್ಪಿ, ಶಾಸಕರು, ಚಿತ್ರದುರ್ಗ
ಉಪಾಧ್ಯಕ್ಷರು : ಶ್ರೀ ಡಿ. ಸುಧಾಕರ್, ಜಿಲ್ಲಾ ಉಸ್ತುವಾರಿ ಮಂತ್ರಿಗಳು
ಶ್ರೀ ಬಿ.ಜಿ. ಗೋವಿಂದಪ್ಪ, ಶಾಸಕರು, ಹೊಸದುರ್ಗ
ಶ್ರೀ ಎಂ. ಚಂದ್ರಪ್ಪ, ಶಾಸಕರು, ಹೊಳಲ್ಕೆರೆ
ಶ್ರೀ ಎನ್.ವೈ.ಗೋಪಾಲಕೃಷ್ಣ, ಶಾಸಕರು, ಮೊಳಕಾಲ್ಮೂರು
ಶ್ರೀ ಟಿ. ರಘುಮೂರ್ತಿ, ಶಾಸಕರು, ಚಳ್ಳಕೆರೆ
ಶ್ರೀ ಕೆ.ಎಸ್. ನವೀನ್, ಶಾಸಕರು, ವಿಧಾನಪರಿಷತ್
ಶ್ರೀ ಡಿ.ಟಿ. ಶ್ರೀನಿವಾಸ್, ಶಾಸಕರು, ವಿಧಾನಪರಿಷತ್
ಶ್ರೀ ಚಿದಾನಂದಗೌಡ, ಶಾಸಕರು, ವಿಧಾನಪರಿಷತ್
ಶ್ರೀ ಹೆಚ್. ಆಂಜನೇಯ, ಮಾಜಿ ಸಚಿವರು
ಶ್ರೀ ಜಿ.ಹೆಚ್. ತಿಪ್ಪಾರೆಡ್ಡಿ, ಮಾಜಿ ಶಾಸಕರು
ಶ್ರೀ ಜಿ.ಎಸ್. ಮಂಜುನಾಥ್, ಅಧ್ಯಕ್ಷರು, ಆದಿಜಾಂಬವ ಅಭಿವೃದ್ಧಿ ನಿಗಮ
ಅಧ್ಯಕ್ಷರು, ನಗರಸಭೆ, ಚಿತ್ರದುರ್ಗ
ಶ್ರೀ ಎಂ.ಕೆ. ತಾಜ್‍ಪೀರ್, ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಚಿತ್ರದುರ್ಗ
ಶ್ರೀ ಮಹಡಿ ಶಿವಮೂರ್ತಿ, ಚಿತ್ರದುರ್ಗ
ಶ್ರೀ ಸಿದ್ದಪ್ಪ, ಅಧ್ಯಕ್ಷರು, ಅ.ಭಾ.ವೀ.ಮ.ಸ., ಚಿತ್ರದುರ್ಗ
ಶ್ರೀ ಕೆ.ಎಂ. ವೀರೇಶ್, ಬಾಪೂಜಿ ವಿದ್ಯಾಸಂಸ್ಥೆ, ಚಿತ್ರದುರ್ಗ
ಶ್ರೀ ಕೆ.ವಿ. ಪ್ರಭಾಕರ್, ಉದ್ಯಮಿಗಳು, ಚಿತ್ರದುರ್ಗ
ಶ್ರೀ ಶಿವಪ್ರಕಾಶ್, ಮುಖಂಡರು, ಪಂಚಮಸಾಲಿ ಸಮಾಜ, ಚಿತ್ರದುರ್ಗ
ಶ್ರೀ ಎಸ್. ಷಣ್ಮುಖಪ್ಪ, ಎಸ್ಸೆನ್ ಸ್ಮಾರಕ ಟ್ರಸ್ಟ್, ಚಿತ್ರದುರ್ಗ
ಶ್ರೀ ಗಂಗಾಧರ್, ಅಧ್ಯಕ್ಷರು, ಪಂಚಮಸಾಲಿ ಸಮಾಜ, ಚಿತ್ರದುರ್ಗ
ಶ್ರೀ ಎಸ್.ವಿ. ನಾಗರಾಜಪ್ಪ, ಉದ್ಯಮಿಗಳು, ಸಿದ್ದಾಪುರ
ಶ್ರೀ ಪಟೇಲ್ ಶಿವಕುಮಾರ್, ಉದ್ಯಮಿಗಳು, ಸಿದ್ದಾಪುರ
ಶ್ರೀ ಶಂಕರಮೂರ್ತಿ, , ಉದ್ಯಮಿಗಳು, ಭೀಮಸಮುದ್ರ
ಶ್ರೀ ರುದ್ರೇಶ್ ಐಗಳ್, ಉದ್ಯಮಿಗಳು, ಚಿತ್ರದುರ್ಗ
ಶ್ರೀ ಎಂ. ಮಹೇಶ್
ಪ್ರಧಾನ ಕಾರ್ಯದರ್ಶಿ : ಶ್ರೀ ಹೆಚ್.ಎನ್. ತಿಪ್ಪೇಸ್ವಾಮಿ, (ಎಸ್.ಎಂ.ಎಲ್.), ಭರಮಸಾಗರ
ಕಾರ್ಯದರ್ಶಿಗಳು : ಶ್ರೀ ಶಶಿಧರಬಾಬು
ಶ್ರೀ ಧನಂಜಯ, ಲಕ್ಷ್ಮೀಸಾಗರ
ಶ್ರೀ ಸುರೇಶ್, ಸದಸ್ಯರು, ನಗರಸಭೆ
ಖಜಾಂಚಿ : ಶ್ರೀ ಡಿ.ಎಸ್. ಸುರೇಶ್‍ಬಾಬು, ಉದ್ಯಮಿಗಳು, ಚಿತ್ರದುರ್ಗ
ಸದಸ್ಯರು : ಶ್ರೀ ಜಾಲಿಕಟ್ಟೆ ರುದ್ರಪ್ಪ
ಶ್ರೀ ಸುರೇಶ್, ಸಿದ್ದಾಪುರ
ಶ್ರೀ ಡಿ.ಎಂ. ಲಿಂಗರಾಜು
ಶ್ರೀ ಡಿ.ವಿ. ಪ್ರವೀಣ್, ಭರಮಸಾಗರ
ಶ್ರೀ ಈಶ್ವರಪ್ಪ, ಮುಖಂಡರು, ಕುರುಬಸಮಾಜ, ಮಾಳಪ್ಪನಹಟ್ಟಿ
ಶ್ರೀ ಜಿ.ಎಸ್. ಗುರುಸಿದ್ದಪ್ಪ, ಮುಖಂಡರು, ನಾಯಕ ಸಮಾಜ, ಜೆ.ಎನ್.ಕೋಟೆ
ಶ್ರೀ ವೆಂಕಟೇಶ್ ಯಾದವ್, ಮುಖಂಡರು, ಯಾದವ ಸಮಾಜ, ಚಿತ್ರದುರ್ಗ
ಶ್ರೀ ಕೃಷ್ಣಪ್ಪ, ಮುಖಂಡರು, ಕೊರಚ ಸಮಾಜ, ಚಿತ್ರದುರ್ಗ
ಶ್ರೀ ಚಂದ್ರಶೇಖರ್, ಮುಖಂಡರು, ಸವಿತಾ ಸಮಾಜ, ಚಿತ್ರದುರ್ಗ
ಶ್ರೀ ರವಿಕುಮಾರ್, ಮುಖಂಡರು, ಈಡಿಗ ಸಮಾಜ, ಚಿತ್ರದುರ್ಗ
ಶ್ರೀ ಎಂ. ಶಂಕರಮೂರ್ತಿ, ಮುಖಂಡರು, ವಿಶ್ವಕರ್ಮ ಸಮಾಜ, ಚಿತ್ರದುರ್ಗ
ಶ್ರೀ ಗೋವಿಂದನಾಯ್ಕ, ಮುಖಂಡರು, ಲಂಬಾಣಿ ಸಮಾಜ, ಚಿತ್ರದುರ್ಗ
ಶ್ರೀ ವಿ.ಎಲ್. ಪ್ರಶಾಂತ್, ಮುಖಂಡರು, ಮಡಿವಾಳ ಸಮಾಜ, ಚಿತ್ರದುರ್ಗ
ಶ್ರೀ ಎರ್ರಿಸ್ವಾಮಿ, ಮುಖಂಡರು, ಕುಂಬಾರ ಸಮಾಜ, ಚಿತ್ರದುರ್ಗ
ಶ್ರೀ ಹೆಚ್. ಆನಂದಪ್ಪ, ಮುಖಂಡರು, ಬೋವಿ ಸಮಾಜ, ಚಿತ್ರದುರ್ಗ
ಶ್ರೀ ಹೆಚ್.ಸಿ.ನಿರಂಜನಮೂರ್ತಿ, ಮುಖಂಡರು, ಛಲವಾದಿ ಸಮಾಜ, ಚಿತ್ರದುರ್ಗ
ಶ್ರೀ ಸುರೇಶ್‍ರಾಜ್, ಮುಖಂಡರು, ವೈಶ್ಯರು ಸಮಾಜ, ಚಿತ್ರದುರ್ಗ
ಶ್ರೀ ಮುಖೇಶ್ ಜೈನ್, ಮುಖಂಡರು, ಜೈನ ಸಮಾಜ, ಚಿತ್ರದುರ್ಗ
ಶ್ರೀ ರಮೇಶ್, ಮುಖಂಡರು, ಬಲಿಜ ಸಮಾಜ, ಚಿತ್ರದುರ್ಗ
ಶ್ರೀ ಲಿಂಗಾರೆಡ್ಡಿ / ಶ್ರೀ ರಘುರಾಮರೆಡ್ಡಿ ಮುಖಂಡರು, ರೆಡ್ಡಿ ಸಮಾಜ, ಚಿತ್ರದುರ್ಗ ಇವರನ್ನು ಸಮಿತಿಯ ಸದಸ್ಯರಾಗಿ ನೇಮಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.