For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಬಸವೇಶ್ವರರ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

03:17 PM May 10, 2024 IST | suddionenews
ಚಿತ್ರದುರ್ಗ   ಬಸವೇಶ್ವರರ ಜಯಂತಿ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಮೇ. 10 : ರಕ್ತದಾನ ಆರೋಗ್ಯಕ್ಕೆ ಪೂರಕ. ಮಾರಕವಲ್ಲ ಎಂದು ಕಲ್ಕೆರೆ ಮಠದ ಬಸವಲಿಂಗಸ್ವಾಮಿ ಹೇಳಿದರು.

ವೀರಶೈವ ಸಮಾಜ, ಪ್ರಥಮ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಸಹಯೋಗದೊಂದಿಗೆ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಸಾಂಸ್ಕøತಿಕ ನಾಯಕ ವಿಶ್ವಗುರು  ಬಸವಣ್ಣನವರ ಜಯಂತಿ ಪ್ರಯಕ್ತ ಏರ್ಪಡಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಗಾಟಿಸಿ ಮಾತನಾಡಿದರು.

ಯುವಕ-ಯುವತಿಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದರಿಂದ ಅಮೂಲ್ಯವಾದ ಜೀವ ಉಳಿಯುತ್ತದೆ. ಕೆಟ್ಟ ಹವ್ಯಾಸಗಳನ್ನು ಕಲಿಯುವ ಬದಲು ರಕ್ತದಾನ ಮಾಡುವುದು ಒಳ್ಳೆಯದು. ದಿನ ದಿನಕ್ಕೂ ರಕ್ತದ ಅವಶ್ಯಕತೆಯಿದೆ. ಮಾನವನ ಶರೀರದ ಎಲ್ಲಾ ಅಂಗಾಂಗಗಳು ಭಗವಂತ ಕೊಟ್ಟ ವರ ಎಂದು ತಿಳಿಸಿದರು.


ಹನ್ನೆರಡನೆ ಶತಮಾನದ ಬಸವಣ್ಣನವರು ಸಮ ಸಮಾಜಕ್ಕಾಗಿ ಹೋರಾಡಿದವರು. ಅಂತಹವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಪಾಲಿಸಬೇಕಿದೆ. ರಕ್ತದಾನ ಮಾಡಲು ಕೆಲವರು ಹಿಂಜರಿಯುತ್ತಾರೆ. ರಕ್ತದಾನದ ಕುರಿತು ಎಲ್ಲರಲ್ಲಿಯೂ ಅರಿವು ಮೂಡಿಸಬೇಕಿದೆ ಎಂದರು.

ಜಿಲ್ಲಾ ರೆಡ್‍ಕ್ರಾಸ್ ಉಪ ಸಭಾಪತಿ ಅರುಣ್‍ಕುಮಾರ್ ಮಾತನಾಡಿ ಚಿತ್ರದುರ್ಗದಲ್ಲಿ ಎರಡು ಹೆದ್ದಾರಿಗಳು ಹಾದು ಹೋಗಿರುವುದರಿಂದ ಅಪಘಾತಗಳು ಹೆಚ್ಚು ಸಂಭವಿಸುತ್ತಿರುತ್ತವೆ. ಹೆರಿಗೆ ಸಮಯದಲ್ಲಿ ರಕ್ತದ ಅವಶ್ಯಕತೆ ತುಂಬಾ ಮುಖ್ಯ. ರಕ್ತಕ್ಕೆ ಪರ್ಯಾಯ ಯಾವುದೂ ಇಲ್ಲ. ಆದ್ದರಿಂದ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರ ಪ್ರಾಣ ಉಳಿಸಬೇಕೆಂದು ಹೇಳಿದರು.

ರಕ್ತ ನೀಡಿದರೆ ನಿಶ್ಯಕ್ತಿಯಾಗುತ್ತದೆನ್ನುವ ತಪ್ಪು ಕಲ್ಪನೆ ಸರಿಯಲ್ಲ. ಆರೋಗ್ಯವಂತ ಪುರುಷರು ಮೂರು ತಿಂಗಳಿಗೊಮ್ಮೆ, ಮಹಿಳೆಯರು ನಾಲ್ಕು ತಿಂಗಳಿಗೊಂದು ಸಾರಿ ರಕ್ತದಾನ ಮಾಡಬಹುದು. ಒಬ್ಬರ ರಕ್ತದಿಂದ ಮೂವರ ಪ್ರಾಣ ಉಳಿಯುತ್ತದೆ. ರಕ್ತದಾನದಿಂದ ಹೃದಯ ಸಂಬಂಧಿ ಕಾಯಿಲೆ ದೂರವಾಗಿ ಕೊಬ್ಬಿನಂಶ ಕಡಿಮೆಯಾಗುತ್ತದೆ ಎಂದು ರಕ್ತದಾನದ ಮಹತ್ವ ತಿಳಿಸಿದರು.

ಕಡ್ಲೆಗುದ್ದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶ್, ಕೀರ್ತಿಕುಮಾರ್, ಚಂದ್ರಕಲ, ದೀಪಿಕ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.

Advertisement
Tags :
Advertisement