Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಅನಧಿಕೃತ ಕಬ್ಬಿಣದ ಅದಿರು ಸಾಗಾಣಿಕೆ ವಾಹನಗಳ ವಶ

04:51 PM Jul 04, 2024 IST | suddionenews
Advertisement

ಚಿತ್ರದುರ್ಗ. ಜುಲೈ04 : ಅನಧಿಕೃತವಾಗಿ ಕಬ್ಬಿಣದ ಅದಿರು ಸಾಗಾಣಿಕೆ ಮಾಡುತ್ತಿದ್ದ ವಾಹನಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಚಳ್ಳಕೆರೆಯಲ್ಲಿ ಬುಧವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.

Advertisement

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಡಾ.ಎಂ.ಜೆ.ಮಹೇಶ್, ಹಿರಿಯ ಭೂ ವಿಜ್ಞಾನಿ ಕೆ.ಎಸ್.ನಾಗೇಂದ್ರಪ್ಪ ಅವರ ನೇತೃತ್ವದಲ್ಲಿ ಭೂ ವಿಜ್ಞಾನಿಗಳಾದ ಬಿ.ಎನ್.ಉಮಾಪತಿ ಮತ್ತು ಪಿ.ಮಂಜಪ್ಪ ಹಾಗೂ ಸಿಬ್ಬಂದಿಗಳಾದ ಚೇತನ್ ಮತ್ತು ಜಾಕೀರ್ ಅವರೊಂದಿಗೆ ಗಸ್ತು ಕಾರ್ಯ ನಡೆಸಿ ಅನಧಿಕೃತವಾಗಿ ಕಬ್ಬಿಣದ ಅದಿರು ಸಾಗಾಣಿಕೆ ಮಾಡುತ್ತಿದ್ದ ಮೂರು ವಾಹನಗಳನ್ನು ವಶಪಡಿಸಿಕೊಂಡು ಚಳ್ಳಕೆರೆ ಪೊಲೀಸ್ ಠಾಣೆ ವಶಕ್ಕೆ ನೀಡಲಾಗಿದೆ.

ಎಂ.ಎಂ (ಆರ್ ಅಂಡ್ ಡಿ) ಆಕ್ಟ್ 1957ರಂತೆ ವಾಹನಗಳ ಮಾಲೀಕರು, ಚಾಲಕರು ಹಾಗೂ ಇದಕ್ಕೆ ಭಾಗಿಯಾಗಿರುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

Advertisement

Advertisement
Tags :
bengaluruchitradurgaseizuresuddionesuddione newstransport vehiclesunauthorized iron oreಅನಧಿಕೃತಕಬ್ಬಿಣದ ಅದಿರು ಸಾಗಾಣಿಕೆಚಿತ್ರದುರ್ಗಬೆಂಗಳೂರುವಾಹನಗಳ ವಶಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article