For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಎಸ್.ಜೆ.ಎಂ. ದಂತ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

05:56 PM Nov 28, 2024 IST | suddionenews
ಚಿತ್ರದುರ್ಗ   ಎಸ್ ಜೆ ಎಂ  ದಂತ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ನ. 28 : ಕನ್ನಡ ನಮ್ಮ ಮಾತೃ ಭಾಷೆ. ಇದನ್ನು ನಾವು ಆಡುವುದಲ್ಲದೆ ಬೇರೆಯವರು ಆಡುತ್ತಾರೆಯೇ ನಮ್ಮ ಭಾಷೆಯನ್ನು ನಾವು ಬಳಸುವುದರ ಮೂಲಕ ಅದಕ್ಕೆ ಜೀವವನ್ನು ತುಂಬುವ ಕೆಲಸವಾಗಬೇಕಿದೆ ಎಂದು ಎಸ್.ಜೆ.ಎಂ. ವಿದ್ಯಾಪೀಠ (ರಿ) ಮತ್ತು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ತಿಳಿಸಿದರು.

Advertisement

ಎಸ್.ಜೆ.ಎಂ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆವತಿಯಿಂದ ಗುರುವಾರ ಕಾಲೇಜಿನ ಆವರಣದ ಶಿ.ಮು.ಶ. ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕನ್ನಡಕಲರವ 2024ರ ಧ್ವಜಾರೋಹಣ ನೇರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸ ಇದೆ ಸುಮಾರು 900 ವರ್ಷಗಳ ಹಿಂದೆಯೇ ಕನ್ನಡವನ್ನು ವಿವಿಧ ರೀತಿಯ ಶಾಸನಗಳಲ್ಲಿ ಕಾಣಬಹುದಾಗಿದೆ, ಇದ್ದಲ್ಲದೆ 12ನೇ ಶತಮಾನದಲ್ಲಿ ಶರಣರು ತಮ್ಮ ವಚನಗಳನ್ನು ಕನ್ನಡದಲ್ಲಿ ರಚನೆ ಮಾಡುವುದರ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳಸಿದ್ದಾರೆ. ಕನ್ನಡ ಭಾಷೆಗೆ ಹಲವಾರು ಜನತೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ, ಅದು ತಮ್ಮ ಸಾಹಿತ್ಯದ ಮೂಲಕ ಕಥೆಗಳ ಮೂಲಕ, ಕಾವ್ಯಗಳು ಮೂಲಕ ಕನ್ನಡದ ಸೇವೆಯನ್ನು ಮಾಡಿದ್ದಾರೆ ಎಂದರು.

ದೇಶದಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ವಿಗಂಡಣೆ ಮಾಡಲಾಯಿತು, ತಮಿಳು ಮಾತನಾಡುವವರಿಗೆ ತಮಿಳುನಾಡು,

ಮರಾಠಿಯನ್ನು ಮಾತನಾಡುವವರಿಗೆ ಮಹಾರಾಷ್ಟ್ರ, ಕನ್ನಡ ಭಾಷೆಯನ್ನು ಮಾತನಾಡುವವರಿಗೆ ಕರ್ನಾಟಕ ಎಂದು ಹೇಳಲಾಗಿತ್ತು ಇದರಲ್ಲಿ ಕರ್ನಾಟಕ ಹಿಂದೆ ನಾಲ್ಕು ಭಾಗವಾಗಿತ್ತು, ಅದನ್ನು ಒಂದು ಮಾಡಿ ಕರ್ನಾಟಕ ಎಂದು ಮರು ನಾಮಕರಣವನ್ನು ಮಾಡಲಾಯಿತು. ಅಂದಿನಿಂದ ನಮ್ಮ ಭಾಷೆ ಕನ್ನಡವಾಗಿತು. ಕನ್ನಡ ಎಂದರೆ ಬರೀ ಭಾಷೆಯಲ್ಲ ಅದೊಂದು ಶಕ್ತಿಯಾಗಿದೆ. ಇಲ್ಲಿ ನಡೆಯುವ ಕನ್ನಡ ಕಲರವ ಬರೀ ಬಟ್ಟೆಯ ಮೇಲೆ ಆಗಬಾರದು, ಇದು ನಮ್ಮ ಬದುಕಿನಲ್ಲಿ ಇರುವಂತೆಯಾಗಬೇಕಿದೆ. ಕನ್ನಡ ಭಾಷೆಯಲ್ಲಿ ಭಾವ್ಯಕ್ಯತೆಯನ್ನು ಮೂಡಿಸುವಂತ ವಾತಾವರಣ ಇದೆ ಎಂದರು.

ನಮ್ಮಗೆ ದೊರೆತ್ತಿರುವ ಹಲವಾರು ಶಾಸನಗಳಲ್ಲಿ ಜನತೆ ಆವಾಗ ಯಾವ ರೀತಿ ಬದುಕನ್ನು ನಡೆಸುತ್ತಿದ್ದರು ಎಂಬುದನ್ನು ಚಿತ್ರಿಸಿದ್ದಾರೆ. ಪರಕೀಯರು ನಮ್ಮನ್ನಾಳಿದ್ದರಿಂದ ಇಂದು ನಮ್ಮಲ್ಲಿ ಪರಕೀಯ ಭಾಷೆಯ ಪ್ರಮಾಣ ಹೆಚ್ಚಾಗುತ್ತಿದೆ. ಇದರ ವ್ಯಾಮೋಹವನ್ನು ಬಿಡಬೇಕು ನಮ್ಮ ಮಾತೃ ಭಾಷೆಯನ್ನು ಹೆಚ್ಚಾಗಿ ಬಳಕೆ ಮಾಡಬೇಕಿದೆ, ಎಲ್ಲರು ಸೇರಿ ನಮ್ಮ ಭಾಷೆಯನ್ನು ಉಳಿಸಿ ಬೆಳಸಬೇಕಿದೆ. ನಾವು ನಮ್ಮ ಭಾಷೆಯನ್ನು ಮಾತನಾಡದಿದ್ದರೆ ಅದು ಬೆಳೆಯುವುದು ಹೇಗೇ, ಕನ್ನಡ ಭಾಷೆಯ ಅಕ್ಷರದಿಂದ ನಮ್ಮ ಬದುಕನ್ನು ಕಟ್ಟುವ ಕೆಲಸವಾಗಬೇಕಿದೆ. ನಮ್ಮಲ್ಲಿ ಹಿಂದೆ ಜೈನ್ಯ ಧರ್ಮದವರು ನಮ್ಮ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳುವುದರ ಮೂಲಕ ತಮ್ಮ ಧರ್ಮವನ್ನು ಬೆಳಸಿಕೊಂಡರು, ನಮ್ಮ ಬದುಕು ವಿನಯದಿಂದ ಕೊಡಿರಬೇಕಿದೆ, ಸರಳತೆಯನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಬಸವಕುಮಾರ್ ಸ್ವಾಮೀಜಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಾಹಿತಿಗಳು, ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕಾರ್ಯದರ್ಶಿಗಳಾದ  ಹುರುಳಿ ಎಂ ಬಸವರಾಜ್ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಹೆಚ್.ರಘುನಾಥ್ ರೆಡ್ಡಿ, ಉಪ ಪ್ರಾಂಶುಪಾಲರಾದ ಹರಿಣಿ ಭಾಗವಹಿಸಿದ್ದರು.

Advertisement
Tags :
Advertisement