Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ವಿವಿಧ ದೇವಾಲಯಗಳಲ್ಲಿ ರಾಮನವಮಿ ಸಂಭ್ರಮ ಹೇಗಿತ್ತು ಗೊತ್ತಾ ?

06:19 PM Apr 17, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 17 : ರಾಮನವಮಿ ಅಂಗವಾಗಿ ನಗರದ ವಿವಿಧ ದೇವಾಲಯಗಳಲ್ಲಿ ಬುಧವಾರ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.

Advertisement

ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮ ದೇವಸ್ಥಾನದ ಮುಂಭಾಗ ರಾಮ ಸೀತೆಯ ಫೋಟೋ ಇರಿಸಿ ಶ್ರದ್ದಾಭಕ್ತಿಯಿಂದ ಪೂಜಿಸಿ ನೂರಾರು ಭಕ್ತರಿಗೆ ಕೋಸಂಬರಿ ಪಾನಕ ವಿತರಿಸಲಾಯಿತು.


ರಂಗಯ್ಯನಬಾಗಿಲು ಸಮೀಪವಿರುವ ರಾಮನ ದೇವಸ್ಥಾನ ಹಾಗೂ ಶ್ರೀರಾಮನ ಪರಮಭಂಟ ಆಂಜನೇಯನ ದೇವಸ್ಥಾನಗಳಲ್ಲಿಯೂ ವಿಶೇಷವಾಗಿ ಪೂಜಿಸಲಾಯಿತು.


ಬನ್ನಿಮಹಾಕಾಳಮ್ಮ, ಆನೆ ಬಾಗಿಲು ಸಮೀಪವಿರುವ ಆಂಜನೇಯಸ್ವಾಮಿ ಹಾಗೂ ಅಂಭಾ ಭವಾನಿ ದೇವಸ್ಥಾನದಲ್ಲಿ ಶ್ರೀರಾಮ ಸೀತಾಮಾತೆಯನ್ನು ಪೂಜಿಸಲಾಯಿತು. ಬಹುತೇಕ ದೇವಾಲಯಗಳಲ್ಲಿ ಕೋಸಂಬರಿ ಪಾನಕ ಹಂಚಲಾಯಿತು.

Advertisement
Tags :
bengaluruchitradurgaRama Navami celebrationsuddionesuddione newsvarious templesಚಿತ್ರದುರ್ಗಬೆಂಗಳೂರುರಾಮನವಮಿ ಸಂಭ್ರಮವಿವಿಧ ದೇವಾಲಯಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article