For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ವಿವಿಧ ದೇವಾಲಯಗಳಲ್ಲಿ ರಾಮನವಮಿ ಸಂಭ್ರಮ ಹೇಗಿತ್ತು ಗೊತ್ತಾ ?

06:19 PM Apr 17, 2024 IST | suddionenews
ಚಿತ್ರದುರ್ಗ   ವಿವಿಧ ದೇವಾಲಯಗಳಲ್ಲಿ ರಾಮನವಮಿ ಸಂಭ್ರಮ ಹೇಗಿತ್ತು ಗೊತ್ತಾ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 17 : ರಾಮನವಮಿ ಅಂಗವಾಗಿ ನಗರದ ವಿವಿಧ ದೇವಾಲಯಗಳಲ್ಲಿ ಬುಧವಾರ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.

Advertisement
Advertisement

ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮ ದೇವಸ್ಥಾನದ ಮುಂಭಾಗ ರಾಮ ಸೀತೆಯ ಫೋಟೋ ಇರಿಸಿ ಶ್ರದ್ದಾಭಕ್ತಿಯಿಂದ ಪೂಜಿಸಿ ನೂರಾರು ಭಕ್ತರಿಗೆ ಕೋಸಂಬರಿ ಪಾನಕ ವಿತರಿಸಲಾಯಿತು.


ರಂಗಯ್ಯನಬಾಗಿಲು ಸಮೀಪವಿರುವ ರಾಮನ ದೇವಸ್ಥಾನ ಹಾಗೂ ಶ್ರೀರಾಮನ ಪರಮಭಂಟ ಆಂಜನೇಯನ ದೇವಸ್ಥಾನಗಳಲ್ಲಿಯೂ ವಿಶೇಷವಾಗಿ ಪೂಜಿಸಲಾಯಿತು.


ಬನ್ನಿಮಹಾಕಾಳಮ್ಮ, ಆನೆ ಬಾಗಿಲು ಸಮೀಪವಿರುವ ಆಂಜನೇಯಸ್ವಾಮಿ ಹಾಗೂ ಅಂಭಾ ಭವಾನಿ ದೇವಸ್ಥಾನದಲ್ಲಿ ಶ್ರೀರಾಮ ಸೀತಾಮಾತೆಯನ್ನು ಪೂಜಿಸಲಾಯಿತು. ಬಹುತೇಕ ದೇವಾಲಯಗಳಲ್ಲಿ ಕೋಸಂಬರಿ ಪಾನಕ ಹಂಚಲಾಯಿತು.

Advertisement
Tags :
Advertisement