Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಪಾರ್ಶ್ವನಾಥ ಶಾಲೆಯ ವಿದ್ಯಾರ್ಥಿಗಳಿಂದ ರಕ್ಷಾ ಬಂಧನ ಆಚರಣೆ

06:00 PM Aug 19, 2024 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ, ಆ.19:  ನಗರದ ಪಾರ್ಶ್ವ ನಾಥ ವಿದ್ಯಾ ಸಂಸ್ಥೆಯ ಆಡಿಯಲ್ಲಿ ಸೋಮವಾರ ರಕ್ಷಾ ಬಂಧನ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಪಾಶ್ರ್ವನಾಥ ವಿದ್ಯಾ ಸಂಸೈಯ ಉಪಾಧ್ಯಕ್ಷರಾದ ಉತ್ತಮಚಂದ್ ಸುರಾನ ಮಾತನಾಡಿ, ಸೋದರತ್ವದ ಭಾಂದವ್ಯ ಸಾರುವ ಹಬ್ಬವೇ ರಕ್ಷಾ ಬಂಧನವಾಗಿದೆ ಅಣ್ಣ-ತಂಗಿಯವ ಮಧ್ಯೆ ಪ್ರೀತಿಯನ್ನು ಮೂಡಿಸುವ ಹಬ್ಬವಾಗಿ ರಾಖಿ ಹಬ್ಬ ದ್ವಾಪರಯುಗದಿಂದಲೂ ಸಹಾ ಆಚರಣೆಯಲ್ಲಿ ಇದೆ ನಮ್ಮ ಶಾಲೆಯಲ್ಲಿ ಈ ಹಬ್ಬವನ್ನು ಆಚರಣೆ ಮಾಡುವುದರ ಮೂಲಕ ಶಾಲೆಯಲ್ಲಿ ಅಭ್ಯಾಸವನ್ನು ಮಾಡುವ ಮಕ್ಕಳಲ್ಲಿ ಸಹೋದರ ಭಾವನೆಯನ್ನು ಮೂಡಿಸುವ ವಾತಾವರಣವನ್ನು ನಿರ್ಮಾಣ ಮಾಡಲಾಗುವುದು ಎಂದರು.

Advertisement

ಸೋದರಿಗೆ ರಕ್ಷಣೆಯ ಭರವಸೆಯನ್ನು ನೀಡುವ ಸೋದರತೆಯನ್ನು ಸಾರುವ ರಕ್ಷಾ ಬಂಧನಕ್ಕೆ ಶತಮಾನಗಳ ಇತಿಹಾಸ ಇದೆ, ಪೌರಾಣಿಕ ಹಿನ್ನಲೆಯನ್ನು ಸಹಾ ಹೊಂದಿದೆ. ರಕ್ಷಾ ಬಂಧನ ಎನ್ನುವುದು ಪವಿತ್ರವಾದ ಸಂಸ್ಕøತ ಪದವಾಗಿದೆ. ರಕ್ಷಣೆಯ ಬಂಧ ಎಂದು ಇದರ ಅರ್ಥ, ರಕ್ಷಾ ಬಂಧನದಲ್ಲಿ ಸಹೋದರಿಯರು ತಮ್ಮ ಸಹೋದರರಿಗೆ ಏಳ್ಗೆಯನ್ನು ಬಯಸುತ್ತಾರೆ. ಭಗವಂತ ಇವರಿಗೆ ಧೀರ್ಘಾಯಷ್ಯಕ್ಕಾಗಿ ವ್ರತವನ್ನು ಆಚರಣೆ ಮಾಡುತ್ತಾ ಸಹೋದರನ ಮಣಿ ಕೈಗೆ ರಕ್ಷಾ ದಾರವನ್ನು ಕಟ್ಟುತ್ತಾರೆ. ಇದರ ಮೂಲಕ ಸಹೋದರನಿಂದ ರಕ್ಷಣೆಯನ್ನು ಭರವಸೆಯನ್ನು ಪಡೆಯುತ್ತಾರೆ. ಇದರೊಂದಿಗೆ ಸಹೋದರಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ನೀಡುತ್ತಾನಲ್ಲದೆ ಸಹೋದರ-ಸಹೋದರಿಯ ನಡುವಿನ ಸಂಬಂಧ ಬಲವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಾ ಕಾರ್ಯದರ್ಶಿ ಸುರೇಶ್ ಮುತ್ತ, ಖಂಜಾಚಿ ರಾಜೇಂದ್ರ ದಲೇಷಾ, ಮುಖ್ಯ ಶಿಕ್ಷಕಿಯಾದ ನಾಜಿಮಾ ಶಾಂತಕುಮಾರಿ ಹಾಗೂ ಶಿಕ್ಷಕಿಯರು ಭಾಗವಹಿಸಿದ್ದರು, ತದ ನಂತರ ಮಕ್ಕಳಿಂದ ರಕ್ಷಾ ಬಂಧನ ಕುರಿತಾ ನೃತ್ಯ ಪ್ರದರ್ಶನವಾಯಿತು.

Advertisement
Tags :
bengalurucelebrationchitradurgaParswanath SchoolRaksha Bandhanstudentssuddionesuddione newsಚಿತ್ರದುರ್ಗಪಾರ್ಶ್ವನಾಥ ಶಾಲೆಬೆಂಗಳೂರುರಕ್ಷಾ ಬಂಧನ ಆಚರಣೆವಿದ್ಯಾರ್ಥಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article