For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಜಿಲ್ಲೆಯಲ್ಲಿ ಸೋಮವಾರ ಸುರಿದ ಮಳೆ ವರದಿ

03:57 PM May 21, 2024 IST | suddionenews
ಚಿತ್ರದುರ್ಗ   ಜಿಲ್ಲೆಯಲ್ಲಿ ಸೋಮವಾರ ಸುರಿದ ಮಳೆ ವರದಿ
Advertisement

ಚಿತ್ರದುರ್ಗ. ಮೇ.21 :  ಸೋಮವಾರ ರಾತ್ರಿ ಸುರಿದ ಮಳೆಗೆ ಹಿರಿಯೂರು ತಾಲ್ಲೂಕಿನ ಸೂಗೂರಿನಲ್ಲಿ 108.6 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ.

Advertisement
Advertisement

ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 54.4 ಮಿ.ಮೀ, ಇಕ್ಕನೂರಿನಲ್ಲಿ 68.4 ಮಿ.ಮೀ, ಈಶ್ವರಗೆರೆಯಲ್ಲಿ 51 ಮಿ.ಮೀ, ಬಬ್ಬೂರಿನಲ್ಲಿ 59.2ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 45.8 ಮಿ.ಮೀ, ಚಿತ್ರದುರ್ಗ-2ರಲ್ಲಿ 41.3 ಮಿ.ಮೀ ಭರಮಸಾಗರದಲ್ಲಿ 38.4ಮಿ.ಮೀ, ಹಿರೇಗುಂಟನೂರಿನಲ್ಲಿ 13.4ಮಿ.ಮೀ, ತುರುವನೂರಿನಲ್ಲಿ 28.6ಮಿ.ಮೀ, ಸಿರಿಗೆರೆ 28.8ಮಿ.ಮೀ ಹಾಗೂ ಐನಳ್ಳಿಯಲ್ಲಿ 36.2 ಮಿ.ಮೀ ಮಳೆಯಾಗಿದೆ.

Advertisement
Advertisement

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 72.6 ಮಿ.ಮೀ, ಬಾಗೂರು 55.5 ಮಿ.ಮೀ, ಮಾಡದಕೆರೆ 62 ಮಿ.ಮೀ, ಮತ್ತೋಡಿನಲ್ಲಿ 13.2 ಮಿ.ಮೀ ಹಾಗೂ ಶ್ರೀರಾಂಪುರದಲ್ಲಿ 45.2 ಮಿ.ಮೀ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 30.6 ಮಿ.ಮೀ, ರಾಮಗಿರಿ 31.5ಮಿ.ಮೀ, ಚಿಕ್ಕಜಾಜೂರು 30.5 ಮಿ.ಮೀ, ಬಿ.ದುರ್ಗ 29.2 ಮಿ.ಮೀ, ಹೆಚ್.ಡಿ.ಪುರ 38.6 ಮಿ.ಮೀ ಮತ್ತು ತಾಳ್ಯದಲ್ಲಿ 6.2ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 44 ಮಿ.ಮೀ, ಪರಶುರಾಂಪುರ 46.2ಮಿ.ಮೀ, ನಾಯಕನಹಟ್ಟಿ 50.4ಮಿ.ಮೀ, ತಳಕು 31.2ಮಿ.ಮೀ ಹಾಗೂ ಡಿ.ಮರಿಕುಂಟೆಯಲ್ಲಿ 35.4ಮಿ.ಮೀ ಮಳೆಯಾಗಿದೆ.

ಜಿಲ್ಲೆಯಾದ್ಯಂತ 34 ಮನೆ ಭಾಗಶಃ ಹಾನಿ, 11.48 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ: ಸೋಮವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯಾದ್ಯಂತ 34 ಮನೆಗಳು ಭಾಗಶಃ ಹಾನಿಯಾಗಿದ್ದು, 1 ದೊಡ್ಡ ಜಾನುವಾರು, 2 ಸಣ್ಣ ಜಾನುವಾರು ಹಾಗೂ 1 ಜೀವಹಾನಿಯಾಗಿದೆ. ಜಿಲ್ಲೆಯಾದ್ಯಂತ ಒಟ್ಟು 11.48 ಹೆಕ್ಟೇರ್ ತೋಟಗಾರಿಕೆ ಬೆಳೆನಾಶ ಮತ್ತು  ಮೂರು ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ ವರದಿಯಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 5 ಮನೆಗಳು ಭಾಗಶಃ ಹಾನಿಯಾಗಿವೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಭಾಗಶಃ 7 ಮನೆಹಾನಿ, 1 ದೊಡ್ಡ ಜಾನುವಾರು ಹಾಗೂ 1 ಜೀವಹಾನಿ ಹಾಗೂ 3 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನಲ್ಲಿ ಭಾಗಶಃ 4 ಮನೆಗಳು ಹಾನಿಯಾಗಿವೆ. ಹೊಸದುರ್ಗ ತಾಲ್ಲೂಕಿನಲ್ಲಿ 10 ಮನೆಗಳು ಭಾಗಶಃ ಹಾನಿ ಹಾಗೂ 2 ಸಣ್ಣ ಜಾನುವಾರು, 1 ಹೆಕ್ಟೇರ್ ತೋಟಗಾರಿಕೆ ಬೆಳೆ ಮತ್ತು 3 ಮನೆಗಳಿಗೆ ನೀರು ನುಗ್ಗಿರುವ ಕುರಿತು ಪ್ರಕರಣ ವರದಿಯಾಗಿದೆ.

ಹಿರಿಯೂರು ತಾಲ್ಲೂಕಿನಲ್ಲಿ ಭಾಗಶಃ 5 ಮನೆಹಾನಿ ಮತ್ತು 7.48 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಭಾಗಶಃ 3 ಮನೆಗಳು ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Tags :
Advertisement