Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಯುವತಿಗೆ ಮದುವೆಯಾಗುವುದಾಗಿ ಮೋಸ ಮಾಡಿದ್ದ ಆರೋಪಿಗೆ ಶಿಕ್ಷೆ ವಿಧಿಸಿದ ಕೋರ್ಟ್

05:55 PM Jan 23, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.23 : ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಸಾಧಿಸಿ ವಂಚಿಸಿ ಪರಾರಿಯಾಗಿದ್ದ ಆರೋಪಿಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಹಾಗೂ ದಂಡ ವಿಧಿಸಿದೆ.

Advertisement

ಚಿತ್ರದುರ್ಗ ತಾಲ್ಲೂಕಿನ ಕುರುಬರಹಳ್ಳಿ ಗ್ರಾಮದ ವಾಸಿ (ಹಿರೇಗುಂಟೂರು ಹೋಬಳಿ) ಕಿರಣ್ ಕುಮಾರ್
ಶಿಕ್ಷೆಗೊಳಗಾದವರು.

ಚಿತ್ರದುರ್ಗ ನಗರದ ಬರಗೇರಿ ಬೀದಿಯ ಸುಮತ (ಹೆಸರು ಬದಲಿಸಲಾಗಿದೆ) ಅವರನ್ನು ಪರಿಚಯ ಮಾಡಿಕೊಂಡು ನಾನು ನಿನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗುವುದಿಲ್ಲವೆಂದು ನಂಬಿಸಿ ಆಟೋದಲ್ಲಿ ಸುತ್ತಾಡಿಸಿ ದಿನಾಂಕ: 18-7-2020 ರಂದು ಸುಮತ ಅವರನ್ನು ನಗರದ ರೇವತಿ ಲಾಡ್ಜ್ ಗೆ ಕರೆದುಕೊಂಡು ಹೋಗಿ ರೂಂ ಬಾಡಿಗೆ ಪಡೆದು ಆಕೆಯೊಂದಿಗೆ ದೈಹಿಕ ಸಂಪರ್ಕ( ಅವಳ ಇಚ್ಛೆಗೆ ವಿರುದ್ಧವಾಗಿ) ಬೆಳೆಸಿ ನಂತರ ಮದುವೆ ಮಾಡಿಕೊಳ್ಳಲು ನಿರಾಕರಿಸಿ ವಂಚಿಸಿದ್ದಾನೆ.

Advertisement

ಈ ಸಂಬಂಧ ಆರೋಪಿ ಕಿರಣ್ ಕುಮಾರ್ ವಿರುದ್ದ ಚಿತ್ರದುರ್ಗ ನಗರ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು  ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಬಿ.ಕೆ. ಗೀತಾ ಅವರು ಅಪರಾಧಿ ಕಿರಣ್ ಕುಮಾರ್ ಗೆ 6 ತಿಂಗಳು ಸಜೆ ಹಾಗೂ ರೂ.20,000/- ದಂಡ ವಿಧಿಸಿ ಜನವರಿ 22 ರಂದು
( ದಿ:22-1-2024) ತೀರ್ಪನ್ನು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕರಾದ  ಬಿ.ಗಣೇಶ ನಾಯ್ಕ ಇವರು ವಿಚಾರಣೆಯನ್ನು ನಡೆಸಿ ವಾದ ಮಂಡಿಸಿರುತ್ತಾರೆ.

ಫೋನ್ ನಂಬರ್ : ಬಿ.ಗಣೇಶ ನಾಯ್ಕ: 9972977047
ಪ್ರಧಾನ ಸರ್ಕಾರಿ ಅಭಿಯೋಜಕರು, ಚಿತ್ರದುರ್ಗ.

Advertisement
Tags :
Accusedchitradurgaಆರೋಪಿಗೆ ಶಿಕ್ಷೆಚಿತ್ರದುರ್ಗಮೋಸ ಮಾಡಿದ್ದ ಆರೋಪಿಯುವತಿಗೆ ಮದುವೆವಿವಾಹಶಿಕ್ಷೆ ವಿಧಿಸಿದ ಕೋರ್ಟ್
Advertisement
Next Article