For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಎಸ್ ಎಲ್ ವಿ ಶಾಲೆಯಲ್ಲಿ  ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

11:26 AM Jul 27, 2024 IST | suddionenews
ಚಿತ್ರದುರ್ಗ   ಎಸ್ ಎಲ್ ವಿ ಶಾಲೆಯಲ್ಲಿ  ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ
Advertisement

ಸುದ್ದಿಒನ್, ಚಿತ್ರದುರ್ಗ : ತಾಲ್ಲೂಕಿನ ಕುರುಬರಹಳ್ಳಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಶಾಲೆಯಲ್ಲಿ ಶುಕ್ರವಾರ ಹುಲ್ಲೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ನಡೆಯಿತು.

Advertisement

ಶ್ರೀ ಬಾಲಾಜಿ ಯುವಕರ ಸಂಘ ಹಾಗೂ  ಎಸ್ ಎಲ್ ವಿ  ನೇತೃತ್ವದಲ್ಲಿ ಶಾಲೆಯಲ್ಲಿ ಆಯೋಜನೆ ಮಾಡಲಾಗಿತ್ತು.  ಹುಲ್ಲೂರು ಕ್ಲಸ್ಟರ್ ವ್ಯಾಪ್ತಿಯ  2 ಕಿರಿಯ ಪ್ರಾಥಮಿಕ ಶಾಲೆಗಳು 7 ಹಿರಿಯ ಪ್ರಾಥಮಿಕ ಶಾಲೆಗಳು 4 ಪ್ರೌಢಶಾಲೆಗಳ ಸುಮಾರು 400 ಕ್ಕು ಹೆಚ್ಚಿನ ವಿದ್ಯಾರ್ಥಿಗಳು  ಹಲವಾರು ಸ್ಪರ್ಧೆಗಳಲ್ಲಿ  ಭಾಗವಹಿಸಿದ್ದರು ಎಲ್ಲಾ ವಿದ್ಯಾರ್ಥಿಗಳಿಗೂ ಪೋಷಕರಿಗೂ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತಧಿಕಾರಿಯಾದ ಶ್ರೀಮತಿ ನಗ್ಮಾನಾಗರಾಜ್ ನಾಯಕ್ ಮಾತನಾಡಿ ಮಕ್ಕಳಲ್ಲಿ ಇರುವ ಕಲೆಗಳನ್ನು ಗುರುತಿಸಿ ಶಿಕ್ಷಕರು ಪ್ರೇರೇಪಿಸಬೇಕೆಂದು ತಿಳಿಸಿದರು.

Advertisement

ಸಿಆರ್‌ಪಿ ಬಸವರಾಜ್ ಸಿ ಮಾತನಾಡಿ  ಇದು ಮಕ್ಕಳ ಹಬ್ಬ ಈ ಹಬ್ಬದ ವಾತಾವರಣದಲ್ಲಿ ಮಕ್ಕಳೆಲ್ಲರೂ ನಮಗೆ ಪ್ರದರ್ಶಿಸುವ ಕಲೆಯ ಸಿಹಿಯನ್ನು ನಾವೆಲ್ಲರೂ ಸವಿದು ಮುಕ್ತ ಮನಸ್ಸಿನಿಂದ ನ್ಯಾಯವಾದ ತೀರ್ಪನ್ನು ನೀಡಬೇಕೆಂದು ತಿಳಿಸಿದರು.

ಸಿಆರ್‌ಪಿ ಅಜಯ್ ಮಾತನಾಡಿ ಪ್ರತಿಭಾ ಕಾರಂಜಿ ಮಕ್ಕಳ ಕಲಿಕೆಗೆ ಹೊಸದಾದ ಜೀವನ ಕೌಶಲ್ಯವನ್ನು ಹೊಂದುವನು ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತದೆ ಮತ್ತು ತೀರ್ಪುಗಾರರ ಕೆಲಸದ ಬಗ್ಗೆ ತಿಳಿಸಿ ಮಕ್ಕಳಿಗೂ ಮತ್ತು ಕಾರ್ಯಕ್ರಮಕ್ಕೆ ಶುಭ ಕೋರಿದರು. ಈ ವೇಳೆ ಹುಲ್ಲೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಬಸವರಾಜ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಿಆರ್‌ಪಿ ಮಂಜಣ್ಣ ರವರು ಕಾರ್ಯಕ್ರಮವನ್ನು ನಿರೂಪಿಸಿದರು , ಕುಮಾರಿ ನೇತ್ರಾವತಿ ಸ್ವಾಗತಿಸಿದರು , ಬಶೀರ್ ಅಹಮದ್ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ತಾಲೂಕು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಿ ಆರ್ ಪಿ ಗಳಾದ ಬಸವರಾಜ್ ಸಿ , ಮಂಜಪ್ಪ , ಅಜಯ್ ಕುಮಾರ್ ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಪ್ರದೀಪ್ ಕುಮಾರ್ ಎಸ್* ಹಾಗೂ ಹುಲ್ಲೂರು ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ತಿಪ್ಪೇಸ್ವಾಮಿ , ಜ್ಯೋತಿ,ರೇವಣ್ಣ, ಉಮಾದೇವಿ, ಲತಾ,ಶಂಕರಮೂರ್ತಿ, ಶೈಲಜಾ, ಶಿಕ್ಷಕರಾದ ಶಶಿಕಲಾ, ಗೀತಾ  ವಿನಾಯಕ್ ,ಶಶಿಕುಮಾರ್ ನವೀನ್, ಶಿವಶಂಕರ್, ನಿರ್ಮಲ, ಮೋನಿಕಾ,ಸಹನ,ಅನಿತಾ,ಸಲ್ಮಾ,ದಿವ್ಯ,ರಂಗಪ್ಪ,ಚೇತನ್ ಪಿ ವಿ ಇತರ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.

Tags :
Advertisement