For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಇಂದು ಪ್ರಸನ್ನ ಗಣಪತಿ ವಿಸರ್ಜನೆ : ಕಣ್ಮನ ಸೆಳೆದ ಮೆರವಣಿಗೆ

08:02 PM Sep 15, 2024 IST | suddionenews
ಚಿತ್ರದುರ್ಗ   ಇಂದು ಪ್ರಸನ್ನ ಗಣಪತಿ ವಿಸರ್ಜನೆ   ಕಣ್ಮನ ಸೆಳೆದ ಮೆರವಣಿಗೆ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಸೆ. 15 : ನಗರದ ಆನೆಬಾಗಿಲ ಬಳಿ ಇರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಚಿತ್ತಾಕರ್ಷಕ ಪೆಂಡಾಲ್‌ನಲ್ಲಿ ಶ್ರೀ ಪಸನ್ನ ಗಣಪತಿ ಸೇವಾ ಸಮಿತಿಯಿಂದ ಶಿವಮೊಗ್ಗದ ಶಿಲ್ಪಿಗಳಾದ ಸಿ.ವಿ.ರಾಮಕೃಷ್ಣ, ಸಿ.ವಿ. ಪಾಂಡುರಂಗ ಇದರಿಂದ ಸುಂದರವಾಗಿ ನಿರ್ಮಿಸಿರುವ ಪ್ರಸನ್ನ ಗಣಪತಿಯನ್ನು ಪ್ರತಿಷ್ಠಾಪಿಸಿ, ಸೆ. 7 ರಿಂದ ನಿರ್ಮಾಣ ಮಾಡಲಾಗಿರುವ 67ನೇ ವರ್ಷದ ಪೂಜಾ ಕಾರ್ಯಕ್ರಮವೂ ಸೆ. 15ರವರೆಗೆ ನಡೆದಿದ್ದು, ಪ್ರತಿ ದಿನವೂ ಭಕ್ತಾದಿಗಳಿಂದ ಸೇವೆ ನಡೆದಿದ್ದು,. ಶ್ರೀ ಗಣಪತಿ ಪ್ರೀತ್ಯರ್ಥವಾಗಿ ನವಗ್ರಹ ಪೂಜೆ. ಸಹಸ್ರನಾಮ, ಕುಂಕುಮಾರ್ಚನೆ, ಮಹಾ ಮಂಗಳಾರತಿ ನಡೆದಿದ್ದು, ಸಂಜೆ ಸುಪ್ರಸಿದ್ಧ ವಿದ್ವಾಂಸರುಗಳಿಂದ ಸಂಗೀತ, ಹರಿಕಥೆ, ವಾದ್ಯಗೋಷ್ಠಿ, ಭರತನಾಟ್ಯ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳು ನಡೆದಿದೆ.

Advertisement

ಇಂದು ಗಣಪತಿ ವಿಸರ್ಜನೆ ಇರುವುದರಿಂದ
ಇಂದು ಸಂಜೆ 6 ಗಂಟೆಗೆ ಮಹಾಮಂಗಳಾರತಿ ನಡೆಯಿತು. ನಂತರ ಸರ್ವಾಲಂಕೃತ ವಿದ್ಯುತ್ ದೀಪಗಳಿಂದ ರಥದಲ್ಲಿ ಸಕಲ ದೇವ ಮರ್ಯಾದೆಗಳೊಡನೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಶಾರದ ಬ್ರಾಸ್ ಬ್ಯಾಂಡ್‌ದ ಎಸ್.ವಿ. ಗುರುಮೂರ್ತಿ ಮತ್ತು ವೃಂದ, ಇವರಿಂದ ವಾದ್ಯಗೋಷ್ಠಿ, ಟ್ಯಾಷ್ಯೂ, ಕೀಲು ಕುದುರೆ, ತಟ್ಟೆರಾಯ, ಬೆದರು ಬೊಂಬೆ ಸೇರಿದಂತೆ ವಿವಿಧ ರೀತಿಯ ಜಾನಪದ ಕಲಾ ತಂಡಗಳೊಂದಿಗೆ ಸಾಗಿದ ಮೆರವಣಿಗೆ ಕಣ್ಮನ ಸೆಳೆಯಿತು.

Advertisement

ಶ್ರೀ ಪ್ರಸನ್ನ ಗಣಪತಿಯ ಉತ್ಸವವನ್ನು ನೆಡೆಸಲಾಯಿತು. ರಾತ್ರಿ 10ಕ್ಕೆ ಚಂದ್ರವಳ್ಳಿ ಕೆರೆಯಲ್ಲಿ ಕ್ರೈನ್ ಮುಖಾಂತರ ಉದ್ವಾಸನೆ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

ನಗರದ ಆನೆ ಬಾಗಿಲ ಬಳಿಯ ಮಂಟಪದಿಂದ ಸಂತೇಪೇಟೆ ವೃತ್ತ, ಬಿ.ಡಿ.ರಸ್ತೆ, ಎಸ್.ಬಿ.ಎಂ.ವೃತ್ತ, ಮಾಹಾವೀರ ವೃತ್ತ,ಅಂಬೇಡ್ಕರ್ ವೃತ್ತ, ಬಸವ ಮಂಟಪ ರಸ್ತೆ, ರಂಗಯ್ಯನ ಬಾಗಿಲು, ದೊಡ್ಡಪೇಟೆ, ಉಚ್ಚಂಗಿ ಯಲ್ಲಮ್ಮ ದೇವಾಲಯ,ಚಿಕ್ಕಪೇಟೆ, ಆನೇ ಬಾಗಿಲು, ಬುರುಜನಹಟ್ಟಿ ರಸ್ತೆ, ಬುರುಜನ ಹಟ್ಟಿ, ಸಂಗೊಳ್ಳಿ ರಾಯಣ್ಣ ವೃತ್ತ, ಹೊಳಲ್ಕೆರೆ ರಸ್ತೆ, ಮಾರಮ್ಮ ದೇವಾಲಯ ರಸ್ತೆ, ಕನಕ ವೃತ್ತದ ಮೂಲಕ ಚಂದ್ರವಳ್ಳಿಯನ್ನು ತಲುಪಿ ಅಲ್ಲಿ ನಿರ್ಮಾಣವಾಗಿರುವ ಬಾವಿಯಲ್ಲಿ ಗಣಪತಿಯನ್ನು ಉದ್ವಾಸನೆ ಮಾಡಲಾಗುತ್ತದೆ.

ಗಣಪತಿಯ ರಥೋತ್ಸವವನ್ನು ವೈದ್ಯರಾದ ಮಲ್ಲಿಕಾರ್ಜನ್ ಕೀರ್ತಿ ತಮಟೆ ಬಾರಿಸುವುದರ ಮೂಲಕ ಚಾಲನೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಪಸನ್ನ ಸೇವಾ ಗಣಪತಿ ಸಮಿತಿಯ ಕಾರ್ಯಾಧ್ಯಕ್ಷರಾದ ಜೆ.ಗೋಪಾಲರಾವ್ ಜಾಧವ್, ಪ್ರಧಾನ ಕಾರ್ಯದರ್ಶಿಗಳಾದ ಪಿ.ಎಲ್.ಶಿವಕುಮಾರ್, ಉಪಾಧ್ಯಕ್ಷರಾದ ಬಿ.ಎಂ.ನಾಗರಾಜ್ ಬೇದ್ರೇ, ಎಲ್.ಎನ್.ರಾಜಕುಮಾರ್, ಖಂಜಾಚಿ ಕೆ.ವಿ,ಆನಂದ್, ಸಹ ಕಾರ್ಯದರ್ಶಿ ಶ್ಯಾಂ ಪ್ರಸಾದ್ ಸ್ಥಪತಿಎ.ಎಸ್.ನಾರಾಯಣರಾವ್, ನಿರ್ದೆಶಕರಾದ ಜೆ,ಎಸ್.ಶಂಭು, ಸಿದ್ದಲಿಂಗೇಶ್ ಜಿ.ಕೆ. ಗಜೇಂದ್ರ, ಉತ್ಸವದ ಕಾರ್ಯಕರ್ತರಾದ ಯಶವಂತಕುಮಾರ್, ವಿದ್ಯಾನಂದ ಲಾಡ್, ವೆಂಕಟೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Tags :
Advertisement