For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ನಾಳೆ ಪ್ರಸನ್ನ ಗಣಪತಿ ಪ್ರತಿಷ್ಠಾಪನೆ : ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ...!

08:19 PM Sep 06, 2024 IST | suddionenews
ಚಿತ್ರದುರ್ಗ   ನಾಳೆ ಪ್ರಸನ್ನ ಗಣಪತಿ ಪ್ರತಿಷ್ಠಾಪನೆ    ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement
Advertisement

ಸುದ್ದಿಒನ್, ಚಿತ್ರದುರ್ಗ ಸೆ. 06 : ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ 67ನೇ ವರ್ಷದ ಪೂಜಾ ಕಾರ್ಯಕ್ರಮವೂ ಸೆಪ್ಟೆಂಬರ್ 07 ರಿಂದ 15 ರವರೆಗೆ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

ಚಿತ್ರದುರ್ಗ ನಗರದ ಆನೆಬಾಗಿಲ ಬಳಿ ಇರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾಜು ಬಿ.ಎಂ. ಇವರಿಂದ ಚಿತ್ತಾಕರ್ಷಕ ಪೆಂಡಾಲ್‍ನಲ್ಲಿ ಶಿವಮೊಗ್ಗದ ಶಿಲ್ಪಿಗಳಾದ ಸಿ.ವಿ.ರಾಮಕೃಷ್ಣ, ಸಿ.ವಿ. ಪಾಂಡುರಂಗ ಇದರಿಂದ ಸುಂದರವಾಗಿ ನಿರ್ಮಿಸಿರುವ ಪ್ರಸನ್ನ ಗಣಪತಿಯನ್ನು ಪ್ರತಿಷ್ಠಾಪಿಸಿ, ಪ್ರತಿ ದಿನವೂ ಭಕ್ತಾದಿಗಳಿಂದ ಸೇವೆ ನಡೆಸಲ್ಪಡುತ್ತದೆ. ಪ್ರತಿ ದಿನ ಬೆಳಗ್ಗೆ 11.30 ಗಂಟೆಗೆ ಶ್ರೀ ಗಣಪತಿ ಪ್ರೀತ್ಯರ್ಥವಾಗಿ ನಮಗ್ರಹ ಪೂಜೆ. ಸಹಸ್ರನಾಮ, ಕುಂಕುಮಾರ್ಚನೆ, ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಹಾಗೂ ಸಂಜೆ 7.00 ಗಂಟೆಯಿಂದ ಸುಪ್ರಸಿದ್ಧ ವಿದ್ವಾಂಸರುಗಳಿಂದ ಸಂಗೀತ, ಹರಿಕಥೆ, ವಾದ್ಯಗೋಷ್ಠಿ, ಭರತನಾಟ್ಯ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ.

Advertisement

Advertisement

ಸೆ. 8ರಂದು ರಾಜ್ಯ ಯುವ ಪ್ರಶಸ್ತಿ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಶ್ರೀ ಸಿರಿ ಮೆಲೋಡಿ ಆರ್ಕೆಸ್ಟ್ರಾದ ಡಿ. ಶ್ರೀಕುಮಾರ್, ಇವರಿಂದ ಮಾತನಾಡುವ ಗೊಂಬೆ, ಹಾಸ್ಯ (ಬಮಿಮಿಕ್ರಿ) ಸುಮಧುರ ಗೀತೆ ಗಾಯನ, ನೃತ್ಯ ಕಾರ್ಯಕ್ರಮ ಸೆ. 9 ನೇ ಸೋಮವಾರ ಶ್ರೀ ಶಾರದಾ ಮೆಲೋಡೀಸ್‍ನ ಶ್ರೀಕಾಂತ್ ಮತ್ತು ತಂಡ, ಇವರಿಂದ ಚಲನಚಿತ್ರ ಗೀತೆಗಳ ಗಾಯನ ಸೆ. 10 ನೇ ಮಂಗಳವಾರ ವಿದ್ವಾನ್ ಹೆಚ್. ಗಾಯತ್ರಿ ಮತ್ತು ತಂಡ, ಶ್ರೀ ಸಾಯಿ ಸರಸ್ವತಿ ವೀಣಾ ಶಾಲೆ, ಇವರಿಂದ ವೀಣಾ ವಾದನ ಹಾಗೂ ಕಲಾಂಜಲಿ ಕರೋಕೆ ವಾದ್ಯಗೋಷ್ಠಿ ಇವರಿಂದ ಚಲನಚಿತ್ರ ಗೀತೆಗಳು ಹಾಗೂ ಭಕ್ತಿ ಗೀತೆಗಳ ಗಾಯನ ಸೆ. 11ರ ಬುಧವಾರ ಲಾಸಿಕಾ ಫೌಂಡೇಷನ್‍ನ ವಿದೂಷಿ ಶ್ವೇತಾ ಮಂಜುನಾಥ್ ಮತ್ತು ತಂಡ, ಇವರಿಂದ ನೃತ್ಯ ಸಂಭ್ರಮ ಕಾರ್ಯಕ್ರಮ ಸೆ 12 ನೇ ಗುರುವಾರ ಸಪ್ತಗಿರಿ ಭಜನಾ ಮಂಡಳಿಯ ಶ್ರೀಮತಿ ಲಕ್ಷ್ಮಿ, ಶ್ರೀನಿವಾಸ್ ಮತ್ತು ತಂಡವರಿಂದ ಭಜನಾ ಕಾರ್ಯಕ್ರಮ ಸೆ. 13 ನೇ ಶುಕ್ರವಾರ ದೂರದರ್ಶನ ಕಲಾವಿದರು, ನಾದಚೈತನ್ಯ ತಂಡದ ಶ್ರೀಮತಿ ರೇಖಾ ಪ್ರೇಮ್ ಕುಮಾರ್ ಇವರಿಂದ ಭಕ್ತಿಭಾವ, ಸಿಂಚÀನ ಗೀತೆ ಗಾನ ಸಂಭ್ರಮ ಸೆ. 14 ನೇ ಶನಿವಾರ ದಾವಣಗೆರೆಯ ತಪಸ್ವಿ ವಾಸವಿ ನೃತ್ಯಾಲಯ, ಮಕ್ಕಳಿಂದ ಶಿವದಾಕ್ಷಾಯಣಿ ನೃತ್ಯ ವೈಭವ (ಶಕ್ತಿ ಪೀಠಗಳ ಸೃಷ್ಟಿಯ ಕಥಾ ರೂಪಕ) ನೃತ್ಯ ಪ್ರದರ್ಶನ

ಸೆ. 13 ನೇ ಶುಕ್ರವಾರ ಶ್ರೀ ಪ್ರಸನ್ನ ಗಣಪತಿಗೆ ಗಣಹೋಮ ಕಾರ್ಯಕ್ರಮ ನಡೆಯಲಿದ್ದು, ಸೆ.15 ನೇ ಭಾನುವಾರ ಸಂಜೆ 6.ಕ್ಕೆ ಮಹಾಮಂಗಳಾರತಿ ನಂತರ ಸರ್ವಾಲಂಕೃತ ವಿದ್ಯುತ್ ದೀಪಗಳಿಂದ ರಥದಲ್ಲಿ ಸಕಲ ದೇವಮರ್ಯಾದೆಗಳೊಡನೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಶಾರದ ಬ್ರಾಸ್ ಬ್ಯಾಂಡ್‍ದ ಎಸ್.ವಿ. ಗುರುಮೂರ್ತಿ ಮತ್ತು ವೃಂದ, ಇವರಿಂದ ವಾದ್ಯಗೋಷ್ಠಿಯೊಂದಿಗೆ ಶ್ರೀ ಪ್ರಸನ್ನ ಗಣಪತಿಯ ಉತ್ಸವವನ್ನು ಏರ್ಪಡಿಸಲಾಗಿದೆ ರಾತ್ರಿ 10.30ಕ್ಕೆ ಚಂದ್ರವಳ್ಳಿ ಕೆರೆಯಲ್ಲಿ ಕ್ರೈನ್ ಮುಖಾಂತರ ಉದ್ವಾಸನೆ ಕಾರ್ಯಕ್ರಮವನ್ನು ನಡೆಯಲಿದೆ.

ಭಕ್ತಾದಿಗಳು ಎಲ್ಲಾ ಕಾರ್ಯಕ್ರಮಗಳಿಗೆ ಆಗಮಿಸಿ ಶ್ರೀ ಪ್ರಸನ್ನ ಗಣಪತಿಯ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ವಿನಂತಿ ಮಾಡಲಾಗಿದೆ.

Tags :
Advertisement