Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | 8 ಲಕ್ಷ ಮೌಲ್ಯದ 80 ಮೊಬೈಲ್ ಫೋನ್ ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು...!

09:20 PM Jul 08, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜುಲೈ.08 : ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಳುವಾಗಿದ್ದ 8 ಲಕ್ಷ ರೂಪಾಯಿ ಮೌಲ್ಯದ 80 ಮೊಬೈಲ್ ಫೋನ್​ಗಳನ್ನು ಇಂದು (ಜುಲೈ. 08) ಪ್ರಾಪರ್ಟಿ ರಿಟರ್ನ್‌ ಪರೇಡ್​ನಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

Advertisement

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ
ನಡೆದ ಪ್ರಾಪರ್ಟಿ ರಿಟರ್ನ್‌ ಪರೇಡ್‌ ಕಾರ್ಯಕ್ರಮದಲ್ಲಿ
ವಾರಸುದಾರರನ್ನು ಕರೆಸಿ, ಅವರಿಗೆ ಮೊಬೈಲ್‌ಗಳನ್ನು ಹಿಂತಿರುಗಿಸಲಾಯಿತು.

ಸಾರ್ವಜನಿಕರು ಮೊಬೈಲ್‌ಗಳನ್ನು ಕಳೆದುಕೊಂಡರೆ ಅಥವಾ ಯಾರಾದರೂ ಕಳವು ಮಾಡಿದರೆ ಈ-ಲಾಸ್ಟ್ ಅಥವಾ ಸಿಇಐಆ‌ರ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದರೆ ಪತ್ತೆ ಹಚ್ಚಿ ಹಿಂತಿರುಗಿಸಲಾಗುವುದು' ಎಂದು ಎಸ್.ಪಿ. ಧರ್ಮೇಂದರ್ ಕುಮಾರ್ ಮೀನಾ ತಿಳಿಸಿದರು.

Advertisement

8 ಲಕ್ಷ ರೂಪಾಯಿ ಮೊತ್ತದ ಒಟ್ಟು 80 ಮೊಬೈಲ್‌ಗಳನ್ನು ಸಾರ್ವಜನಿಕರು ಕಳೆದುಕೊಂಡಿದ್ದರು. ಈ ಕುರಿತು ಈ-ಲಾಸ್ಟ್ ಮತ್ತು ಸಿಇಐಆ‌ರ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದರು. ಮೊಬೈಲ್‌ಗಳ ಪತ್ತೆಗೆ ಎಸ್.ಪಿ. ಧರ್ಮೇಂದರ್ ಕುಮಾರ್ ಮೀನಾ ಅವರು ಡಿವೈಎಸ್ಪಿ ಕುಮಾರಸ್ವಾಮಿ ರವರ ನೇತೃತ್ವದಲ್ಲಿ ತಂಡ ರಚಿಸಿದ್ದರು.

ಚಿತ್ರದುರ್ಗ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು CEIR ತಂತ್ರಾಂಶದ ಸಹಾಯದಿಂದ ಅಂದಾಜು ಮೌಲ್ಯ 8,00,000/-ರೂ ಬೆಲೆ ಬಾಳುವ 80 ವಿವಿಧ ಕಂಪನಿಗಳ ಮೊಬೈಲ್ ಫೋನ್ ಗಳನ್ನು ಕರ್ನಾಟಕ, ಆಂಧ್ರಪ್ರದೇಶ,ಕೇರಳ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ಪತ್ತೆ ಹಚ್ಚಿದ್ದರು.

ಮೊಬೈಲ್ ಪತ್ತೆಗೆ ಶ್ರಮಿಸಿದ ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಎನ್.ವೆಂಕಟೇಶ್, ಭೀಮನಗೌಡ ಪಾಟೀಲ್ ಮತ್ತು ತಂಡದವರ ಯಶಸ್ವಿ ಕಾರ್ಯಾಚರಣೆಯನ್ನು ಶ್ಲಾಘಿಸಿದರು.

Advertisement
Tags :
bengaluruchitradurgahandedmobile phonespoliceProperty paredesuddionesuddione newsಚಿತ್ರದುರ್ಗಪೊಲೀಸರುಪ್ರಾಪರ್ಟಿ ಪರೇಡ್ಬೆಂಗಳೂರುಮೊಬೈಲ್ ಫೋನ್ವಾರಸುದಾರರುಸುದ್ದಿಒನ್ಸುದ್ದಿಒನ್ ನ್ಯೂಸ್ಹಸ್ತಾಂತರ
Advertisement
Next Article