ಚಿತ್ರದುರ್ಗ | ಸರ್ಕಾರಿ ಆಸ್ಪತ್ರೆಯಲ್ಲಿ ಫೋಟೋಶೂಟ್ : ಸಾರ್ವಜನಿಕರ ಆಕ್ರೋಶ
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.09 : ಮದುವೆಗೂ ಮುನ್ನ ಜೋಡಿ ಹಕ್ಕಿಗಳು ಫೋಟೋಶೂಟ್ ಮಾಡಿಸುವುದು ಕಾಮನ್ ಆಗಿದೆ. ಟ್ರೆಂಡಿಂಗ್ ಇದ್ದಂತ ಸಮಯದಲ್ಲಿ ನಾರ್ಮಲ್ ಆಗಿ ಫೋಟೋಶೂಟ್ ಮಾಡಿಸುತ್ತಾ ಇದ್ದರು. ಆದರೆ ಈಗ ಫೋಟೋಶೂಟ್ ಕ್ರೇಜ್ ಹಾಗೇ ಇದೆ. ಆದರೆ ಡಿಫ್ರೆಂಟ್ ಥೀಮ್ ನಲ್ಲಿ ಫೋಟೋಶೂಟ್ ಮಾಡಿಸಲು ಪ್ಲ್ಯಾನ್ ಮಾಡುತ್ತಾರೆ. ಕೆರೆ-ಗದ್ದೆಗಳಲ್ಲಿ, ವ್ಯವಸಾಯ ಮಾಡುವ ರೀತಿ ಸಹಜ ಜೀವನಕ್ಕೆ ಹತ್ತಿರವಿರುವಂತ ಫೋಟೋಶೂಟ್ ಮಾಡಿಸುತ್ತಾರೆ. ಅಂಥದ್ದೇ ಥಿಂಕಿಂಗ್ ನಲ್ಲಿ ಚಿತ್ರದುರ್ಗದ ವೈದ್ಯರೊಬ್ಬರು ಆಪರೇಷನ್ ಥಿಯೇಟರ್ ಬಳಕೆ ಮಾಡಿಕೊಂಡು ಪೇಚಿಗೆ ಸಿಲುಕಿದ್ದಾರೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ವೈದ್ಯ ಡಾ. ಅಭಿಷೇಕ್ ಫೋಟೋಶೂಟ್ ಮಾಡಿಸಿದವರು. ತಮ್ಮದೇ ವೃತ್ತಿ ಬದುಕನ್ನು ಆಧಾರವಾಗಿಟ್ಟುಕೊಂಡು ಫೋಟೋಶೂಟ್ ಮಾಡಿಸುವುದಕ್ಕೆಂದು ಹೊರಟಿದ್ದರು ಎನಿಸುತ್ತದೆ. ಆದರೆ ಈಗ ಟೀಕೆಗೆ, ವಿರೋಧಕ್ಕೆ ಕಾರಣವಾಗಿದ್ದಾರೆ.
ಡಾ.ಅಭಿಷೇಕ್ ಮತ್ತು ಜೋಡಿ ಆಪರೇಷನ್ ಥಿಯೇಟರ್ ನಲ್ಲಿ ತಮ್ಮ ಮದುವೆಯ ಪ್ರಿವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಹೋಬಳಿ ಮಟ್ಟದ ಆಸ್ಪತ್ರೆಯಲ್ಲಿ ಡಾ. ಅಭಿಷೇಕ್ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಈಗ ಅದೇ ಆಸ್ಪತ್ರೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿಗೆ ಆಪರೇಷನ್ ಮಾಡುತ್ತಿರುವಂತೆ ವಧು-ವರ ವಿಡಿಯೋ ಶೂಟ್ ಮಾಡಿಸಿದ್ದಾರೆ. ಡಾ.ಅಭಿಷೇಕ್ ಜೋಡಿಯ ಪ್ರಿವೆಡ್ಡಿಂಗ್ ಫೋಟೋಶೂಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಅನ್ನು ಇವರ ಪ್ರಿವೆಡ್ಡಿಂಗ್ ಫೋಟೋಶೂಟ್ ಗಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.