Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಖಾಲಿ ನಿವೇಶನ ಸ್ವಚ್ಚಗೊಳಿಸಿ, ನಾಮಫಲಕ ಅಳವಡಿಸಿಕೊಳ್ಳಲು ಸೂಚನೆ

07:41 PM Sep 20, 2024 IST | suddionenews
Advertisement

ಚಿತ್ರದುರ್ಗ. ಸೆ.20: ಚಿತ್ರದುರ್ಗ ನಗರದ ವ್ಯಾಪ್ತಿಯ ಸಾರ್ವಜನಿಕರು ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸಿಕೊಂಡು ನಾಮಫಲಕ ಅಳವಡಿಸಿಕೊಳ್ಳಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.

Advertisement

ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶಗಳನ್ನು ಸ್ವಚ್ಚಗೊಳಿಸಲು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ಸ್ವಚ್ಚಗೊಳಿಸಿದ ನಿವೇಶನಗಳಲ್ಲಿ ಕಳೆದ ತಿಂಗಳು ಸುರಿದ ಮಳೆಗೆ ಮತ್ತೆ ಗಿಡ ಗಂಟೆಗಳು ಬೆಳೆದಿದ್ದು, ವಿಷಜಂತುಗಳು ಕಾಣಿಸುತ್ತಿರುವ ಬಗ್ಗೆ ಸಾರ್ವಜನಿಕರು ನಗರಸಭೆಗೆ ಮೌಖಿಕವಾಗಿ ದೂರು ನೀಡುತ್ತಿದ್ದಾರೆ. ನಿವೇಶನದ ಮಾಲೀಕರ ಮಾಹಿತಿ ಲಭ್ಯವಿದ್ದವರಿಗೆ ನಗರಸಭೆಯಿಂದ ನೋಟೀಸ್ ನೀಡಿ ಸ್ವಚ್ಛಗೊಳಿಸಲು ತಿಳಿಸಲಾಗಿರುತ್ತದೆ. ಇನ್ನೂ ಕೆಲವು ನಿವೇಶನಗಳ ಮಾಲೀಕರ ವಿವರ ದೊರೆತಿರುವುದಿಲ್ಲ.

ಆದ್ದರಿಂದ ಸಾರ್ವಜನಿಕರು ತಮ್ಮ ನಿವೇಶನಗಳನ್ನು ಸ್ವಚ್ಚಗೊಳಿಸಿಕೊಂಡು ಕಾಂಪೌಡ್ ನಿರ್ಮಾಣ ಮಾಡಿಕೊಳ್ಳುವುದು ಹಾಗೂ ನಿವೇಶನಕ್ಕೆ ಸಂಬAಧಪಟ್ಟ ಮಾಲೀಕರ ಹೆಸರು, ವಿಳಾಸ, ಖಾತೆ ಅಥವಾ ಅಸೆಸ್‌ಮೆಂಟ್ ಸಂಖ್ಯೆ, ಪಿ.ಐ.ಡಿ ನಂ, ಮೊಬೈಲ್ ನಂಬರ್‌ಗಳನ್ನೊಳಗೊಂಡ ನಾಮಫಲಕ ಹಾಕಿಕೊಳ್ಳುವಂತೆ ಕೋರಿದ್ದಾರೆ.

Advertisement

ಒಂದು ವೇಳೆ ನಿವೇಶನಗಳನ್ನು ಸ್ವಚ್ಚಗೊಳಿಸದಿದ್ದಲ್ಲಿ ನಗರಸಭೆಯಿಂದ ಸ್ವಚ್ಚಗೊಳಿಸಿ, ಸ್ವಚ್ಚಗೊಳಿಸಲು ತಗಲುವ ವೆಚ್ಚದ ಎರಡುಪಟ್ಟು ಮೊತ್ತವನ್ನು ದಂಡ ವಿಧಿಸಿ ವಸೂಲಿ ಮಾಡಲಾಗುವುದು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.

Advertisement
Tags :
bengaluruchitradurganameplateNotice to adopt cleanlinesssuddionesuddione newsಖಾಲಿ ನಿವೇಶನಚಿತ್ರದುರ್ಗನಾಮಫಲಕಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article