ಚಿತ್ರದುರ್ಗ : ಆಗಸ್ಟ್ 24 ರಂದು ನಾಟ್ಯ ನೈದಿಲೆ ನೃತ್ಯೋತ್ಸವ-2024
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಆಗಸ್ಟ್.20 : ಅಂಜನಾ ನೃತ್ಯ ಕಲಾ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ ನಾಟ್ಯ ನೈದಿಲೆ ನೃತ್ಯೋತ್ಸವ-2024 ಆ.24 ರಂದು ಸಂಜೆ ಐದು ಗಂಟಗೆ ತ.ರಾ.ಸು.ರಂಗಮಂದಿರದಲ್ಲಿ ನಡೆಯಲಿದೆ.
ನೃತ್ಯ ಕಲಾವಿದರು ಹಾಗೂ ಶಿಕ್ಷಕರಾದ ಬೆಂಗಳೂರಿನ ವಿದ್ವಾನ್ ಅನಿಲ್‍ಕುಮಾರ್, ನಾಟ್ಯ ಭಾರತಿ ಟ್ರಸ್ಟ್ ಬೆಂಗಳೂರಿನ ವಿದುಷಿ ಡಾ. ಶ್ರೀರಂಜಿತಾ ನಾಗೇಶ್, ವಿದ್ವಾನ್ ಜಿ.ಎಸ್.ನಾಗೇಶ್ ಇವರುಗಳು ನಟರಾಜ ದೀಪ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಹೇಮಂತರಾಜು ಎಸ್.ಎನ್. ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
25 ರಂದು ಸಂಜೆ ಐದಕ್ಕೆ ನಟರಾಜ ಪೂಜೆ ನೃತ್ಯ ಮಾಲಿಕಾ ಕು.ಶಿವಾನಿ ಕೆ.ಆರ್. ಮತ್ತು ಸಂಗಡಿಗರು ಹಾಗೂ ಕಲಾಕೇಂದ್ರದ ವಿದ್ಯಾರ್ಥಿಗಳಿಂದ.
ಸಂಜೆ ಆರಕ್ಕೆ ನಡೆಯುವ ಸಭಾ ಕಲಾಪದ ಸಾನಿಧ್ಯವನ್ನು ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿ ವಹಿಸಲಿದ್ದಾರೆ.
ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಎನ್.ಚಲವಾದಿ, ನಿರ್ದೇಶಕ ರವಿಚಂದ್ರ, ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷರಾದ ವಿದುಶಿ ಶುಭಾ ಧನಂಜಯ್, ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಇವರುಗಳು ಪಾಲ್ಗೊಳ್ಳಲಿದ್ದಾರೆ.
ಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಜ್ಯೋತಿ ರವಿಪ್ರಕಾಶ್ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು.
ಅಂಜನಾ ನೃತ್ಯ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗು ಪ್ರಮಾಣ ಪತ್ರ ವಿತರಣೆ.
ಅಂಜನಾ ಕಲಾನಿಧಿ ಪ್ರಶಸ್ತಿ ಪ್ರದಾನ. ಶ್ರೀಮತಿ ಜ್ಯೋತಿ ರವಿಪ್ರಕಾಶ್‍ರವರಿಂದ ಗೀತ ಕುಸುಮ.
ಚಿತ್ರದುರ್ಗದ ಗತ ಇತಿಹಾಸ ಸಾರುವ ಅಕ್ಕ-ತಂಗಿ ಬರಗೇರಮ್ಮ, ತಿಪ್ಪನಘಟ್ಟಮ್ಮನವರ ಭೇಟಿ ಉತ್ಸವ ಪ್ರದರ್ಶಿಸಲಾಗುವುದು ಎಂದು ಅಂಜನಾ ನೃತ್ಯ ಕಲಾ ಕೇಂದ್ರದ ಪ್ರಾಚಾರ್ಯರಾದ ವಿದ್ವಾನ್ ಸಿ.ಆರ್.ಶಿವಪ್ರಕಾಶ್ ತಿಳಿಸಿದ್ದಾರೆ.