Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಮಹಿಳೆ ಕಾಣೆ : ಪತ್ತೆಗೆ ಮನವಿ

06:38 PM Jul 18, 2024 IST | suddionenews
Advertisement

 

Advertisement

ಚಿತ್ರದುರ್ಗ. ಜುಲೈ.18:  ತಾಲ್ಲೂಕಿನ ಕೋಗುಂಡೆ ಗ್ರಾಮದ ಮಂಜಮ್ಮ ಗಂಡ ಮಹಾಂತೇಶ್ (ಸು.42ವರ್ಷ) ಕಾಣೆಯಾದ ಕುರಿತು ಜೂನ್ 29  ರಂದು ಹಾಗೂ ಚಿಕ್ಕಬೆನ್ನೂರು ಗ್ರಾಮದ ವೀಣಾ ಗಂಡ ಬಸವರಾಜ್ (ಸು.38 ವರ್ಷ) ಕಾಣೆಯಾದ ಕುರಿತು ಜುಲೈ 13 ರಂದು ಭರಮಸಾಗರ ಪೊಲೀಸ್ ಠಾಣೆಯಲ್ಲಿ ಎರೆಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಮಂಜಮ್ಮ 5 ಅಡಿ ಎತ್ತರ, ದುಂಡು ಮುಖ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಭಾಷೆ ಮಾತನಾಡುವರು. ಮನೆಯಿಂದ ಹೋಗುವಾಗ ಸೀರೆ ಜಾಕೀಟು ಧರಿಸಿರುತ್ತಾರೆ.

Advertisement

ವೀಣಾ 5.4 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದು. ಕನ್ನಡ ಭಾಷೆ ಮಾತನಾಡುವರು. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಪ್ಯಾಂಟ್, ಹಸಿರು ಬಣ್ಣದ ಟಾಪ್ ಮತ್ತು ಬಿಳಿ ಬಣ್ಣದ ವೇಲ್ ಧರಿಸಿರುತ್ತಾರೆ.

ಈ ಮೇಲ್ಕಂಡ ಮಹಿಳೆಯರ ಕುರಿತು ಸುಳಿವು ದೊರೆತಲ್ಲಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08194-258421, 9480803163 ಹಾಗೂ ಕಂಟ್ರೋಲ್ ರೂಂ ನಂಬರ್ 08194-222782 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Advertisement
Tags :
appeal for tracingbengaluruchitradurgaMissing womansuddionesuddione newsಚಿತ್ರದುರ್ಗಪತ್ತೆಗೆ ಮನವಿಬೆಂಗಳೂರುಮಹಿಳೆ ಕಾಣೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article