Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಮಲ್ಲಾಪುರ ಬಳಿ ಲಾರಿ ದರೋಡೆ : ಹಣ ದೋಚಿ ಕಳ್ಳರು ಪರಾರಿ

08:51 AM Aug 22, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 22: ಲಾರಿ ಚಾಲಕನನ್ನು ಬೆದರಿಸಿ ಹಣವನ್ನು ಫೋನ್ ಪೇ ಮೂಲಕ ದೋಚಿ ಪರಾರಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಇಂದು (ಗುರುವಾರ) ಬೆಳಿಗ್ಗೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಮಲ್ಲಾಪುರದ ಬಳಿ  ತಮಿಳುನಾಡು ಮೂಲದ ಲಾರಿ ಚಾಲಕ ಲೋಗನಾಥನ್ ಮೂತ್ರವಿಸರ್ಜನೆಗೆಂದು ಲಾರಿ ನಿಲ್ಲಿಸಿದ್ದಾರೆ. ಈ ವೇಳೆ ಅಲ್ಲಿಗೆ ಐವರು ದುಷ್ಕರ್ಮಿಗಳು ಬಂದಿದ್ದು ಚಾಕು ತೋರಿಸಿ ಲಾರಿ ಚಾಲಕನನ್ನು ಬೆದರಿಸಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ.

Advertisement

ಲಾರಿ ಚಾಲಕನ ಬಳಿಯಿದ್ದ ಒಂದು ಸಾವಿರ ರೂಪಾಯಿಗಳನ್ನು ಕಿತ್ತುಕೊಂಡಿದ್ದಾರೆ. ನಂತರ ಆತನ ಮೊಬೈಲ್ ಕಸಿದುಕೊಂಡು ಫೋನ್ ಪೇ ಮುಖಾಂತರ 9 ಸಾವಿರ ರೂಪಾಯಿಗಳನ್ನು ವರ್ಗಾವಣೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಚಿತ್ರದುರ್ಗ ಗ್ರಾಮಾಂತರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
abscondedbengaluruchitradurgaLorry robberyMallapuramoneysuddionesuddione newsthievesಕಳ್ಳರು ಪರಾರಿಚಿತ್ರದುರ್ಗಬೆಂಗಳೂರುಮಲ್ಲಾಪುರಲಾರಿ ದರೋಡೆಸುದ್ದಿಒನ್ಸುದ್ದಿಒನ್ ನ್ಯೂಸ್ಹಣ
Advertisement
Next Article