For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ಲೋಕಸಭಾ ಸಾರ್ವತ್ರಿಕ ಚುನಾವಣೆ : ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ

02:49 PM Apr 09, 2024 IST | suddionenews
ಚಿತ್ರದುರ್ಗ ಲೋಕಸಭಾ ಸಾರ್ವತ್ರಿಕ ಚುನಾವಣೆ   ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ
Advertisement

Advertisement

ಚಿತ್ರದುರ್ಗ. ಏ.09:  ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಸೋಮವಾರ ಮುಕ್ತಾಯಗೊಂಡಿದೆ. ಅಂತಿಮವಾಗಿ 20 ಅಭ್ಯರ್ಥಿಗಳು ಚುನಾವಣಾ  ಕಣದಲ್ಲಿ ಉಳಿದಿದ್ದಾರೆ. ಮಾನ್ಯತೆ ಪಡೆದ ರಾಷ್ಟೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಹೊರತು ಪಡಿಸಿ, ಉಳಿದ ನೊಂದಾಯಿತ ರಾಜಕೀಯ ಪಕ್ಷಗಳು ಹಾಗೂ ಇತರೆ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣೆ ಚಿಹ್ನೆಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಹಂಚಿಕೆ ಮಾಡಿದ್ದಾರೆ.

ಮಾನ್ಯತೆ ಪಡೆದ ರಾಷ್ಟೀಯ ಪಕ್ಷಗಳ ಅಭ್ಯರ್ಥಿಗಳಾದ,

Advertisement

ಬಹುಜನ ಸಮಾಜ ಪಾರ್ಟಿಯ ಅಶೋಕ ಚಕ್ರವರ್ತಿ-ಆನೆ,

ಭಾರತೀಯ ಜನತಾ ಪಾರ್ಟಿಯ ಗೋವಿಂದ ಮಕ್ತಪ್ಪ ಕಾರಜೋಳ-ಕಮಲ ಹಾಗೂ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಿ.ಎನ್.ಚಂದ್ರಪ್ಪ-ಕೈ, ಚಿಹ್ನೆಯನ್ನು ಹೊಂದಿದ್ದಾರೆ.

ನೊಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನರಸಿಂಹರಾಜು ಸಿ.ಎನ್-ಬ್ಯಾಟರಿ ಟಾರ್ಚ್,

ಉತ್ತಮ ಪ್ರಜಾಕೀಯ ಪಾರ್ಟಿಯ ರಮೇಶ್ ನಾಯ್ಕ್ ಟಿ-ಆಟೋರಿಕ್ಷಾ,

ಇಂಡಿಯನ್ ಮೂವ್‌ಮೆಂಟ್ ಪಾರ್ಟಿಯ ಬಿ.ಟಿ.ರಾಮಸುಬ್ಬಯ್ಯ-ಸೀಟಿ(ವ್ಹಿಸಲ್),

ಕರುನಾಡ ಸೇವಕರ ಪಕ್ಷದ ಶಬರೀಶ್ ಆರ್-ತೆಂಗಿನ ತೋಟ,

ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಸುಜಾತ ಡಿ-ಪ್ರೆಷರ್ ಕುಕ್ಕರ್ ಚಿಹ್ನೆ ಪಡೆದಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾದ
ಅಮೃತ ರಾಜ-ಗಣಕಯಂತ್ರ,
ಗಣೇಶ್-ಮೈಕ್,
ತುಳಸಿ.ಹೆಚ್-ಬಳೆಗಳು,
ಎಂ.ಪಿ.ದಾರಕೇಶ್ವರಯ್ಯ-ಸ್ಟೊತೋಸ್ಕೋಪ್, ಕೆ.ನರಸಿಂಹಮೂರ್ತಿ-ಕಲ್ಲಂಗಡಿ,
ನಾಗರಾಜಪ್ಪ-ಟ್ರಕ್,
ಭೂತರಾಜ ವಿ.ಎಸ್-ಸಿಸಿಟಿವಿ ಕ್ಯಾಮರಾ,
ಮಂಜುನಾಥ ಸ್ವಾಮಿ ಟಿ-ಹಡಗು,
ರಘುಕುಮಾರ್ ಎಸ್-ದೂರವಾಣಿ,
ಬಿ.ವೆಂಕಟೇಶ್ ಶಿಲ್ಪಿ-ಹಲಸಿನ ಹಣ್ಣು,
ಶ್ರೀನಿವಾಸ ಎಸ್.ಹೆಚ್-ಐಸ್‌ಕ್ರೀಂ,
ಸುಧಾಕರ ಆರ್-ಹಣ್ಣುಗಳ ಇರುವ ಬ್ಯಾಸ್ಕೆಟ್ ಇವರುವ ಚಿಹ್ನೆಗಳನ್ನು ಚುನಾವಣಾಧಿಕಾರಿ ಟಿ.ವೆಂಕಟೇಶ್ ಹಂಚಿಕೆ ಮಾಡಿದ್ದಾರೆ.

ರಾಷ್ಟೀಯ, ನೊಂದಾಯಿತ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಿಗದಿ ಪಡಿದ ಈ ಚಿಹ್ನೆಗಳ ಅಡಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

Tags :
Advertisement