For the best experience, open
https://m.suddione.com
on your mobile browser.
Advertisement

ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರವನ್ನು ಗೆಲಲ್ಲೇ ಬೇಕು : ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

04:33 PM Feb 02, 2024 IST | suddionenews
ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರವನ್ನು ಗೆಲಲ್ಲೇ ಬೇಕು   ಮಾಜಿ ಶಾಸಕ ಜಿ ಎಚ್ ತಿಪ್ಪಾರೆಡ್ಡಿ
Advertisement

Chitradurga Lok Sabha elections
should be won : Former MLA GH Tippareddy

Advertisement
Advertisement

ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರವನ್ನು ಗೆಲಲ್ಲೇ ಬೇಕು : ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಫೆ. 02 : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರವನ್ನು ಗೆಲಲ್ಲೇ ಬೇಕಿದೆ ಇದಕ್ಕೆ ಈಗಿನಿಂದಲೇ ತಯಾರಿಯನ್ನು ಮಾಡಿಕೊಳ್ಳಬೇಕಿದೆ ಎಂದು ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕರೆ ನೀಡಿದರು.

ನಗರದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಶುಕ್ರವಾರ ಹಿರಿಯೂರು ಮತ್ತು ಶಿರಾ ತಾಲ್ಲೂಕಿನ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಕೆಲ ಮುಖಂಡರು ಬಿಜೆಪಿಯನ್ನು ಸೇರ್ಪಡೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮೋದಿಯವರನ್ನು ಮೂರನೇ ಬಾರಿಗೆ ದೇಶದ ಪ್ರಧಾನಿಯನ್ನಾಗಿ ಮಾಡಬೇಕಿದೆ. ಇದರ ಹೊಣೆ ನಮ್ಮೆಲ್ಲರ ಮೇಲಿದೆ.  ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಲೋಕಸಬಾ ಸ್ಥಾನವನ್ನು ಗೆಲ್ಲಬೇಕಿದೆ. ಇದಕ್ಕೆ ಈಗಿನಿಂದಲೇ ತಯಾರಿಯನ್ನು ಮಾಡಬೇಕಿದೆ. ಈಗ ಬೇರೆ ಪಕ್ಷದಿಂದ ಬಂದು ನಮ್ಮ ಪಕ್ಷವನ್ನು ಸೇರ್ಪಡೆಯಾಗಿರುವುದು ಸಂತೋಷದ ವಿಷಯವಾಗಿದೆ. ಇವರು ಮುಂದಿನ ದಿನಮಾನದಲ್ಲಿ ಪಕ್ಷದ ಗೆಲುವಿಗಾಗಿ ಶ್ರಮವನ್ನು ಹಾಕಬೇಕಿದೆ ಎಂದು ತಿಳಿಸಿದರು.

ಕಳೆದ ಬಾರಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಸಿದ ಮತಕ್ಕಿಂತ ಈ ಬಾರಿಯ ಚುನಾವಣೆಯಲ್ಲಿ ಶೇ.10ರಷ್ಟು ಹೆಚ್ಚಿನ ಪ್ರಮಾಣದ ಮತವನ್ನು ಗಳಿಸಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಒಂದೇ ಜನಾಂಗದವರು ಹಲವಾರು ಜನ ಚುನಾವಣಾ ಕಣದಲ್ಲಿ ಇದಿದ್ದರಿಂದ ನಮಗೆ ಅನುಕೂಲವಾಯಿತು. ಆದರೆ ಈ ಬಾರಿ ಪರಿಸ್ಥಿತಿ ಹಿಂದಿನಂತೆ ಇಲ್ಲ.

ಈ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಶ್ರಮವನ್ನು ಹಾಕಬೇಕಿದೆ. ಈಗಿನಿಂದಲೇ ಕಳೆದ 10 ವರ್ಷದಲ್ಲಿ ನರೇಂದ್ರ ಮೋದಿಯವರು ಮಾಡಿದ ವಿವಿಧ ರೀತಿಯ ಸಾಧನೆಗಳನ್ನು ಗ್ರಾಮ ಗ್ರಾಮಗಳಲ್ಲಿಯೂ ತಿಳಿಸಬೇಕಿದೆ. ಈ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಮುಖಂಡರು ಮಾಡಬೇಕಿದೆ. ಈ ಚುನಾವಣೆಯಲ್ಲಿ ಟೀಕೇಟ್ ಯಾರೇ ತರಲಿ ನಮ್ಮಗೆ ಅಭ್ಯರ್ಥಿಗಿಂತ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದು ಮುಖ್ಯವಾಗಿದೆ ಎಂದರು.

ರಾಜ್ಯದಲ್ಲಿ ಆಡಳಿತವನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನರಿಗೆ ಏನನ್ನಾದರೂ ನೀಡಬೇಕಾದರೆ ಕೇಂದ್ರದ ಕಡೆ ಕೈತೋರಿಸುತ್ತಿದೆ. ಅಕ್ಕಿಯನ್ನು ಖರೀದಿ ಮಾಡಬೇಕಾದರೂ ವಿದ್ಯುತ್ ಖರೀದಿ ಮಾಡಬೇಕಾದರೂ ಸಹಾ ರಾಜ್ಯ ಸರ್ಕಾರ ಕೇಂದ್ರದ ಕಡೆಗೆ ಕೈ ತೋರಿಸುತ್ತಾ ಅವರು ನೀಡುತ್ತಿಲ್ಲ ಎಂದು ದೂರುತ್ತಿದೆ ಆದರೆ ಸರ್ಕಾರಕ್ಕೆ ನೀಡುವ ಇಚ್ಚಾಶಕ್ತಿ ಇಲ್ಲವಾಗಿದೆ ಇದರಿಂದ ಈ ರೀತಿಯಾದ ನಾಟಕವನ್ನು ಮಾಡುತ್ತಿದ್ದಾರೆ ಎಂದು ತಿಪ್ಪಾರೆಡ್ಡಿ ದೂರಿದರು.

ಜೆಡಿಎಸ್ ತೋರಿದು ಬಿಜೆಪಿಯನ್ನು ಸೇರ್ಪಡೆಯಾದ ಮಾಜಿ ಜಿ.ಪಂ. ಸದಸ್ಯರಾದ ದ್ಯಾಮಣ್ಣ ಮಾತನಾಡಿ ನಾನು ಈ ಹಿಂದೆ ಬಿಜೆಪಿಯಲ್ಲಿಯೇ ಇದ್ದೇ ಹಲವಾರು ಕಾರಣದಿಂದ ಜೆಡಿಎಸ್‍ಗೆ ಹೋಗಿದ್ದೆ ಈಗ ಮೋದಿಯವರ ಕಾರ್ಯ ವೈಖರಿಯನ್ನು ಮೆಚ್ಚಿ ಮರಳಿ ಬಿಜೆಪಿಗೆ ಬಂದಿದ್ದೇನೆ. ನನ್ನ ಕ್ಷೇತ್ರದ 284 ಬೂತ್‍ಗಳಲ್ಲಿಯೂನ ಸಹಾ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಲೀಡ್ ನೀಡಲಾಗುವುದು, ಅಲ್ಲದೆ ನಮ್ಮ ಪಕ್ಷದ ಅಭ್ಯರ್ಥಿ ಹೆಚ್ಚಿನ ಮತಗಳ ಅಂತರದಿಂದ ಗೆಲುವನ್ನು ಸಾಧಿಸಲು ಈಗಿನಿಂದಲೇ ಶ್ರಮವನ್ನು ಹಾಕುವುದಾಗಿ ತಿಳಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರಳಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ಸಂಪತ್ ಕುಮಾರ್, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರೇಶ್ ಸಿದ್ದಾಪುರ, ಹಿರಿಯೂರು ಮಂಡಲ ಅಧ್ಯಕ್ಷ ಶಿವಣ್ಣ ಜಿಲ್ಲಾ ಕಾರ್ಯದರ್ಶಿ ಮೋಹನ್, ವಕ್ತಾರ ಶಿವಪ್ರಕಾಶ್ ದಗ್ಗೆ, ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದ್ಯಾಮಣ್ಣರವರ ಜೊತೆಯಲ್ಲಿ ರವಿವರ್ಮ, ಸೋಮಣ್ಣ, ಶೇಖರಪ್ಪ, ರಂಗನಾಥ್, ರುದ್ರೇಶ್ ಬಿಜೆಪಿಯನ್ನು ಸೇರ್ಪಡೆಯಾದರು.

Advertisement
Tags :
Advertisement