For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ಲೋಕಸಭಾ ಚುನಾವಣೆ, ಹೊರಗಿನವರಿಗೆ ಮಣೆ : ರಘು ಚಂದನ್ ಬೇಸರ

02:19 PM Mar 28, 2024 IST | suddionenews
ಚಿತ್ರದುರ್ಗ ಲೋಕಸಭಾ ಚುನಾವಣೆ  ಹೊರಗಿನವರಿಗೆ ಮಣೆ   ರಘು ಚಂದನ್ ಬೇಸರ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಮಾ. 28 :  ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸ್ಥಳೀಯರಿಗೆ ಬಿಜೆಪಿ ಟಿಕೆಟ್ ನೀಡದೆ 500 ಕಿಮೀ ದೂರದಿಂದ ಕರೆ ತಂದು ಅಭ್ಯರ್ಥಿ ಹಾಕುವ ಅವಶ್ಯಕತೆ ಏನಿತ್ತು, ಚಿತ್ರದುರ್ಗದಲ್ಲಿ ಯಾರೂ ಗಂಡಸರು ಇರಲಿಲ್ವವೇ ಎಂದು ಪಕ್ಷದ ಮುಖಂಡರನ್ನು ಬಿಜೆಪಿ ಯುವ ಮುಖಂಡ ರಘು ಚಂದನ್ ಪ್ರಶ್ನಿಸಿದ್ದಾರೆ.

Advertisement
Advertisement

ಚಿತ್ರದುರ್ಗದ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗುವ ಭರವಸೆ ಬಹಳವಿತ್ತು. ಅದರೆ ಜಿಲ್ಲೆಯ ಸ್ಥಳೀಯ ನಾಯಕರುಗಳೇ ಕಳ್ಳಿನರಪ್ಪನ ಆಟವಾಡಿ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಕಾರಜೋಳರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು, ಖಂಡನೀಯ, ಪಕ್ಷದ ಕಾರ್ಯಕರ್ತರು ಮತ ಹಾಕಿಸಲು ಮಾತ್ರವೇ ಬೇಕೆ, ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಅರ್ಹತೆ ಇಲ್ಲವೆ? ಕಳೆದ ಬಾರಿ ಅನೇಕಲ್ ಅಭ್ಯರ್ಥಿ ಕರೆ ತಂದು ಹಾಕಿದ್ದರು. ಈ ಬಾರಿ ಮಧೋಳ್ ನಿಂದ ಅಭ್ಯರ್ಥಿಯನ್ನು ಕರೆ ತಂದಿದ್ದಾರೆ. ಇದು ಚಿತ್ರದುರ್ಗದ ದುರಂತ ಎಂದು ತಮ್ಮ ಆಕ್ರೋಶವನ್ನು ಹೂರ ಹಾಕಿದ್ದಾರೆ.

ಈ ಬಾರಿ ಟಿಕೆಟ್ ದೊರೆಯದೆಂಬ ಆಕಾಂಕ್ಷೆಯಲ್ಲಿ ನಾನಿದ್ದೆ, ಇದಕ್ಕೆ ಸಂಬಂಧಪಟ್ಟಂತೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ನಾನು ಬಹಳ ನಂಬಿದ್ದೆ ಆದರೆ ಕೊನೆ ಗಳಿಗೆಯಲ್ಲಿ ನನಗೆ ಟಿಕೆಟ್ ಕೊಡಿಸುವಲ್ಲಿ ಅನ್ಯಾಯ ಮಾಡಿದ್ದಾರೆ. ಮದಕರಿನಾಯಕನ ಕಾಲದಿಂದಲೂ ಸ್ಥಳೀಯರಿಗೆ ಅನ್ಯಾಯವಾಗುತ್ತಿದೆ. ಇದನ್ನು ಯಾರೂ ಖಂಡಿಸದಿರುವುದು ನಮ್ಮ ದೌರ್ಬಾಗ್ಯವಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ವಿರುದ್ಧವಾಗಲಿ ಮೋದಿ ವಿರುದ್ದವಾಗಲಿ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುವುದು,ನನ್ನ ಮುಂದಿನ ನಡೆಯನ್ನು ನಾಳೆ ನಡೆಯುವ ಕಾರ್ಯರ್ತರ ಅಭಿಮಾನಿಗಳ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ಈ ಬಾರಿ ಟಿಕೆಟ್ ನನ್ನ ವಯಸ್ಸಿನ ಮತ್ತು ಅನುಭವದ ಮೇಲೆ ತಪ್ಪಿಸಲಾಗಿದೆ. ನನಗಲ್ಲದಿದ್ದರೂ ಜನಾರ್ಧನ ಸ್ವಾಮಿ ಅವರಿಗೆ ನೀಡಬಹುದಾಗಿತ್ತು.ಆದು ಬಿಟ್ಟು ಎಲ್ಲೋ ಇರುವ ವ್ಯಕ್ತಿಯನ್ನು ಕರೆ ತಂದು ಚುನಾವಣೆಯಲ್ಲಿ ನಿಲ್ಲಿಸುವ ಅವಶ್ಯಕತೆ ಏನಿತ್ತು. ಎಂದು ಪಕ್ಷದ ನಾಯಕರನ್ನು ಪ್ರಶ್ನಿಸಿದ ರಘುಚಂದನ್, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಏನಾದರೂ ಅನ್ಯಾಯವಾದರೆ ದೂರದ ಐದುನೂರು ಕಿಮೀನಿಂದ ಯಾರೂ ಬರುವುದಿಲ್ಲ. ಸ್ಥಳಿಯರಾದ ನಾವುಗಳೇ ಕಾರ್ಯಕರ್ತರ ನೆರವಿಗೆ ಹೋಗಬೇಕಿದೆ ಇದು ಪಕ್ಷದ ಅರಿವಿಗೆ ಬಂದಿಲ್ಲ ಎಂದು ನೊಂದು ಹೇಳಿದರು.

ಕಳೆದ ಹಲವಾರು ಬಾರಿ ಚುನಾವಣೆಯಲ್ಲಿಯೂ ಸಹಾ ಎರಡು ರಾಷ್ಟ್ರೀಯ ಪಕ್ಷಗಳು ಹೂರಗಿನವರಿಗೆ ಮಣೆಯುನ್ನು ಹಾಕಿದ್ದಾರೆ, ಇದು ನಮ್ಮ ಚಿತ್ರದುರ್ಗದ ದುರಂತವಾಗಿದೆ, ಇಲ್ಲಿನ ಕಾರ್ಯಕರ್ತರನ್ನು ಪಕ್ಷದ ಮುಖಂಡರು ನಂಬುವುದೇ ಇಲ್ಲ ಇಲ್ಲಿ ಯಾರೇ ಹಾಕಿದರೂ ಸಹಾ ಕಾರ್ಯಕರ್ತರು ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿದ್ದ ಈ ರೀತಿ ಮಾಡುತ್ತಿದ್ದಾರೆ ಇಂದಿನ ಚುನಾವಣೆ ಹಿಂದಿನಂತೆ ಇಲ್ಲ ಎರಡು ಪಕ್ಷದಲ್ಲಿಯೂ ಸಹಾ ಪಕ್ಷದ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ, ನಮ್ಮ ನಾಯಕರಿಗೆ ಟಿಕೇಟ್ ಸಿಗದಿದ್ದಕ್ಕೆ ಪಕ್ಷದ ಮುಖಂಡರ ವಿರುದ್ದ ಕೋಪಗೊಂಡಿದ್ದಾರೆ ಇದರ ಪರಿಣಾಮವನ್ನು ಮುಂದಿನ ಚುನಾವಣೆಯಲ್ಲಿ ಎದುರಿಸಲಿದ್ದಾರೆ ಎಂದು ತಿಳಿಸಿದರು.

ಈ ಸಮಯದಲ್ಲಿ ತಿಪ್ಪೇಸ್ವಾಮಿ, ಶ್ರೀಮತಿ,ರತ್ನಮ್ಮ,ಸಿದ್ದೇಶ, ಶಿವನಕೆರೆ ರಾಜಣ್ಣ, ತಿಪ್ಪೇಸ್ವಾಮಿ, ನಾಗೇಂದ್ರ ಸೇರಿದಂತೆ ಇತರರು ಇದ್ದರು.

Advertisement
Tags :
Advertisement