ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಬಿ.ಎನ್. ಚಂದ್ರಪ್ಪ ಅವರ ಬಳಿ ಇರುವ ಆಸ್ತಿ ಎಷ್ಟು ? ಇಲ್ಲಿದೆ ಮಾಹಿತಿ....!
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.05 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ಎನ್. ಚಂದ್ರಪ್ಪ ಅವರು ಗುರುವಾರ ನಾಮಪತ್ರ ಸಲ್ಲಿಸಿದ್ದು, ಚುನಾವಣೆಯಲ್ಲಿ ತನ್ನ ಕುಟುಂಬದ ಆಸ್ತಿ ವಿವರ ಎಷ್ಟಿದೆ ಎಂಬುದನ್ನು ತಿಳಿಸಿದ್ದಾರೆ. ಬಿಎನ್ ಚಂದ್ರಪ್ಪ ಅವರು ಒಟ್ಟು 1,04,76,448 ಚರಾಸ್ಥಿ ಮೌಲ್ಯ ಹೊಂದಿದ್ದಾರೆ.
ದೆಹಲಿ, ಬೆಂಗಳೂರಿನ ಎಸ್.ಬಿ.ಐ , ಬ್ಯಾಂಕ್ ಆಫ್ ಬರೋಡ,
ತರಿಕೇರಿಯ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿದ್ದಾರೆ. ಈ ಎಲ್ಲಾ ಖಾತೆಗಳಲ್ಲಿ ಒಟ್ಟು ರೂ.1,32,277 ಹೊಂದಿದ್ದಾರೆ. ಸದ್ಯ ರೂ. 28,85,00 ನಗದು ಹಣವಿದೆ.
ಕೀರ್ತಿ ರಾಜ್ ಶೆಟ್ಟಿ ಅನ್ನುವ ವ್ಯಕ್ತಿಗೆ ರೂ.30,00,000 ಮುಂಗಡ ಹಣ ನೀಡಿದ್ದಾರೆ.ರೂ.30,00,00 ಮೌಲ್ಯದ ಫಾರ್ಚುನರ್ ಕಾರು ಇದೆ. ರೂ.13,02,000 ಮೌಲ್ಯದ 210 ಗ್ರಾಂ ಚಿನ್ನಭಾರಣಗಳು ಇವೆ. ಇವರ ಒಟ್ಟು ಚರಾಸ್ಥಿ ಮೌಲ್ಯ ರೂ.1,04,76,448 ಕೋಟಿಯಾಗಿದೆ.
ಇನ್ನು ಬಿ.ಎನ್.ಚಂದ್ರಪ್ಪನವರ ಪತ್ನಿ ಡಾ.ಎಸ್.ಟಿ.ಕಾವ್ಯ ಇವರು ಬೆಂಗಳೂರಿನ ಎಸ್.ಬಿ.ಐ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಅವರ ಅಕೌಂಟ್‌ನಲ್ಲಿ ರೂ.20,68,200 ಹಣವಿದೆ. ಅವರ ಬಳಿ ಸದ್ಯ ರೂ.1,22,800 ನಗದು ಇದೆ. ರೂ.58,28,000 ಮೌಲ್ಯದ 940 ಗ್ರಾಂ ಚಿನ್ನ ಹಾಗೂ ರೂ.4,71,000 ಮೌಲ್ಯದ 6.50 ಕೆ.ಜಿ. ಬೆಳ್ಳಿಯ ಆಭರಣ ಹಾಗೂ ವಸ್ತುಗಳಿವೆ. ಇವರ ಒಟ್ಟು ಚರಾಸ್ಥಿ ಮೌಲ್ಯ ರೂ.84,90,053 ಆಗಿದೆ.
ಇನ್ನು ಮಗ ಬಿ.ಸಿ.ಉತ್ಸವ್ ಬೆಂಗಳೂರಿನ ಎಸ್.ಬಿ.ಐ, ಬ್ಯಾಂಕ್ ಆಫ್ ಬರೋಡ, ಹೆಚ್.ಡಿ.ಎಫ್.ಸಿ ಬ್ಯಾಂಕ್‌ಗಳೆ ಖಾತೆ ಹೊಂದಿದ್ದಾರೆ. ಅವರ ಖಾತೆಯಲ್ಲಿ ರೂ.5,21,875 ಹಣವಿದೆ. ಸದ್ಯ ಅವರ ಬಳಿ ರೂ.1,10,000 ನಗದು ಇದೆ.
ಇವರ ಹೆಸರಿನಲ್ಲಿ ರೂ.18,00,00 ಮೌಲ್ಯದ ಮಹೇಂದ್ರ ಥಾರ್ ಕಾರಿದೆ. ರೂ.11,16,000 ಮೌಲ್ಯದ 180 ಗ್ರಾಂ ಚಿನ್ನಾಭರಣಗಳಿವೆ. ಮಗ ಬಿ.ಸಿ.ಉತ್ಸವ್ ಚಿತ್ರದುರ್ಗದ ಎಂ.ಕೆ.ಹಟ್ಟಿ ಗ್ರಾಮದ 8 ಎಕರೆ 1 ಗುಂಟೆ ಜಮೀನನಲ್ಲಿ ಶೇ.25 ರಷ್ಟು ಪಾಲು ಹೊಂದಿದ್ದಾರೆ. ಚಳ್ಳಕೆರೆ ಮುಮ್ಮಡಿ ಸಾಗರ ಗ್ರಾಮದಲ್ಲಿ 24 ಗುಂಟೆ ಕೃಷಿ ಭೂಮಿಯಿದೆ.
ಇವುಗಳ ಒಟ್ಟು ಮೌಲ್ಯ ರೂ.1,35,00,000 ಆಗಿದೆ.
ಬಿ.ಎನ್.ಚಂದ್ರಪ್ಪ ಆದೂರು ಗ್ರಾಮ ಹಾಗೂ ಚಿತ್ರದುರ್ಗ ನಗರದಲ್ಲಿ 6 ನಿವೇಶನಗಳನ್ನು ಹೊಂದಿದ್ದಾರೆ. ಇವುಗಳು ಒಟ್ಟು ವಿಸ್ತ್ತೀರ್ಣ 15028 ಚದರ ಅಡಿ, ಒಟ್ಟು ಮೌಲ್ಯ ರೂ.53,47,300 ಆಗಿದೆ. ಬೆಂಗಳೂರು ನಗರದಲ್ಲಿ 2 ಕಡೆ ವಾಣಿಜ್ಯ ಕಟ್ಟಗಳನ್ನು ಹೊಂದಿದ್ದು ಇವುಗಳ ಮೌಲ್ಯ ರೂ.8,60,00,000 ಆಗಿದೆ. ಚಂದ್ರಪ್ಪ ಪತ್ನಿ ಡಾ.ಎಸ್.ಟಿ.ಕಾವ್ಯ ಅವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ವಾಸದ ಮನೆ ಇದೆ. ಇದರ ಆಸ್ತಿ ಮೌಲ್ಯ ರೂ.1,25,00,000 ಆಗಿದೆ. ಮಗ ಬಿ.ಸಿ.ಉತ್ಸವ್ ಹೆಸರಿನಲ್ಲಿ ಯಾವುದೇ ವಾಣಿಜ್ಯ ಕಟ್ಟಡ ಹಾಗೂ ವಸತಿ ಕಟ್ಟಡ ಇಲ್ಲ. ಬಿ.ಎನ್.ಚಂದ್ರಪ್ಪ ಬ್ಯಾಂಕ್‌ಗಳಲ್ಲಿ ರೂ.89,712,69 ಸಾಲ ಹೊಂದಿದ್ದಾರೆ. ಮಗ ಬಿ.ಸಿ.ಉತ್ಸವ್ ರೂ.9,48,227 ವಾಹನ ಸಾಲ ಹೊಂದಿದ್ದಾರೆ. ಇವರ ಚರಾಸ್ಥಿ ಮೌಲ್ಯ ರೂ.35,47,876 ಆಗಿದೆ. ಒಟ್ಟಾರೆ ಕಾಂಗ್ರೇಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ಕುಟುಂಬದ ಒಟ್ಟು ಚರಾಸ್ಥಿ ಮೌಲ್ಯ ರೂ.2,25,14,377 ಆಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಗೆರೆ ತಾಲ್ಲೂಕಿನ ಗೋಣಿಬೀಡು, ತರೀಕೇರೆ ತಾಲ್ಲೂಕಿನ ಸಿದ್ಲೀಪುರ,ಗೋಪಾಲ, ಮಾಚೇನಹಳ್ಳಿ, ಹಳಿಯೂರು, ಲಕ್ಕವಳ್ಳಿ ಗ್ರಾಮಗಳಲ್ಲಿ ಒಟ್ಟು 22 ಎಕರೆ 16 ಗುಂಟೆ ಕೃಷಿ ಭೂಮಿ ಹೊಂದಿದ್ದಾರೆ. ಇದರಲ್ಲಿ ಸುಮಾರು 10 ಎಕರೆ ಅಡಿಕೆ ತೋಟವಿದೆ. ಈ ಎಲ್ಲಾ ಕೃಷಿ ಭೂಮಿಯ ಅಂದಾಜು ಮೌಲ್ಯ ರೂ.87,90,000 ಆಗಿದೆ.