Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರ | ಕಾಂಗ್ರೆಸ್ ಅಭ್ಯರ್ಥಿ ಬಿ. ಎನ್. ಚಂದ್ರಪ್ಪರನ್ನು ಗೆಲ್ಲಿಸಲು ಕಾರ್ಯಕರ್ತರು ಪಣತೊಡಬೇಕು : ಸಚಿವ ಡಿ ಸುಧಾಕರ್

07:00 PM Mar 24, 2024 IST | suddionenews
Advertisement

ಸುದ್ದಿಒನ್, ಹಿರಿಯೂರು, ಮಾರ್ಚ್. 24 : ಸುಳ್ಳು ಹೇಳಿ, ಜನರನ್ನು ಭಾವನಾತ್ಮಕವಾಗಿ ಮರಳು ಮಾಡಿ ಹುಸಿ ದೇಶಪ್ರೇಮ ಹೆಸರಲ್ಲಿ ಅಧಿಕಾರ ಪಡೆಯುವುದು ಬಿಜೆಪಿ ಅವರ ನೀತಿ. ಆದರೆ  ಕಾಂಗ್ರೆಸ್ ಪಕ್ಷ  ಜನಪರ ವಾಗಿ ಯೋಚಿಸುವ, ಜನಪರ ಕಾರ್ಯಕ್ರಮ ನೀಡುವ, ಜನರ ಬದುಕನ್ನು ಸುಧಾರಣೆ ಮಾಡುವುದು ಮತ್ತು ಜನಪರ ಕಾರ್ಯಕ್ರಮ ಅನುಷ್ಠಾನ ಮಾಡುವುದು ನಮ್ಮ ಅಧ್ಯತೆಯ ಗುರಿಯಾಗಿದೆ  ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ತಿಳಿಸಿದರು.

Advertisement

ಭಾನುವಾರ ಹಿರಿಯೂರಿನ ರೋಟರಿ ಭವನದಲ್ಲಿ  ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆಗಳಿಗೆ ಪಕ್ಷದ ವತಿಯಿಂದ ನೇಮಕವಾಗಿರುವ ಬೂತ್ ಏಜೆಂಟರಿಗೆ ಏರ್ಪಡಿಸಿದ್ದ ಮಾಹಿತಿ ಮತ್ತು ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು

ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ನೀಡಿ ನುಡಿದಂತೆ ನಡೆದಿದ್ದೇವೆ ಮತ್ತು ನಡೆಯುತ್ತೇವೆ ಅನ್ನೋದು ನಮ್ಮ ಪಕ್ಷದ ಕಾರ್ಯತಂತ್ರ ನೀತಿಯಾಗಿದೆ.

Advertisement

ಕೇಂದ್ರ ಸರ್ಕಾರದ ಹುಸಿ ಸುಳ್ಳುಗಳನ್ನು ಜನರಿಗೆ ಪಕ್ಷದ ಕಾರ್ಯಕರ್ತರು  ಮನವರಿಕೆ ಮಾಡಬೇಕು ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ ಸಂಸದರ ಸಾಧನೆ ಶೂನ್ಯ
ಅಪ್ಪರ್ ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿದ್ದ ಐದು ಸಾವಿರದ ಮುನ್ನೂರು ಕೋಟಿಯಲ್ಲಿ ಬಿಡಿಗಾಸು ನೀಡಲಿಲ್ಲ. ಕೇಂದ್ರದ ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳನ್ನು ಪೋಷಿಸಿಕೊಂಡು ಸಣ್ಣ ಸಣ್ಣ ಉದ್ದಿಮೆದಾರರನ್ನು  ಸಂಕಷ್ಟಕ್ಕೆ ದೂಡಿದೆ.
ಸಾಕಷ್ಟು ಸರ್ಕಾರಿ ಸೌಮ್ಯದ ಕಂಪನಿಗಳನ್ನು
ಮಾರಾಟಮಾಡಲಾಗಿದೆ ಯುವಜನರಿಗೆ ಹುಸಿ ಬರವಸೆ ನೀಡಿ ಮತ ಪಡೆಯುವ ಸರಕನ್ನಾಗಿ ಮಾಡಿ ಬಿಜೆಪಿ ಯುವಕರನ್ನು ಅಗೌರವಿಸಿದೆ.
ರೈತರ ಮೇಲೆ ನಿರಂತರವಾದ ದಬ್ಬಾಳಿಕೆಯನ್ನು ಮಾಡಿದೆ ಜನವಿರೋಧಿ ಕೇಂದ್ರ ಸರ್ಕಾರದ ನೀತಿಗಳನ್ನು ಮನೆ ಮನೆಗಳಿಗೆ ತಲುಪಿಸಬೇಕು ಅ ಮೂಲಕ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ರನ್ನು ಗೆಲ್ಲಿಸಲು ಕಾರ್ಯಕರ್ತರು ಪಣತೊಡಬೇಕು ಎಂದರು

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಮಾತನಾಡಿ
ಪಕ್ಷ ನನ್ನ ಸೇವೆ ಮತ್ತು ಪಕ್ಷ ನಿಷ್ಠೆಯನ್ನು ಗುರುತಿಸಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ
ನನಗೆ ಕಾರ್ಯಕರ್ತರೆ ಜೀವಾಳ ಕಾರ್ಯಕರ್ತರು ತಮ್ಮ ಬೂತ್ ವ್ಯಾಪ್ತಿಯಲ್ಲಿ ಅದಷ್ಟು ಹೆಚ್ಚಿನ ಪ್ರಮಾಣದಲ್ಲಿ ಶ್ರಮವಹಿಸಿ ನನ್ನ ಗೆಲುವಿಗೆ ಶ್ರಮಿಸಬೇಕು ಎಂದರು.

ಚಳ್ಳಕೆರೆ ಶಾಸಕ ರಘುಮೂರ್ತಿ ಮಾತನಾಡಿ
ಚಿತ್ರದುರ್ಗ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಕಳೆದ ಚುನಾವಣೆಯಲ್ಲಿ ಅದ ಪ್ರಮಾದಗಳನ್ನು  ಮಾಡದೆ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು ಎಂದು ಹೇಳಿದರು

Advertisement
Tags :
bengaluruBN ChandrappachitradurgaChitradurga Lok Sabha Constituencycongress candidatesuddionesuddione newsಕಾಂಗ್ರೆಸ್ ಅಭ್ಯರ್ಥಿಕಾರ್ಯಕರ್ತರು ಪಣತೊಡಬೇಕುಚಿತ್ರದುರ್ಗಚಿತ್ರದುರ್ಗ ಲೋಕಸಭಾ ಕ್ಷೇತ್ರಬಿ.ಎನ್.ಚಂದ್ರಪ್ಪಬೆಂಗಳೂರುಸಚಿವ ಡಿ.ಸುಧಾಕರ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article