Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಅಕ್ಟೋಬರ್ 27 ರಂದು ಕೋಟೆ ನಾಡಿನ ಕೋಗಿಲೆಗಳು ಸೀಸನ್ – 1

06:53 PM Oct 21, 2024 IST | suddionenews
Advertisement

 

Advertisement

ಚಿತ್ರದುರ್ಗ, ಅಕ್ಟೋಬರ್. 21 : ಚಿತ್ರದುರ್ಗ ತಾಲ್ಲೂಕು ನೂತನ ಕಸಾಪ ಅಧ್ಯಕ್ಷರ ಪದ ಗ್ರಹಣ ಮತ್ತು ‘ಕೋಟೆ ನಾಡಿನ ಕೋಗಿಲೆಗಳು - ಸೀಸನ್ 1 ಕಾರ್ಯಕ್ರಮವನ್ನು ಅಕ್ಟೋಬರ್ 27 ರಂದು ಭಾನುವಾರ ಅಂಬೇಡ್ಕರ್ ಸರ್ಕಲ್‍ನಲ್ಲಿರುವ ಚಿತ್ರದುರ್ಗ ಸ್ಕೌಟ್ ಮತ್ತು ಗೈಡ್ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ.

 

Advertisement

ಚಿತ್ರದುರ್ಗ ಜಿಲ್ಲೆಯ ಉತ್ತಮ ಹಾಡುಗಾರರನ್ನು ಗುರುತಿಸಿ, ಗೌರವಿಸುವ ಕಾರ್ಯಕ್ರಮ ಇದಾಗಿದೆ. ಮೊದಲ ಹಂತದಲ್ಲಿ ಸೀನಿಯರ್ ಮತ್ತು ಜೂನಿಯರ್ ವಿಭಾಗದಿಂದ ಆಯ್ದ 30 ಗಾಯಕರಿಗೆ ಮಾತ್ರ ಅವಕಾಶ. ಹಾಡುಗಳು ಕನ್ನಡದ ನಾಡು,ನುಡಿ,ಸಾಹಿತ್ಯ ಮತ್ತು ಸಂಸ್ಕøತಿಯನ್ನು ಬಿಂಬಿಸುವಂತಿರಬೇಕು. ಒಬ್ಬರಿಗೆ ಒಂದು ಹಾಡಿಗೆ ಮಾತ್ರ ಅವಕಾಶ. ಭಾಗವಹಿಸಿದ ಎಲ್ಲರಿಗೂ ಪ್ರಶಂಸಾ ಪತ್ರ ನೀಡಿ ಅಭಿನಂದಿಸಲಾಗುವುದು. ಉತ್ತಮ ಗಾಯಕರಿಗೆ ವಿಶೇಷ ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 7892006495, 9449510078 ಸಂಪರ್ಕಿಸಲು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Tags :
bengaluruchitradurgaKote Nadina kogileSeasonsuddionesuddione newsಕೋಟೆ ನಾಡಿನ ಕೋಗಿಲೆಗಳುಚಿತ್ರದುರ್ಗಬೆಂಗಳೂರುಸೀಸನ್ – 1ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article