Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಹಿಂದಿ ದಿವಸ್ ಹೇರಿಕೆ ವಿರೋಧಿಸಿ ಕರುನಾಡ ವಿಜಯಸೇನೆ ಪ್ರತಿಭಟನೆ

06:17 PM Sep 14, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 12 : ಅಂತರಾಷ್ಟ್ರೀಯ ಹಿಂದಿ ದಿವಸ್ ಆಚರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಪ್ರಧಾನ ಅಂಚೆ ಕಚೇರಿ ಮುಂಭಾಗ ಕರುನಾಡ ವಿಜಯಸೇನೆ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿ ಪೋಸ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.

Advertisement

ಕನ್ನಡಕ್ಕೆ 2700 ವರ್ಷಗಳ ಸುದೀರ್ಘ ಇತಿಹಾಸವಿದ್ದರೂ ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಹೇರಿಕೆ ಮಾಡುತ್ತಿದೆ. ಪ್ರಾದೇಶಿಕ ಭಾಷೆಗಳ ಇತಿಹಾಸದಲ್ಲಿಯೇ ಅತಿ ಹಳೆಯದಾದ ಕನ್ನಡ ಭಾಷೆಗೆ ಅಂತರಾಷ್ಟ್ರೀಯ ಭಾಷೆಯ ಸ್ಥಾನಮಾನ ನೀಡಬೇಕು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಎಲ್ಲಾ ಪಕ್ಷಗಳು ಕನ್ನಡವನ್ನು ಕಡೆಗಣಿಸುತ್ತ ಬರುತ್ತಿರುವುದನ್ನು ವಿರೋಧಿಸಿ ಅನೇಕ ವರ್ಷಗಳಿಂದಲೂ ಕರುನಾಡ ವಿಜಯಸೇನೆ ಹೋರಾಟ ಮಾಡಿಕೊಂಡು ಬರುತ್ತಿದೆ. ಪ್ರತಿ ವರ್ಷ ಸೆ.14 ರಂದು ಹಿಂದಿ ದಿವಸ್ ಆಚರಿಸುತ್ತಿರುವ ಕೇಂದ್ರ ಸರ್ಕಾರ ಕನ್ನಡ ಭಾಷಾ ದಿನವೆಂದು ಆಚರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಉಪಾಧ್ಯಕ್ಷೆ ರತ್ನಮ್ಮ,
ಕಾರ್ಯದರ್ಶಿ ಜಗದೀಶ್ ಸಿ. ಉಪಾಧ್ಯಕ್ಷ ಮುಜಾಯಿದ್, ನಗರಾಧ್ಯಕ್ಷ ಅವಿನಾಶ್, ನಾಗೇಶ್, ಯರ್ರಿಸ್ವಾಮಿ, ಕಮಲ, ನಾಗರಾಜ್ ಮುತ್ತು, ಹರೀಶ್‍ಕುಮಾರ್ ಪಿ.ಆರ್.
ಮಧುಸೂದನ್, ಪಾಂಡು, ಅಖಿಲೇಶ್ ಪ್ರತಿಭಟನೆಯಲ್ಲಿದ್ದರು.

Advertisement
Tags :
bengaluruchitradurgasuddionesuddione newsಕರುನಾಡ ವಿಜಯಸೇನೆ ಪ್ರತಿಭಟನೆಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹಿಂದಿ ದಿವಸ್
Advertisement
Next Article