ಚಿತ್ರದುರ್ಗ ಡಿಸೆಂಬರ್ 16 ರಂದು ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ
04:22 PM Dec 14, 2024 IST | suddionenews
Advertisement
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 14 : ನಗರದ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 16 ರ ಸೋಮವಾರ ಕಡೆಯ ಕಾರ್ತಿಕೋತ್ಸವದ ಪ್ರಯುಕ್ತ ಕಾರ್ತಿಕೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಲಿದೆ.
Advertisement
ಸಂಜೆ 7.00 ಗಂಟೆಗೆ ದೀಪಾರಾಧನೆ ನಂತರ ಶ್ರೀ ನೀಲಕಂಠೇಶ್ವರಸ್ವಾಮಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ಜರಗುತ್ತದೆ. ಮೆರವಣಿಗೆಯು ದೇವಸ್ಥಾನದಿಂದ ಗಾಂಧಿ ವೃತ್ತದ ವರೆಗೆ ನಡೆಯುತ್ತದೆ. ಅಲ್ಲಿಂದ ಬಂದ ನಂತರ ಅಷ್ಟೋತ್ತರ ಬಿಲ್ವಾರ್ಜನೆ ಹಾಗೂ ಮಹಾ ಮಂಗಳಾರತಿ ಆಗುತ್ತದೆ. ನಂತರ ಪ್ರಸಾದ ವ್ಯವಸ್ಥೆವಿರುತ್ತದೆ ಎಂದು ವೀರಶೈವ ಸಮಾಜದ ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.