Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ : ವಕೀಲರಿಗೆ ಸನ್ಮಾನ

06:44 PM Nov 24, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಬಾಪೂಜಿ ಸಮೂಹ ಸಂಸ್ಥೆಗಳು, ರಂಗಸೌರಭ ಕಲಾ ಸಂಘ ಹಾಗೂ ಶ್ರೀ ಶಿವಕುಮಾರ ಕಲಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪಿಳ್ಳೆಕೆರೇನಹಳ್ಳಿಯ ಬಾಪೂಜಿ ವಿದ್ಯಾಸಂಸ್ಥೆಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವ, ಮಕ್ಕಳ ಕಲರವ ಮತ್ತು ಶಿವಸಂಚಾರ 2024 ಮೂರನೇ ದಿನದ ನಾಟಕೋತ್ಸವ ನಡೆಯಿತು.

Advertisement

 

ಇದೇ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಐತಿಹಾಸಿಕ ನಾಟಕ ರಾಜಾವೀರ ಮದಕರಿನಾಯಕ ನಾಟಕದಲ್ಲಿ ಪಾತ್ರವನ್ನು ನಿರ್ವಹಿಸಿದ ವಕೀಲ ಕಲಾವಿದರಿಗೆ ಲೋಕಸಭಾ ಸದಸ್ಯ ಗೋವಿಂದ ಕಾರಜೋಳ ಸನ್ಮಾನಿಸಿ ಗೌರವಿಸಿದರು.

Advertisement

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆಎಮ್ ವೀರೇಶ್, ಸ.ಕ.ಕಾಲೇಜಿನ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ, ರಂಗನಿರ್ದೇಶಕ ಕೆಪಿಎಮ್ ಗಣೇಶಯ್ಯ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಜಂಬುನಾಥ, ರಾಜ್ಯ ಯುವ ಪ್ರಶಸ್ತಿ ವಿಜೇತ ಗೋಪಾಸ್ವಾಮಿ ನಾಯಕ, ಬಾಪೂಜಿ ಸಮೂಹ ಸಂಸ್ಥೆಯ ನಿರ್ದೇಶಕ ಕೆಎಮ್ ಚೇತನ್, ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಪ್ರೊ.ಎಂ.ಆರ್. ಜಯಲಕ್ಷ್ಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿರಚಿತ ಕೋಳೂರು ಕೊಡಗೂಸು ನಾಟಕವು ಮಹದೇವ ಹಡಪದ ನಿರ್ದೇಶನದಲ್ಲಿ ಸಾಣೇಹಳ್ಳಿ ಶಿವಸಂಚಾರದ ಕಲಾವಿದರು ಅಭಿನಯಿಸಿದರು.

 

ದಿವ್ಯಾಂಜಲಿ ಕೊಡಗೂಸು ಪಾತ್ರದಲ್ಲಿ, ಜಿ.ಆಕಾಶ್ -ಶಿವದೇವಯ್ಯ, ಎಸ್.ರೇಷ್ಮಾ -ಸೋಮಾಲೆ, ಭಾಗ್ಯಮ್ಮ -ಅಜ್ಜಿ ಪಾತ್ರದಲ್ಲಿ, ಹೆಚ್.ಬಸವರಾಜ -ಶಿವಪ್ಪ.ವಿದ್ಯಾರ್ಥಿ, ನಾಗರತ್ನ ಸಿ ಹಿರೇಮಠ –ರತ್ನಕ. ವಿದ್ಯಾರ್ಥಿ, ಪವನ್‍ಕುಮಾರ್.ವೈ -ಪ್ರಭು. ಆಳು. ವಿದ್ಯಾರ್ಥಿಯಾಗಿ, ಚಿನ್ಮಯರಾಮ ಎಸ್‍ವೈ -ಸಾಹುಕಾರ್ ಸಿದ್ದಪ್ಪ, ಭಾಸ್ಕರ್ ಹಿತ್ತಲಮನಿ -ಚೆಲುವಿ ಮಾಮ, ಸಂತೋಷ್ ಕಲಾಲ್ -ಸತ್ಯಪ್ರಕಾಶ್. ಬಾಲಶಿವ. ವಿದ್ಯಾರ್ಥಿ, ಸಾಗರ್ ದನದಮನಿ -ಶ್ಯಾಮಶಾಸ್ತ್ರಿ, ಎಸ್.ಅಕ್ಷಯ್ ವಿದ್ಯಾರ್ಥಿ, ಜಿ.ದಿನೇಶನಾಯ್ಕ ಆಶ್ರಮದ ಗುರುಗಳು ಮತ್ತು ಶಿವನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದರು.

Advertisement
Tags :
Bapuji VidyasirshanabengaluruchitradurgaKannada rajyotsavaLawyers honouredsuddionesuddione newsಕನ್ನಡ ರಾಜ್ಯೋತ್ಸವಚಿತ್ರದುರ್ಗಬಾಪೂಜಿ ವಿದ್ಯಾಸಂಸ್ಥೆಬೆಂಗಳೂರುವಕೀಲರಿಗೆ ಸನ್ಮಾನಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article