For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಜೂನ್ 16 ರಂದು ರಾಜ್ಯ ಮಟ್ಟದ ಉಚಿತ ವಧು-ವರರ ಪರಿಚಯ ಋಣಾನುಬಂಧ ಕಾರ್ಯಕ್ರಮ : ಪಿ.ಎಲ್.ಸುರೇಶ್‍ರಾಜು ಮಾಹಿತಿ

02:57 PM Jun 11, 2024 IST | suddionenews
ಚಿತ್ರದುರ್ಗ   ಜೂನ್ 16 ರಂದು ರಾಜ್ಯ ಮಟ್ಟದ ಉಚಿತ ವಧು ವರರ ಪರಿಚಯ ಋಣಾನುಬಂಧ ಕಾರ್ಯಕ್ರಮ   ಪಿ ಎಲ್ ಸುರೇಶ್‍ರಾಜು ಮಾಹಿತಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಜೂ.11  : ಆರ್ಯ ವೈಶ್ಯ ಸಂಘ ಮತ್ತು ಆರ್ಯವೈಶ್ಯ ಅಧಿಕಾರಿಗಳ ಹಾಗೂ ವೃತ್ತಿನಿರತರ ಸಂಘದ ವತಿಯಿಂದ ಋಣಾನುಬಂಧ ಆರ್ಯವೈಶ್ಯ ರಾಜ್ಯ ಮಟ್ಟದ ಪ್ರಥಮ ವಧು-ವರರ ಉಚಿತ ಪರಿಚಯ ವೇದಿಕೆ ಜೂ. 16 ರಂದು ಬೆಳಿಗ್ಗೆ 10 ಕ್ಕೆ ವಾಸವಿ ಮಹಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆವೋಪ ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು ತಿಳಿಸಿದರು.

Advertisement

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗಂಡು-ಹೆಣ್ಣನ್ನು ಒಂದು ವೇದಿಕೆಗೆ ತರುವ ಉದ್ದೇಶ ಇದಾಗಿದ್ದು, ಹಣ ಮತ್ತು ಸಮಯ ಎರಡು ಉಳಿತಾಯವಾಗಲಿದೆ. ಮಡಿಕೇರಿ, ಬೀದರ್, ಆಂಧ್ರ, ತಮಿಳುನಾಡಿನಿಂದಲೂ ಅರ್ಜಿಗಳು ಬಂದಿವೆ. ಇದುವರೆವಿಗೂ ಐದುನೂರು ಅರ್ಜಿಗಳು ನಮ್ಮ ಕೈಸೇರಿದ್ದು, ನೊಂದಣಿ ಹಾಗೂ ಗೋತ್ರ ಸೇರಿದಂತೆ ಹನ್ನೆರಡು ಕೌಂಟರ್‍ಗಳನ್ನು ತೆರೆಯಲಾಗಿದೆ.

Advertisement

ಪ್ರತಿ ಹಳ್ಳಿ ಹಳ್ಳಿಗಳಿಂದಲೂ ಉಚಿತ ವಧು-ವರರ ಪರಿಚಯ ವೇದಿಕೆಗೆ ಬೇಡಿಕೆಯಿದ್ದು, ನಮ್ಮ ಜನಾಂಗದಲ್ಲಿ ಕನ್ಯೆಗಳು ಸಿಗುವುದು ಕಷ್ಟವಾಗಿರುವುದರಿಂದ ಋಣಾನುಬಂಧ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆರ್ಯವೈಶ್ಯ ಜನಾಂಗದವರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪಿ.ಎಲ್.ಸುರೇಶ್‍ರಾಜು ಮನವಿ ಮಾಡಿದರು.

ಆವೋಪ ಕಾರ್ಯದರ್ಶಿ ಡಿ.ಆರ್.ತಿಪ್ಪೇಸ್ವಾಮಿ, ಸಂಚಾಲಕ ಎನ್.ವಿ. ವೆಂಕಟೇಶಮೂರ್ತಿ, ಆವೋಪ ಮಾಜಿ ಅಧ್ಯಕ್ಷ ಮೋಹನ್‍ಕುಮಾರ್, ಜಂಟಿ ಕಾರ್ಯದರ್ಶಿ ಎ.ವಿ.ಸುರೇಶ್‍ಬಾಬು, ನಿರ್ದೇಶಕರುಗಳಾದ ಆರ್.ಸಿ.ನಾಗರಾಜು, ಸುಹಾಸ್, ಸಿ.ಜೆ.ಲಕ್ಷ್ಮಿನರಸಿಂಹಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement
Tags :
Advertisement