Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಜ್ಞಾನ ಭಾರತಿ ವಿದ್ಯಾ ಮಂದಿರ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

03:54 PM Jun 21, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜೂ.21 : ಯೋಗವನ್ನು ಕೇವಲ ಯೋಗ ದಿನಾಚರಣೆಯಂದು ಮಾತ್ರ ಮಾಡದೆ, ಪ್ರತಿನಿತ್ಯವೂ ಮಾಡುವಂತಾಗಬೇಕು ಆಗ ಅದರ ನಿಜವಾದ ಲಾಭ ನಮಗೆ ದೊರಕುತ್ತದೆ‌ ಎಂದು ರಾಷ್ಟ್ರೋತ್ಥಾನ ಪರಿಷತ್ ನ ಹಾಗ ಶಾಲೆಯ ಕಾರ್ಯದರ್ಶಿ ಡಾ. ಕೆ ರಾಜೀವಲೋಚನ್ ಹೇಳಿದರು.

Advertisement

ನಗರದ ಹೊಳಲ್ಕೆರೆ ರಸ್ತೆಯ ಜ್ಞಾನ ಭಾರತಿ ವಿದ್ಯಾ ಮಂದಿರ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತದ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿಜಿ ಅವರ ಪ್ರಯತ್ನದ ಫಲವಾಗಿ ಇಂದು ಪ್ರಪಂಚದ 173 ದೇಶಗಳಲ್ಲಿ ಯೋಗ ದಿನಾಚರಣೆಯನ್ನು ಆಚರಣೆ ಮಾಡುವಂತಾಗಿದೆ.

Advertisement

ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಕರ್ನಾಟಕದ ಅನೇಕ ಸ್ಥಳಗಳಲ್ಲಿ ಹಾಗೂ ಬೆಂಗಳೂರಿನ ನೂರು ಕೇಂದ್ರಗಳಲ್ಲಿ ಯೋಗ ತರಬೇತಿಯನ್ನು ನೀಡಲಾಗುತ್ತಿದೆ. ಯೋಗಾಸನ ಮಾಡುವುದರಿಂದ ನಮ್ಮ ದೇಹವು ಸದಾ ಲವಲವಿಕೆಯಿಂದ ಹಸನ್ಮುಖಿಯಾಗಿ ನಮ್ಮ ದೈನಂದಿನ ಕಾರ್ಯಗಳನ್ನು ಮಾಡಲು ಸಹಾಯಮಾಡುತ್ತದೆ.
ಈ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ಸ್ವಸ್ಥ ಸುಸ್ಥಿರ ಸಮಾಜ ನಿರ್ಮಾಣ ಎಂಬ ಧ್ಯೇಯವನ್ನು ಇಟ್ಟುಕೊಂಡು  ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕರಾದ ಕೆಂಚವೀರಪ್ಪ  ಯೋಗಾಸನಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಮಾಡಿ ತೋರಿಸುತ್ತಾ ಯೋಗಾಸನಗಳಿಂದ ಆಗುವ ಪ್ರಯೋಜನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಯೋಗವು ನಮಗೆ ಯೋಗ ತಂದುಕೊಡುತ್ತದೆ. ಮನುಷ್ಯ ಪ್ರತಿನಿತ್ಯ ಜೀವನದಲ್ಲಿ 30 ನಿಮಿಷಗಳ ಕಾಲ ಯೋಗಾಸನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಮನುಷ್ಯನನ್ನು ಕಾಡುವ ಅನೇಕ ಮಾರಕ ಕಾಯಿಲೆಗಳಿಂದ ರಕ್ಷಿಸಿಕೊಳ್ಳಬಹುದು.

ಅಧಿಕರಕ್ತದ ಒತ್ತಡ ಹೃದಯ ಸಂಬಂಧಿ ಕಾಯಿಲೆಗಳು ,ಅಸ್ತಮಾ ,ಅಲರ್ಜಿ, ಸಕ್ಕರೆ ಕಾಯಿಲೆ ಮುಂತಾದವುಗಳು ಮನುಷ್ಯನನ್ನು ಜೀವಿತಾವಧಿಯುದಕ್ಕೂ ನರಳುವಂತೆ ಮಾಡುತ್ತವೆ. ಇಂತಹ ರೋಗಗಳನ್ನು ಬರೆದಂತೆ ತಡೆಗಟ್ಟಲು ಹಾಗೂ ನಿಯಂತ್ರಿಸಲು ನಮ್ಮ ದೈನಂದಿನ ಜೀವನದಲ್ಲಿ ಯೋಗಾಸನಗಳನ್ನು ಹಾಗೂ ಪ್ರಾಣಯಾಮಗಳನ್ನು ಮಾಡಬೇಕು.

ಮನುಷ್ಯನ ಬೌದ್ಧಿಕ, ಮಾನಸಿಕ ,ಶಾರೀರಿಕ ವಿಕಸನಕ್ಕೆ ಸಹಕಾರಿಯಾಗುವಂತಹ ತಡಾಸನ, ವೃಕ್ಷಾಸನ ,ಪಾದ ಹಸ್ತಾಸನ, ಶಶಾಂಕ್ ಆಸನ,  ಮುಂಡೂಕಾಸನ, ಭುಜಂಗಾಸನ, ಕಪಾಲಬಾತಿ,  ಶೀತಲಿ ಪ್ರಾಣಾಯಾಮ. ಭ್ರಮರಿ,  ಧ್ಯಾನ ಮುಂತಾದವುಗಳನ್ನು ವಿದ್ಯಾರ್ಥಿಗಳಿಗೆ ಮಾಡಿ ತೋರಿಸಿದರು.

ಯೋಗ ಮಾಡುವುದರಿಂದ ಅನೇಕ ರೋಗಗಳಿಗೆ ನೈಸರ್ಗಿಕವಾಗಿ ಗುಣಪಡಿಸಿಕೊಳ್ಳುವಂತಹ ಶಕ್ತಿ ಲಭಿಸುತ್ತದೆ. ಯಾವುದೇ ಕಾಯಿಲೆಗೆ ಕೇವಲ ಶಸ್ತ್ರಚಿಕಿತ್ಸೆ ಒಂದೇ ಮಾರ್ಗವಲ್ಲ, ಯೋಗದಿಂದಲೂ ಸಹ ಗುಣಪಡಿಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಟ್ಟರು.

ಜ್ಞಾನಭಾರತಿ ಶಾಲೆಯಲ್ಲಿ ಪ್ರತಿನಿತ್ಯ ಯೋಗ ಶಾಖೆಯನ್ನು ನಡೆಸಲಾಗುತ್ತದೆ. ಯೋಗ ಶಾಖೆಯು ಕೇವಲ ಒಂದು ಶಾಲೆ ಅಲ್ಲ ಸಮಾಜದ ಅನೇಕರಿಗೆ ಯೋಗಾಸನಗಳನ್ನು ಮಾಡಲು ಹಾಗೂ ರೋಗಗಳನ್ನು ದೂರ ಮಾಡುವ ಚಿಕಿತ್ಸಾ ಕೇಂದ್ರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಲು ನನಗೆ ಹೆಮ್ಮೆ ಎನಿಸುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ಹನುಮೇಶ್ ಪದಕಿ ಹಾಗೂ ಶಾಲೆಯ ಪ್ರಾಂಶುಪಾಲರಾದ ಶ್ರೀ ಪ್ರಜ್ವಲ್ ಬಿ.ಎಂ ಮತ್ತು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

Advertisement
Tags :
bengalurucelebrationchitradurgaInternational Yoga DayJnana Bharati Vidya Mandir Schoolsuddionesuddione newsಅಂತರಾಷ್ಟ್ರೀಯ ಯೋಗ ದಿನಾಚರಣೆಚಿತ್ರದುರ್ಗಜ್ಞಾನ ಭಾರತಿ ವಿದ್ಯಾ ಮಂದಿರ ಶಾಲೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article