For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಅಮೃತ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

09:50 AM Jun 21, 2024 IST | suddionenews
ಚಿತ್ರದುರ್ಗ   ಅಮೃತ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
Advertisement

Advertisement

ಸುದ್ದಿಒನ್, ಚಿತ್ರದುರ್ಗ, ಜೂ.21 : 10 ನೇ ವಿಶ್ವ ಯೋಗ ದಿನದ ಅಂಗವಾಗಿ ಅಮೃತ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಅಂತರ ಜಿಲ್ಲಾ ಯೋಗ ಸ್ಪರ್ಧೆ ಸಂಯೋಗ -2024 ಆಯೋಜಿಸಲಾಗಿತ್ತು.

Advertisement
Advertisement

ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಯುಷ್ ಅಧಿಕಾರಿ ಡಾಕ್ಟರ್ ಚಂದ್ರಕಾಂತ್ ನಾಗಸಮುದ್ರ, ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಾರ್ಯದರ್ಶಿ ಭರತ್ ಎಲ್,  ಡಾ. ನವೀನ್ ಬಸವರಾಜ್ ಸಜ್ಜನ್ ಅವರು ಹಾಜರಿದ್ದರು.

ಈ ಕಾರ್ಯಕ್ರಮದ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಪ್ರಶಾಂತ್ ಎಂ. ಎಸ್. ಪ್ರಾಂಶುಪಾಲರು ಅಮೃತ ಆಯುರ್ವೇದ ಕಾಲೇಜ್ ಅವರು ನಿರ್ವಹಿಸಿದ್ದರು.
ಡಾ. ಗಂಗಾಧರ್ ವರ್ಮ ಅವರು ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಹಾಗೂ ದಾವಣಗೆರೆಯ ಜಿಲ್ಲೆಯ ಎಲ್ಲಾ 06 ಆಯುರ್ವೇದ ಕಾಲೇಜುಗಳು ಭಾಗವಹಿಸಿದ್ದವು.

ಯೋಗ ಪ್ರಬಂಧ ಯೋಗ ನೃತ್ಯ ಯೋಗ ಭಾವಚಿತ್ರ ಹಾಗೂ ವೈಯಕ್ತಿಕ ಯೋಗ ಸ್ಪರ್ಧೆಗಳನ್ನು ಆಯೋಜಿಸಲಾಯಿತು. 450  ಯೋಗ ಪಟುಗಳು ಭಾಗಿಯಾಗಿದ್ದರು.

Tags :
Advertisement