Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಈ ಊರುಗಳಲ್ಲಿ ಜೂನ್ 20 ರಂದು ವಿದ್ಯುತ್ ವ್ಯತ್ಯಯ

05:42 PM Jun 19, 2024 IST | suddionenews
Advertisement

ಚಿತ್ರದುರ್ಗ. ಜೂನ್.19: ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ ಚಿತ್ರದುರ್ಗ, ಭರಮಸಾಗರ, ಸಿರಿಗೆರೆ, ವಿಜಾಪುರ, ಹಿರೆಗುಂಟನೂರು, ಪಂಡರಹಳ್ಳಿ, ಹೆಚ್.ಡಿ.ಪುರ, ಚಿತ್ರಹಳ್ಳಿ, ಮಾದನಾಯಕನಹಳ್ಳಿ, ತುರುವನೂರು, ಬಾಲೇನಹಳ್ಳಿ, ಹೊಳಲ್ಕೆರೆ, ಜೆ.ಎನ್.ಕೋಟೆ, ಐಮಂಗಳ, ನಾಯಕನಹಟ್ಟಿ, ವಿವಿ ಕೇಂದ್ರಗಳಲ್ಲಿ ಜೂನ್ 20 ರಂದು ತ್ರೈಮಾಸಿಕ ನಿರ್ವಹಣಾ ಕಾರ್ಯನಡೆಯಲಿದೆ.

Advertisement

ಈ ಸಂದರ್ಭದಲ್ಲಿ ಈ ಎಲ್ಲಾ ಕೇಂದ್ರಗಳಿಗೆ ವಿದ್ಯುತ್ ಮಾರ್ಗ ಮುಕ್ತತೆ ನೀಡಬೇಕಾಗಿರುವುದರಿಂದ ಸದರಿ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ ಎನ್.ಜೆ.ವೈ ಮತ್ತು ಕೃಷಿ 11 ಕೆ.ವಿ ಮಾರ್ಗಗಳಲ್ಲಿ ಜೂನ್ 20 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಈ ಎಲ್ಲಾ ವಿದ್ಯುತ್ ಸರಬರಾಜು ಕೇಂದ್ರ ಪ್ರದೇಶ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Advertisement
Tags :
bengaluruchitradurgaPower outagesuddionesuddione newsಚಿತ್ರದುರ್ಗಬೆಂಗಳೂರುವಿದ್ಯುತ್ ವ್ಯತ್ಯಯಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article