For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ : ಶುಕ್ರವಾರ ರಾತ್ರಿ ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ ? ಇಲ್ಲಿದೆ ಜಿಲ್ಲೆಯ ಮಳೆ ವರದಿ...!

04:40 PM Oct 05, 2024 IST | suddionenews
ಚಿತ್ರದುರ್ಗ   ಶುಕ್ರವಾರ ರಾತ್ರಿ ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ   ಇಲ್ಲಿದೆ ಜಿಲ್ಲೆಯ ಮಳೆ ವರದಿ
Advertisement

Advertisement
Advertisement

ಚಿತ್ರದುರ್ಗ. ಅ.05 :  ಶುಕ್ರವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 29 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 46.6 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 13 ಹಿರಿಯೂರು ತಾಲ್ಲೂಕು 27.1 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 9.8 ಮಿ.ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 30.3 ಮಿ.ಮೀ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 40.8 ಮಿ.ಮೀ ಮಳೆಯಾಗಿದೆ.

ಹೋಬಳಿವಾರು ಮಳೆ ವಿವರ: ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 39.1 ಮಿ.ಮೀ, ನಾಯಕನಹಟ್ಟಿ 91.5 ಮಿ.ಮೀ, ಪರಶುರಾಂಪುರ 25.8 ಮಿ.ಮೀ, ತಳಕು 40.2 ಮಿ.ಮೀ ಮಳೆಯಾಗಿದೆ.

Advertisement
Advertisement

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 10.4 ಮಿ.ಮೀ, ಭರಮಸಾಗರ 6.7 ಮಿ.ಮೀ, ಹಿರೇಗುಂಟನೂರು 10 ಮಿ.ಮೀ, ತುರುವನೂರು 26.2 ಮಿ.ಮೀ ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ ಹಿರಿಯೂರು 32.2 ಮಿ.ಮೀ, ಐಮಂಗಲ 20.8 ಮಿ.ಮೀ, ಧರ್ಮಪುರ 39.9 ಮಿ.ಮೀ, ಜವನಗೊಂಡನಹಳ್ಳಿ 18.3 ಮಿ.ಮೀ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 6.6 ಮಿ.ಮೀ, ಬಿ.ದುರ್ಗ 2.9 ಮಿ.ಮೀ, ರಾಮಗಿರಿ 4.7 ಮಿ.ಮೀ, ತಾಳ್ಯ 20.8 ಮಿ.ಮೀ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 30.1 ಮಿ.ಮೀ, ಮಾಡದಕೆರೆ 15.9 ಮಿ.ಮೀ, ಮತ್ತೋಡು 44.4 ಮಿ.ಮೀ, ಶ್ರೀರಾಂಪುರ 38.5 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 27.7 ಮಿ.ಮೀ ಹಾಗೂ ದೇವಸಮುದ್ರದಲ್ಲಿ 55.5 ಮಿ.ಮೀ ಮಳೆಯಾಗಿದೆ.

26 ಮನೆಗಳು ಭಾಗಶಃ ಹಾನಿ: ಶುಕ್ರವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯಾದ್ಯಂತ 26 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Tags :
Advertisement