For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ : ಇಂದು ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ?

04:47 PM Aug 14, 2024 IST | suddionenews
ಚಿತ್ರದುರ್ಗ   ಇಂದು ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ
Advertisement

ಚಿತ್ರದುರ್ಗ. ಆಗಸ್ಟ್.14: ಬುಧವಾರ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ತಾಲ್ಲೂಕಿನಲ್ಲಿ 53 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅಧಿಕ ಮಳೆಯಾಗಿದೆ.

Advertisement
Advertisement

Advertisement

ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 25.6 ಮಿ.ಮೀ, ಹಿರಿಯೂರು ತಾಲ್ಲೂಕು 15.4 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 45.6 ಮಿ.ಮೀ, ಹೊಸದುರ್ಗ ತಾಲ್ಲೂಕು 21.4 ಮಿ.ಮೀ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 32.3 ಮಿ.ಮೀ ಮಳೆಯಾಗಿದೆ.

Advertisement

ಹೋಬಳಿವಾರು ಮಳೆ ವಿವರ:
ಚಳ್ಳಕೆರೆ  ತಾಲ್ಲೂಕಿನ ಚಳ್ಳಕೆರೆಯಲ್ಲಿ 17.5 ಮಿ.ಮೀ, ನಾಯಕನಹಟ್ಟಿ 36 ಮಿ.ಮೀ, ಪರಶುರಾಂಪುರ 15.8 ಮಿ.ಮೀ, ತಳಕು 20.3 ಮಿ.ಮೀ ಮಳೆಯಾಗಿದೆ.

Advertisement

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 36.4 ಮಿ.ಮೀ, ಭರಮಸಾಗರ 24.1 ಮಿ.ಮೀ, ಹಿರೇಗುಂಟನೂರು 37.9 ಮಿ.ಮೀ, ತುರುವನೂರು 37.9 ಮಿ.ಮೀ ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 12 ಮಿ.ಮೀ, ಐಮಂಗಲ 16.2 ಮಿ.ಮೀ, ಧರ್ಮಪುರ 8.8 ಮಿ.ಮೀ, ಜೆ.ಜೆ.ಹಳ್ಳಿ 4.4 ಮಿ.ಮೀ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 33.5 ಮಿ.ಮೀ, ಬಿ.ದುರ್ಗ 40.1 ಮಿ.ಮೀ, ರಾಮಗಿರಿ 22.3 ಮಿ.ಮೀ, ತಾಳ್ಯ 27 ಮಿ.ಮೀ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 23.1 ಮಿ.ಮೀ, ಮಾಡದಕೆರೆ 19.5 ಮಿ.ಮೀ, ಮತ್ತೋಡು 9.4 ಮಿ.ಮೀ, ಶ್ರೀರಾಂಪುರ 5.7 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮುರುನಲ್ಲಿ 27.7 ಮಿ.ಮೀ ಹಾಗೂ ದೇಮಸಮುದ್ರದಲ್ಲಿ 33.7 ಮಿ.ಮೀ ಮಳೆಯಾಗಿದೆ.
ಬುಧವಾರ ಸುರಿದ ಮಳೆಗೆ ಚಳ್ಳಕೆರೆ ತಾಲ್ಲೂಕಿನಲ್ಲಿ 4 ಮನೆಗಳು ಭಾಗಶಃ ಹಾನಿಯಾಗಿವೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 7 ಮನೆಗಳಿಗೆ ನೀರು ನುಗ್ಗಿದ ಪ್ರಕರಣಗಳು ವರದಿಯಾಗಿದ್ದು, ಚಿತ್ರದುರ್ಗ ತಾಲ್ಲೂಕಿನಲ್ಲಿ 14 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ವರದಿ ತಿಳಿಸಿದೆ.

Tags :
Advertisement