For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಸೆಪ್ಟೆಂಬರ್ 28ರಂದು ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ : ಸಂಚಾರ ಮಾರ್ಗ ಬದಲಾವಣೆ

05:06 PM Sep 24, 2024 IST | suddionenews
ಚಿತ್ರದುರ್ಗ   ಸೆಪ್ಟೆಂಬರ್ 28ರಂದು ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ   ಸಂಚಾರ ಮಾರ್ಗ ಬದಲಾವಣೆ
Advertisement

ಚಿತ್ರದುರ್ಗ. ಸೆ.24: ಇದೇ ಸೆಪ್ಟೆಂಬರ್ 28ರಂದು ಚಿತ್ರದುರ್ಗ ನಗರದಲ್ಲಿ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಇರುವುದರಿಂದ ಸಂಚಾರ ಸುವ್ಯವಸ್ಥೆಗಾಗಿ ನಗರದಲ್ಲಿನ ರಸ್ತೆ ಸಂಚಾರದ ಮಾರ್ಗವನ್ನು ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಟಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

Advertisement
Advertisement

ಚಿತ್ರದುರ್ಗ ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಸೆಪ್ಟೆಂಬರ್ 28 ರಂದು ನಡೆಯಲಿದ್ದು, ಸಾರ್ವಜನಿಕ ಸಂಚಾರ ಸುಗಮಗೊಳಿಸುವ ದೃಷ್ಟಿಯಿಂದ ಸೆಪ್ಟೆಂಬರ್ 28ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ  12 ಗಂಟೆಯವರೆಗೆ ನಗರದ ಮುಖ್ಯರಸ್ತೆ ಮತ್ತು ಇತರೆ ರಸ್ತೆಗಳಲ್ಲಿ ಸಂಚರಿಸುವ ವಾಹನಗಳನ್ನು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಆದೇಶಿಸಿದ್ದಾರೆ.

Advertisement

ವಿಸರ್ಜನಾ ಮೆರವಣಿಗೆಯು ನಗರದಲ್ಲಿನ ಮುಖ್ಯ ರಸ್ತೆಯಾದ ಬಿ.ಡಿ.ರಸ್ತೆಯಲ್ಲಿ ಸಾಗಿ ಹೊಳಲ್ಕೆರೆ ರಸ್ತೆ ಮುಖಾಂತರ ಸಾಗಲಿದ್ದು, ಈ ವಿಸರ್ಜನಾ ಮೆರವಣಿಗೆಯಲ್ಲಿ 3 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಸುಗಮ ಸಂಚಾರದ ಹಿತದೃಷ್ಟಿಯಿಂದ ಚಿತ್ರದುರ್ಗ ನಗರದಲ್ಲಿ ಸಂಚರಿಸಲಿರುವ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಆದೇಶ ಮಾಡಲಾಗಿದೆ.

Advertisement

ಮಾರ್ಗ ಬದಲಾವಣೆ ವಿವರ : ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್‍ನಿಂದ ಮಹಾತ್ಮ ಗಾಂಧಿ ವೃತ್ತ, ಹೊಳಲ್ಕೆರೆ ಮಾರ್ಗದ ಕಣಿವೆ ಕ್ರಾಸ್‍ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿಷೇಧಿಸಿದೆ.
ಬೆಂಗಳೂರು, ಚಳ್ಳಕರೆ, ಹೊಸಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಭೀಮಸಮುದ್ರ ಕಡೆಯಿಂದ ಬರುವ ಎಲ್ಲಾ ಮಾದರಿಯ ಲಘು ಮತ್ತು ಭಾರಿ ವಾಹನಗಳು ಹಾಗೂ ಖಾಸಗಿ ಮತ್ತು ಕೆಎಸ್‍ಆರ್‍ಟಿಸಿ ಬಸ್ಸುಗಳು ಎನ್.ಹೆಚ್-48 ರಸ್ತೆಯ ಮುಖಾಂತರ ಬಂದು ನಗರದ ಮೆದೇಹಳ್ಳಿ ರಸ್ತೆ ಮತ್ತು ಜೆಎಂಐಟಿ ವೃತ್ತದ ಮುಖಾಂತರ ನಗರಕ್ಕೆ ಬಂದು ಅದೇ ಮಾರ್ಗದಲ್ಲಿ ವಾಪಸ್ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಟಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

Tags :
Advertisement