Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಅದ್ದೂರಿಯಾಗಿ ನಡೆದ ಉಚ್ಚಂಗಿ ಯಲ್ಲಮ್ಮ ಅಮ್ಮನವರ ಮೆರವಣಿಗೆ

04:28 PM May 24, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮೇ. 24 : ನಗರದ ಗ್ರಾಮ ದೇವತೆಗಳಲ್ಲಿ ಒಂದಾದ ಉಚ್ಚಂಗಿ ಯಲ್ಲಮ್ಮ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಅಮ್ಮನವರ ರಥೋತ್ಸವವನ್ನು ಇಂದು ನಗರದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

Advertisement

ಮೇ. 14ರಂದು ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಸಾರನ್ನು ಹಾಕಲಾಯಿತು. ಮೇ. 18ರಂದು ಅಮ್ಮನವರಿಗೆ ಕಂಕಣಧಾರಣೆ, ಮದಲಿಂಗಿತ್ತಿಯ ಪೂಜೆಯನ್ನು ಮಾಡಲಾಯಿತು. ರಾತ್ರಿ ಅಮ್ಮನವರಿಗೆ ಸಿಂಹ ಉತ್ಸವವನ್ನು ನೇರವೇರಿಸಲಾಯಿತು. ಮೇ. 19ರಂದು ಸರ್ಪೋತ್ಸವ ಮೇ.20 ರಂದು ನವಿಲು ಉತ್ಸವ, ಮೇ. 21ರಂದು ದೇವಿಗೆ ಅಭೀಷೇಕ ಹಾಗೂ ಮಹಾ ಮಂಗಳಾರತಿಯನ್ನು ನಡೆಸಲಾಯಿತು.


ಮೇ. 22ರಂದು ದೇವಿಯು ಕೆಳಗಿಳಿದು ರಾಜಬೀದಿಯಲ್ಲಿ ಕುದುರೆ ಉತ್ಸವ ಮತ್ತು ಅನ್ನ ಸಂತರ್ಪಣೆಯನ್ನು ನಡೆಸಲಾಯಿತು. ಮೇ. 23ರಂದು ದೇವಿಗೆ ಅಭೀಷೇಕ ಮಹಾ ಮಂಗಳಾರತಿ ನಡೆದಿದ್ದು, ಮೇ. 24 ರ ಇಂದು ದೇವಿಗೆ ಅಭೀಷೇಕ ಮತ್ತು ಮಹಾ ಮಂಗಳಾರತಿಯ ನಂತರ ರಥೋತ್ಸವವನ್ನು ನಗರದಲ್ಲಿ ನಡೆಸಲಾಯಿತು.

ಮೇ. 25ರ ನಾಳೆ ಶನಿವಾರ ಮಧ್ಯಾಹ್ನ 12ಕ್ಕೆ ದೇವಿಗೆ ವಿಶೇಷ ಭಂಡಾರ ಪೂಜೆ ಸಂಜೆ 6ಕ್ಕೆ ಅಮ್ಮನವರ ಸಿಡಿ ಉತ್ಸವ ನಡೆಯಲಿದೆ. ಮೇ. 23 ರ ಬೆಳಿಗ್ಗೆ 8 ಕ್ಕೆ ದೇವಿಗೆ ಅಭೀಷೇಕ ರಾತ್ರಿ 9ಕ್ಕೆ ಜೋಗಪ್ಪ ಮತ್ತು ಜೋಗಮ್ಮನವರಿಂದ ಓಕುಳಿ ಕಾರ್ಯಕ್ರಮ ನಡೆಯಲಿದ್ದು ಮೇ. 28 ರಂದು ಬೆಳಿಗ್ಗೆ 8 ಕ್ಕೆ ದೇವಿಗೆ ಅಭೀಷೇಕ ಕಂಕಣ ವಿಸರ್ಜನೆಯೊಂದಿಗೆ ಈ ವರ್ಷದ ಜಾತ್ರಾ ಕಾರ್ಯಕ್ರಮ ಮುಕ್ತಾಯವಾಗಲಿದೆ
ಇಂದು ಬೆಳಿಗ್ಗೆ ದೇವಸ್ಥಾನದಲ್ಲಿ ಅಮ್ಮನವರಿಗೆ ಅಭೀಷೇಕವನ್ನು ಮಾಡಿ ವಿವಿಧ ರೀತಿಯ ಹೂಗಳಿಂದ ಆಲಂಕಾರವನ್ನು ಮಾಡಲಾಗಿತು.

ತದ ನಂತರ ದೇವಾಲಯದ ಹೊರಗಡೆಯಲ್ಲಿ ಅಮ್ಮನವರನ್ನು ಎತ್ತಿನ ಗಾಡಿಯಲ್ಲಿ ಕುದುರೆಯ ಮೇಲೆ ಕುಳ್ಳರಿಸಿ ದೇವಿಯ ಆಲಂಕಾರವನ್ನು ಮಾಡಿ ಆರು ಕೈಗಳಿಗೂ ಸಹಾ ವಿವಿಧ ರೀತಿಯ ಆಯುಧಗಳನ್ನು ನೀಡಲಾಗಿತು, ಅಮ್ಮನವರು ಮುಖ ಪದ್ಮದ ತಲೆಗೆ ಬಂಗಾರ ಬಣ್ಣದ ಕೀರಿಟವನ್ನು ಧರಿಸಿದ್ದು ಅದರ ಮೇಲೆ ಐದು ಹೆಡೆ ನಾಗರಹಾವನ್ನು ನಿರ್ಮಾಣ ಮಾಡಲಾಗಿತು.

ದೇವಿಯ ಹಿಂದಗಡೆಯಲ್ಲಿ ಕಲರ್, ಬಿಳಿ, ಶಾವಂತಿಗೆ, ಚಂಡಹೂ ಸೇರಿದಂತೆ ವಿವಿಧ ರೀತಿಯ ಹೂಗಳಿಂದ ಆಲಂಕಾರವನ್ನು ಮಾಡಲಾಗಿತು. ಮುಂದಗಡೆಯ ಎರಡು ಕಡೆಗಳಲ್ಲಿ ನವೀಲನ್ನು ಆಕೃತಿ ಮತ್ತು ತಲೆಯ ಮೇಲೆ ಕಮಲದ ಆಕೃತಿಯನ್ನು ಸಹಾ ನಿರ್ಮಾಣ ಮಾಡಲಾಗಿತು.
ಈ ಮೆರವಣಿಗೆಯಲ್ಲಿ ವೀರಗಾಸೆ, ಚಂಡೆ, ಟಾಷ್ಯೂ, ನಂದಿಧ್ವಜ, ಕೀಲು ಕುದುರೆ, ತಟ್ಟೆರಾಯ, ಉರುಮೆ, ಕಹಳೆ, ನಾದಸ್ವರ ಯಕ್ಷಗಾನದ ಆಲಂಕಾರಗಳು ಸೇರಿದಂತೆ ವಿವಿಧ ರೀತಿಯ ಜಾನಪದ ವಾದ್ಯಗಳು ಭಾಗವಹಿಸಿದ್ದವು.

ಈ ಸಂದರ್ಭದಲ್ಲಿ ಮದಕರಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್, ನಗರಸಭಾ ಸದಸ್ಯರಾದ ಚಂದ್ರಶೇಖರ್, ವೇದ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ಎನ್.ಡಿ.ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು. ವಿವಿಧ ರೀತಿಯ ಜಾನಪದ ಕಲಾ ತಂಡಗಳ ಸದ್ದಿಗೆ ಯುವಕರು ಹಾಗೂ ಮಕ್ಕಳು ಕುಣಿದು ಕುಪ್ಪಳಿಸಿದ ದೃಶ್ಯ ಕಂಡು ಬಂದಿತು.

 

ನಗರದ ಉಚ್ಚಂಗಿ ಯಲ್ಲಮ್ಮ ದೇವಾಲಯದಿಂದ ಪ್ರಾರಂಭವಾದ ಮೆರವಣಿಗೆ ಚಿಕ್ಕಪೇಟೆ, ಆನೆಬಾಗಿಲು, ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ, ಸಂತೇಪೇಟೆ ವೃತ್ತ, ಬಿ.ಡಿ.ರಸ್ತೆ, ಮದಕರಿ ವೃತ್ತ, ಜೋಗಿಮಟ್ಟಿ ರಸ್ತೆ, ಫಿಲ್ಟರ್ ಹೌಸ್ ರಸ್ತೆ, ಏಕನಾಥೇಶ್ವರಿ ಪಾದಗುಡಿಯ ಮೂಲಕ ಮರಳಿ ದೇವಾಲಯವನ್ನು ತಲುಪಿತು. ದಾರಿಯುದ್ದಕ್ಕು ಭಕ್ತಾಧಿಗಳು ಅಮ್ಮನವರ ದರ್ಶಕ್ಕೆ ಕಾದಿದ್ದು ಹಣ್ಣು-ಕಾಯಿಗಳನ್ನು ನೀಡಿ ಪೂಜೆಯನ್ನು ಮಾಡಿಸಿದರು.

ಈ ಕಾರ್ಯದಲ್ಲಿ ಮಕ್ಕಳು ಮಹಿಳೆಯರು ಪುರುಷರು ಸೇರಿದಂತೆ ಹಲವಾರು ಜನತೆ ತಾಯಿಯ ದರ್ಶನವನ್ನು ಪಡೆದು ಪುನೀತರಾದರು.

Advertisement
Tags :
bengaluruchitradurgaJatra Mahotsavasuddionesuddione newsUchchangi Yallamma Ammanavaruಅದ್ದೂರಿಉಚ್ಚಂಗಿ ಯಲ್ಲಮ್ಮ ಅಮ್ಮನವರುಚಿತ್ರದುರ್ಗಬೆಂಗಳೂರುಮೆರವಣಿಗೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article