ಚಿತ್ರದುರ್ಗ | ಕನಕ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್. ಎನ್. ಲೋಕೇಶ್ ಆಯ್ಕೆ
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 23 : ರಾಯಲ್ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ, ದುರ್ಗಾ ಹೋಟೆಲ್ ಮಾಲೀಕ ಎಚ್. ಎನ್. ಲೋಕೇಶ್ ಅವರು ಕನಕ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿದ್ದ ಡಿ.ಮಲ್ಲಿಕಾರ್ಜುನ್ ಅವರ ಅಕಾಲಿಕ ಮರಣದಿಂದ ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನ ತೆರವಾಗಿತ್ತು.ಆದ್ದರಿಂದ ಸಂಘದ ನಿರ್ದೇಶಕರಾಗಿದ್ದ ಎಚ್.ಎನ್.ಲೋಕೇಶ್ ಅವರನ್ನು ಸಹಕಾರ ಸಂಘದ ಸದಸ್ಯರು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. 2001-02 ನೇ ಸಾಲಿನಲ್ಲಿ ಕೆ.ಬಿ. ರಾಮಪ್ಪ ನವರು ಕನಕ ಪತ್ತಿನ ಸಹಕಾರ ಸಂಘವನ್ನು ಆರಂಭಿಸಿದರು.
ಪದಾಧಿಕಾರಿಗಳ ಆಯ್ಕೆ : ಸಂಸ್ಥಾಪಕ ಅಧ್ಯಕ್ಷರಾದ ಕೆ.ಬಿ.ರಾಮಪ್ಪ, ಉಪಾಧ್ಯಕ್ಷ ಓಂಕಾರಪ್ಪ, ಕಾರ್ಯದರ್ಶಿ ಷಣ್ಮುಖಪ್ಪ, ನಿರ್ದೇಶಕರಾದ ಕೆ.ಬಿ.ಕೃಷ್ಣಪ್ಪ, ಪುಷ್ಪರಾಜ್, ದೊಡ್ಡ ಲಿಂಗಪ್ಪ, ನೀಲಗಿರಿಯಪ್ಪ, ಡಿ.ಶೋಭಾ, ಈ. ಅರುಣ್‍ಕುಮಾರ್, ಸೋಮಶೇಖರ್, ನರಸಿಂಹಮಮೂರ್ತಿ, ಬಸವರಾಜಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನೂತನ ನಿರ್ದೇಶಕರಾಗಿ ಆರ್.ಹಾಲಪ್ಪ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.