Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದ ಸರ್ಕಾರಿ ಅಭಿಯೋಜಕರ ಕಾರು ಭೀಕರ ಅಪಘಾತ : ದೇವರ ದಯೆ ಕುಟುಂಬ ಸೇಫ್

01:01 PM Nov 04, 2024 IST | suddionenews
Advertisement

ಚಿತ್ರದುರ್ಗ: ಅದೃಷ್ಟ ಕೆಟ್ಟರೆ ಹುಲ್ಲು ಕಡ್ಡಿಯೂ ಹಾವಾಗುತ್ತೆ.. ಅದೃಷ್ಟ ಚೆನ್ನಾಗಿದ್ದರೆ ಬಂಡೆ ಕಲ್ಲೆ ಬಿದ್ದರು ಬಚಾವ್ ಆಗುತ್ತಾರೆ ಎಂಬ ಮಾತಿದೆ. ನಿಜಕ್ಕೂ ಈ ಮಾತು ಸರ್ಕಾರಿ ಅಧಿಕಾರಿ ಜಗದೀಶ್ ಅವರ ಬದುಕಲ್ಲಿ ಸತ್ಯವಾಗಿದೆ. ಚಿತ್ರದುರ್ಗ ಪೋಕೋ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾಗಿರುವ ಜಗದೀಶ್ ಅವರ ಕಾರು ಭೀಕರ ಅಪಘಾತಕ್ಕೆ ಒಳಗಾಗಿತ್ತು. ಕಾರು ಅಪಘಾತವಾಗಿರುವುದನ್ನು ನೋಡಿದರೆ ಎದೆ ಝಲ್ ಎನ್ನುತ್ತದೆ. ಅಷ್ಟು ನಜ್ಜುಗುಜ್ಜಾಗಿದೆ. ಆದರೆ ದೇವರ ದಯೆ, ಅದೃಷ್ಟವಶಾತ್ ಜಗದೀಶ್ ಹಾಗೂ ಅವರ ಕುಟುಂಬದ ಸದಸ್ಯರಿಗೆ ತೊಂದರೆಯಾಗಿಲ್ಲ. ಪ್ರಾಣಾಪಯಾದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಬರುವಾಗ ಈ ಘಟನೆ ನಡೆದಿದೆ. ಹಿಂಬದಿಯಿಂದ ಬಂದ ಕೆ.ಎಸ್.ಆ‌ರ್.ಟಿ.ಸಿ. ಬಸ್‌ ಡಿಕ್ಕಿ ಹೊಡೆದಿದೆ. ಹಿರಿಯೂರು ತಾಲೂಕು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಜವನಗೊಂಡನಹಳ್ಳಿ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ನ.3 ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜಗದೀಶ್, ಅವರ ಪತ್ನಿ ನಾಗವೇಣಿ ಹಾಗೂ ಸಹೋದರಿ ಲತಾ ಅವರು ಅಪಘಾತದ ತೀವ್ರತೆಗೆ ಗಾಯಗೊಂಡಿದ್ದಾರೆ. ಸದ್ಯ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಗದೀಶ್ ಅವರು ಪೋಕ್ಸ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ವಾದ ಮಾಡುತ್ತಿರುತ್ತಾರೆ. ಇತ್ತೀಚೆಗೆ ಮುರುಘಾ ಶರಣರ ಪ್ರಕರಣದಲ್ಲೂ ಜಗದೀಶ್ ಸಮರ್ಥವಾಗಿ ವಾದ ಮಂಡಿಸಿದ್ದರು. ಸ್ವಾಮೀಜಿಗೆ ಸದ್ಯ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ. ಜಗದೀಶ್ ಅವರ ಕಾರು ಅಪಘಾತದ ಸುದ್ದಿ ಕೇಳಿ ಚಿತ್ರದುರ್ಗದ ಮಂದಿಯೂ ಆತಂಕಗೊಂಡಿದ್ದರು. ಸದ್ಯ ಯಾವುದೇ ಅನಾಹುತವಾಗಿಲ್ಲದೆ ಇರುವುದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

Advertisement
Tags :
bengalurucar tragic accidentchitradurgagovernment prosecutorsuddionesuddione newsಕಾರು ಭೀಕರ ಅಪಘಾತಚಿತ್ರದುರ್ಗಬೆಂಗಳೂರುಸರ್ಕಾರಿ ಅಭಿಯೋಜಕರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article