Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಮೇ 7 ರವರೆಗೂ ಏಕನಾಥೇಶ್ವರಿ ಅಮ್ಮನವರ ಜಾತ್ರೆ

05:46 PM Apr 24, 2024 IST | suddionenews
Advertisement

 

Advertisement

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 24 : ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ಮುಂದೂಡಲಾಗಿದ್ದ ಏಕನಾಥೇಶ್ವರಿ ಅಮ್ಮನವರ ಜಾತ್ರೆ ಏ.23 ರಿಂದ ಆರಂಭಗೊಂಡಿದ್ದು, ಮೇ.7 ರಂದು ಕಂಕಣ ವಿಸರ್ಜನೆ ಮತ್ತು ಗಂಗಾಪೂಜೆಯೊಂದಿಗೆ ಮುಕ್ತಾಯಗೊಳ್ಳಲಿದೆ.

27 ರಂದು ಕಂಕಣ ಧಾರಣೆ, ಭಂಡಾರ ಪೂಜೆ, ರುದ್ರಾಭಿಷೇಕ, ರಾತ್ರಿ ಎಂಟು ಗಂಟೆಯಿಂದ ರಾಜ ಬೀದಿಗಳಲ್ಲಿ ಸಿಂಹವಾಹಿನಿ ಉತ್ಸವ.

28 ರಂದು ರಾತ್ರಿ ಎಂಟು ಗಂಟೆಯಿಂದ ಸರ್ಪೋತ್ಸವದೊಂದಿಗೆ ಭಕ್ತರ ಮನೆಗಳಲ್ಲಿ ಪೂಜೆ.

29 ರಂದು ರಾತ್ರಿ 8 ಗಂಟೆಯಿಂದ ರಾಜ ಬೀದಿಗಳಲ್ಲಿ ಮಯೂರೋತ್ಸವ,

30 ರಂದು ರಾತ್ರಿ ಏಕನಾಥೇಶ್ವರಿ ಅಮ್ಮನಿಗೆ ಭಂಡಾರ ಪೂಜೆ.

ಮೇ.1 ರಂದು ಬೆಳಿಗ್ಗೆ 9 ಗಂಟೆಗೆ ಭಂಡಾರದ ಪೂಜೆ, ಏಕನಾಥೇಶ್ವರಿ ಅಮ್ಮನನ್ನು ಬೆಟ್ಟದಿಂದ ಕೆಳಗಿಳಿಸಲಾಗುವುದು.

ಅರ್ಚಕರ ಮನೆಯಲ್ಲಿ ಮಕ್ಕಳಿಗೆ ಬೇವಿನ ಉಡುಗೆ ಸೇವಾ ಅಶ್ವೋತ್ಸವದಲ್ಲಿ ಕಾಮನಬಾವಿ ಹೊಂಡದಲ್ಲಿ ಗಂಗಾಪೂಜೆ. ನಂತರ ಜಿಲ್ಲಾಧಿಕಾರಿ ಬಂಗಲೆ ಹಾಗೂ ಕೆಳಗೋಟೆ ಭಕ್ತಾಧಿಗಳಿಂದ ಪೂಜೆ.

2 ರಂದು ಸಂಜೆ ಏಳಕ್ಕೆ ಕರುವಿನಕಟ್ಟೆ ಮತ್ತು ಪಾದಗಟ್ಟೆ, ವಿದ್ಯಾನಗರ, ಮೆದೇಹಳ್ಳಿ ಭಕ್ತಾಧಿಗಳಿಂದ ಪೂಜೆ.

3 ರಂದು ಬೆಳಿಗ್ಗೆ ಎಂಟು ಗಂಟೆಯಿಂದ ರಾಜ ಬೀದಿಗಳಲ್ಲಿ ಅಶ್ವೋತ್ಸವ ಮತ್ತು ಹೂವಿನ ಉತ್ಸವ, ಕರುವಿನಕಟ್ಟೆ ಮತ್ತು ಜೋಗಿಮಟ್ಟಿ ರಸ್ತೆಯ ಭಕ್ತಾಧಿಗಳಿಂದ ಮಹಾ ಮಂಗಳಾರತಿ.

4 ರಂದು ಸಂಜೆ 5-30 ಕ್ಕೆ ಜಾತ್ರಾ ಬಯಲಿನ ಪಾದಗಟ್ಟೆಯಲ್ಲಿ ಏಕನಾಥೇಶ್ವರಿ ಅಮ್ಮನವರ ಸಿಡಿ ಉತ್ಸವ. ಮಹಾಮಂಗಳಾರತಿ.
5 ರಂದು ಸಂಜೆ 6-30 ಕ್ಕೆ ಬೆಟ್ಟದ ಮೇಲೆ ಓಕಳಿ ಉತ್ಸವ.

ಸಮಸ್ತ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಏಕನಾಥೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಏಕನಾಥೇಶ್ವರಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಜಮೀನ್ದಾರ್ ದೊರೆಸ್ವಾಮಿ ಮನವಿ ಮಾಡಿದ್ದಾರೆ.

Advertisement
Tags :
bengaluruchitradurgaEknatheshwari Ammanavara Jatrasuddionesuddione newsಏಕನಾಥೇಶ್ವರಿ ಅಮ್ಮನವರ ಜಾತ್ರೆಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article