Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಜಿಲ್ಲೆಯ ಮಳೆ ವರದಿ: ರಾಯಾಪುರದಲ್ಲಿ ಅತಿಹೆಚ್ಚು ಮಳೆ : ಯಾವ ಊರಲ್ಲಿ ಎಷ್ಟು ಮಳೆ ಮತ್ತು ಹಾನಿ : ಇಲ್ಲಿದೆ ಸಂಪೂರ್ಣ ಮಾಹಿತಿ

05:02 PM Jun 07, 2024 IST | suddionenews
Advertisement

ಚಿತ್ರದುರ್ಗ. ಜೂನ್.07:  ಗುರುವಾರ ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಯಾಪುರದಲ್ಲಿ 80 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ.

Advertisement

ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 49 ಮಿ.ಮೀ, ಬಿಜಿಕೆರೆ 32.4 ಮಿ.ಮೀ, ರಾಂಪುರ 62.2 ಮಿ.ಮೀ, ದೇವಸಮುದ್ರ 50.2 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 9.4ಮಿ.ಮೀ, ಚಿತ್ರದುರ್ಗ-2ರಲ್ಲಿ 11.5ಮಿ.ಮೀ, ತುರುವನೂರು 73.4ಮಿ.ಮೀ, ಭರಮಸಾಗರ 6.4ಮಿ.ಮೀ, ಹಿರೇಗುಂಟನೂರು 2.1ಮಿ.ಮೀ, ಐನಹಳ್ಳಿ 12.6ಮಿ.ಮೀ, ಸಿರಿಗೆರೆ 7.4 ಮಿ.ಮೀ, ಮಳೆಯಾಗಿದೆ.

Advertisement

ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 10.6ಮಿ.ಮೀ, ಸುಗೂರು 26.2ಮಿ.ಮೀ, ಬಾಬ್ಬೂರು 10.2 ಮಿ.ಮೀ, ಈಶ್ವರಗೆರೆ 46.8ಮಿ.ಮೀ, ಇಕ್ಕನೂರು 28.2 ಮಿ.ಮೀ, ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 24.6ಮಿ.ಮೀ, ಮತ್ತೋಡು 18.4ಮಿ.ಮೀ, ಶ್ರೀರಾಂಪುರ 5 ಮಿ.ಮೀ, ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 3.2 ಮಿ.ಮೀ, ಚಿಕ್ಕಜಾಜೂರು 5.4 ಮಿ.ಮೀ, ಬಿ. ದುರ್ಗ 5.2 ಮಿ.ಮೀ, ಹೆಚ್‍ಡಿ ಪುರ 4.2 ಮಿ.ಮೀ, ತಾಳ್ಯ 3.2 ಮಿ.ಮೀ, ರಾಮಗಿರಿ 3.4 ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 23.2ಮಿ.ಮೀ, ಪರುಶುರಾಂಪುರ 41.2ಮಿ.ಮೀ, ನಾಯಕನಹಟ್ಟಿ 77.4ಮಿ.ಮೀ, ತಳಕು 34.4ಮಿ.ಮೀ, ಡಿ. ಮರಿಕುಂಟೆ 13.6 ಮಿ.ಮೀ ಮಳೆಯಾಗಿದೆ.

ಜಿಲ್ಲೆಯಾದ್ಯಂತ 32 ಮನೆಗಳು ಭಾಗಶಃ ಹಾನಿ: ಗುರುವಾರ ಸುರಿದ ಮಳೆಗೆ ಜಿಲ್ಲಾಯಾದ್ಯಂತ  ಒಟ್ಟು 32 ಮನೆಗಳು ಭಾಗಶಃ ಹಾನಿಯಾಗಿವೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ ಭಾಗಶಃ 11 ಮನೆಗಳು ಹಾನಿಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಭಾಗಶಃ 5 ಮನೆಗಳು ಹಾಗೂ 2 ಹೆಕ್ಟೆರ್ ತೋಟಗಾರಿಕೆ ಬೆಳೆ ಕೂಡ ಹಾನಿಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ ಭಾಗಶಃ 1 ಮನೆ ಹಾನಿಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 9 ಸಣ್ಣ ಜಾನುವಾರು ಹಾನಿಯಾಗಿದೆ. ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಭಾಗಶಃ 16 ಮನೆಗಳು ಹಾಗೂ 4 ಸಣ್ಣ ಜಾನುವಾರು, 1 ದೊಡ್ಡ ಜಾನುವಾರು ಹಾನಿಯಾಗಿದ್ದು, 19 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Advertisement
Tags :
bengaluruchitradurgaDistrict Rainfall ReportHere is the complete informationHighest RainfallRayapursuddionesuddione newsಅತಿಹೆಚ್ಚು ಮಳೆಇಲ್ಲಿದೆ ಸಂಪೂರ್ಣ ಮಾಹಿತಿಚಿತ್ರದುರ್ಗಬೆಂಗಳೂರುಮಳೆ ವರದಿರಾಯಾಪುರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article