For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ಜಿಲ್ಲೆಯ ಮಳೆ ವರದಿ : ಸೂಗೂರುನಲ್ಲಿ ಹೆಚ್ಚು ಮಳೆ

03:57 PM May 20, 2024 IST | suddionenews
ಚಿತ್ರದುರ್ಗ ಜಿಲ್ಲೆಯ ಮಳೆ ವರದಿ   ಸೂಗೂರುನಲ್ಲಿ ಹೆಚ್ಚು ಮಳೆ
Advertisement

Advertisement

ಚಿತ್ರದುರ್ಗ,ಮೇ.20 : ಭಾನುವಾರ ಸುರಿದ ಮಳೆ ವಿವರದನ್ವಯ ಹಿರಿಯೂರು ತಾಲ್ಲೂಕಿನ ಸೂಗೂರುನಲ್ಲಿ 52.4ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರು 11.4 ಮಿ.ಮೀ, ಇಕ್ಕನೂರು 26 ಮಿ.ಮೀ, ಈಶ್ವರಗೆರೆ 21.8 ಮಿ.ಮೀ, ಬಬ್ಬೂರು 14.4 ಮಿ.ಮೀ ಮಳೆಯಾಗಿದೆ.

Advertisement

Advertisement

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 8.8 ಮಿ.ಮಿ, ಚಿತ್ರದುರ್ಗ-2ರಲ್ಲಿ 10.9ಮಿ.ಮೀ, ತುರುವನೂರು 12.6 ಮಿ.ಮೀ, ಐನಹಳ್ಳಿ 9.2 ಮಿ.ಮೀ, ಹಿರೇಗುಂಟನೂರು 8.7 ಮಿ.ಮೀ, ಸಿರಿಗೆರೆ 26.2 ಮಿ.ಮೀ, ಭರಮಸಾಗರದಲ್ಲಿ 35 ಮಿ.ಮೀ ಮಳೆಯಾಗಿದೆ.

Advertisement
Advertisement

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 46.8ಮಿ.ಮೀ, ಬಾಗೂರಿನಲ್ಲಿ 3.5 ಮಿ.ಮೀ, ಮಾಡದಕೆರೆಯಲ್ಲಿ 40 ಮಿ.ಮೀ, ಮತ್ತೋಡಿನಲ್ಲಿ 10.4ಮಿ.ಮೀ ಹಾಗೂ ಶ್ರೀರಾಂಪುರದಲ್ಲಿ 30.2 ಮಿ.ಮೀ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 1.6ಮಿ.ಮೀ, ರಾಮಗಿರಿಯಲ್ಲಿ 5.4ಮಿ.ಮೀ, ಚಿಕ್ಕಜಾಜೂರಿನಲ್ಲಿ 10.8 ಮಿ.ಮೀ, ಬಿ.ದುರ್ಗ 8.2 ಮಿ.ಮೀ, ಹೆಚ್.ಡಿ.ಪುರದಲ್ಲಿ 12.2 ಮಿ.ಮೀ, ತಾಳ್ಯ 3 ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 28.9 ಮಿ.ಮೀ, ಪರಶುರಾಂಪುರ 32.8 ಮಿ.ಮೀ, ನಾಯಕನಹಟ್ಟಿ 29.2 ಮಿ.ಮೀ, ತಳಕು 21.4 ಮಿ.ಮೀ, ಡಿ.ಮರಿಕುಂಟೆಯಲ್ಲಿ 20.2 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮುರಿನಲ್ಲಿ 23 ಮಿ.ಮೀ, ರಾಯಾಪುರ 7.8 ಮಿ.ಮೀ, ಬಿ.ಜಿ.ಕೆರೆ 37 ಮಿ.ಮೀ, ರಾಂಪುರ 2.2 ಮಿ.ಮೀ, ದೇವಸಮುದ್ರದಲ್ಲಿ 4 ಮಿ.ಮೀ ಮಳೆಯಾಗಿದೆ.

12 ಮನೆಗಳು ಭಾಗಶಃ ಹಾನಿ: ಭಾನುವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಭಾಗಶಃ 12 ಮನೆಗಳು ಹಾಗೂ 5.53 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ ಭಾಗಶಃ 1 ಮನೆಹಾನಿಯಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 1 ಭಾಗಶಃ ಮನೆ ಹಾನಿ, ಹೊಸದುರ್ಗ ತಾಲ್ಲೂಕಿನಲ್ಲಿ ಭಾಗಶಃ 6 ಮನೆ ಹಾನಿ ಹಾಗೂ 0.35 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಹಿರಿಯೂರು ತಾಲ್ಲೂಕಿನಲ್ಲಿ ಭಾಗಶಃ 3 ಮನೆಹಾನಿ ಹಾಗೂ 2.18 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಮನೆಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Advertisement
Tags :
Advertisement