Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕಳ್ಳತನವಾದ 1.57 ಕೋಟಿ ಮೌಲ್ಯದ ವಸ್ತುಗಳನ್ನು ಹಸ್ತಾಂತರ ಮಾಡಿದ ಚಿತ್ರದುರ್ಗ ಜಿಲ್ಲಾ ಪೊಲೀಸರು : ವಾರಸುದಾರರಿಗೆ ಏನೇನು ಕೊಟ್ಟರು ? ಇಲ್ಲಿದೆ ಮಾಹಿತಿ...

05:30 PM Jan 05, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.05 :ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಳ್ಳತನ, ಮೋಸ, ವಂಚನೆ ಪ್ರಕರಣಗಳ ತನಿಖೆಯಿಂದ ವಶಪಡಿಸಿಕೊಳ್ಳಲಾದ ಸ್ವತ್ತುಗಳನ್ನು ವಾರಸುದಾರರಿಗೆ ಮರಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ ಹೇಳಿದರು.

Advertisement

Advertisement

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ
ಸ್ವತ್ತುಗಳ ಹಸ್ತಾಂತರದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ 2023 ನೇ ಸಾಲಿನಲ್ಲಿ ಒಟ್ಟು 68 ಪ್ರಕರಣಗಳಲ್ಲಿ ರೂ 1,57,57,299/-
( ಒಂದು ಕೋಟಿ ಐವತ್ತೇಳು ಲಕ್ಷದ ಐವತ್ತೇಳು ಸಾವಿರದ ಎರಡುನೂರ ತೊಂಬತ್ತೊಂಬತ್ತು ರೂಪಾಯಿ) ಮೌಲ್ಯದ ನಗದು, ಬಂಗಾರ ಮತ್ತು ಬೆಳ್ಳಿ ಆಭರಣಗಳು, ವಾಹನಗಳು, ಮೊಬೈಲ್ ಗಳು ಹಾಗೂ ಇತರೆ ವಸ್ತುಗಳು ಮತ್ತು ಸಿ.ಇ.ಎನ್. ಪೊಲೀಸ್ ಠಾಣೆಯ ಸಿ.ಇ.ಐ.ಆರ್. ಪೋರ್ಟಲ್ ಸಹಾಯದಿಂದ 6,24,000/- ರೂಪಾಯಿ ಮೌಲ್ಯದ 52 ಮೊಬೈಲ್ ಗಳನ್ನು ಆರೋಪಿತರಿಂದ ವಶಪಡಿಸಿಕೊಂಡು ಸಂಬಂಧಪಟ್ಟ ದೂರುದಾರರಿಗೆ ಹಸ್ತಾಂತರಿಸಿದರು.

ಚಿತ್ರದುರ್ಗ ಉಪವಿಭಾಗದ 22 ಪ್ರಕರಣಗಳ ಒಟ್ಟು ರೂ.
1,08,48,299/-

ಹಿರಿಯೂರು ಉಪವಿಭಾಗದ 16 ಪ್ರಕರಣಗಳ ಒಟ್ಟು ರೂ.24,95,000,

ಚಳ್ಳಕೆರೆ ಉಪವಿಭಾಗ 30 ಪ್ರಕರಣಗಳ ಒಟ್ಟು ರೂ. 24,14,000/

ಮತ್ತು ಸೈಬರ್ ಪೊಲೀಸ್ ಠಾಣೆಯ 52  ಮೊಬೈಲ್‌ಗಳ ಒಟ್ಟು ರೂ.6,24,000/- ಸೇರಿದಂತೆ ಒಟ್ಟು ರೂ.
1,63,81,299/- ಮೌಲ್ಯದ ಬೆಳ್ಳಿ, ಬಂಗಾರ, ನಗದು ಹಣ,  ದ್ವಿಚಕ್ರ ವಾಹನ, 4 ಚಕ್ರ ವಾಹನ, ಲಾರಿ ಮತ್ತು ಮೊಬೈಲ್ ಗಳನ್ನು ಹಸ್ತಾಂತರಿಸಲಾಯಿತು.

ಜಿಲ್ಲೆಯ ಎಲ್ಲ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮದಿಂದ ಕಡಿಮೆ ಅವಧಿಯಲ್ಲೇ ಪ್ರಕರಣಗಳ ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸಿದ್ದಲ್ಲದೆ ಕಳುವಾದ ವಸ್ತುಗಳು, ನಗದು, ಆಭರಣಗಳನ್ನು ಜನರಿಗೆ ಹಸ್ತಾಂತರಿಸಲಾಗಿದೆ. ಪೊಲೀಸ್‌ ಇಲಾಖೆ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ಸಂಬಂಧ ಈ ರೀತಿ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿ ಕೊಳ್ಳಲಾದ ಸ್ವತ್ತುಗಳನ್ನು ಜನರಿಗೆ ಹಸ್ತಾಂತರಿಸಲಾಗಿದೆ ಎಂದು ಎಸ್. ಪಿ. ತಿಳಿಸಿದರು.

ಈ ಸಂದರ್ಭದಲ್ಲಿ  ಪೊಲೀಸ್ ಅಧೀಕ್ಷಕರಾದ ಧರ್ಮೆಂದರ್ ಕುಮಾರ್ ಮೀನಾ,  ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಜೆ.ಕುಮಾರಸ್ವಾಮಿ, ಅಬ್ದುಲ್ ಖಾದರ್ ಹಾಗೂ ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಉಪವಿಭಾಗದ ಉಪಾಧೀಕ್ಷಕರುಗಳಾದ ಹೆಚ್.ಆರ್ ಅನಿಲ್ ಕುಮಾರ್. ರಾಜಣ್ಣ, ಶ್ರೀಮತಿ ಚೈತ್ರಾ.ಎಸ್. ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಉಪಾಧಿಕ್ಷಕರಾದ ಗಣೇಶ್  ಜಿಲ್ಲೆಯ ಸಂಬಂಧಪಟ್ಟ ಠಾಣೆಗಳ ಸಿಪಿಐ/ಪಿಐ & ಪಿಎಸ್‌ಐಗಳು ಹಾಜರಿದ್ದರು.

Advertisement
Tags :
1.57 ಕೋಟಿchitradurgaChitradurga district policehanded overHere is the informationstolen itemsworth 1.57 croresಕಳ್ಳತನಚಿತ್ರದುರ್ಗಚಿತ್ರದುರ್ಗ ಜಿಲ್ಲಾ ಪೊಲೀಸರುವಸ್ತುಗಳನ್ನು ಹಸ್ತಾಂತರ
Advertisement
Next Article